28ರಂದು ಕುಳಗಟ್ಟೆಯಲ್ಲಿ ರಾಯಣ್ಣ ಕಂಚಿನ ಪುತ್ಥಳಿ ಅನಾವರಣ, ಕನಕ ಜಯಂತ್ಯುತ್ಸವ

KannadaprabhaNewsNetwork | Published : Dec 26, 2024 1:00 AM

ಸಾರಾಂಶ

ತಾಲೂಕಿನ ಕುಳಗಟ್ಟೆ ಗ್ರಾಮದಲ್ಲಿ ಡಿ.28ರಂದು ಬೆಳಗ್ಗೆ 11 ಗಂಟೆಗೆ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನ ಕಂಚಿನ ಪುತ್ಥಳಿ ಅನಾವರಣ ಹಾಗೂ ಕನಕದಾಸ ಜಯಂತಿ ಆಚರಿಸಲಾಗುವುದು ಎಂದು ಕುಳಗಟ್ಟೆ ಗ್ರಾಮದ ರಾಯಣ್ಣನ ಕಂಚಿನ ಪುತ್ಥಳಿ ಅನಾವರಣ ಸಮಿತಿ ಹೊನ್ನಾಳಿಯಲ್ಲಿ ತಿಳಿಸಿದೆ.

- 8 ಲಕ್ಷ ವೆಚ್ಚದ 8.6 ಅಡಿ ಎತ್ತರದ ಕಂಚಿನ ಪುತ್ಥಳಿ - - - ಹೊನ್ನಾಳಿ: ತಾಲೂಕಿನ ಕುಳಗಟ್ಟೆ ಗ್ರಾಮದಲ್ಲಿ ಡಿ.28ರಂದು ಬೆಳಗ್ಗೆ 11 ಗಂಟೆಗೆ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನ ಕಂಚಿನ ಪುತ್ಥಳಿ ಅನಾವರಣ ಹಾಗೂ ಕನಕದಾಸ ಜಯಂತಿ ಆಚರಿಸಲಾಗುವುದು ಎಂದು ಕುಳಗಟ್ಟೆ ಗ್ರಾಮದ ರಾಯಣ್ಣನ ಕಂಚಿನ ಪುತ್ಥಳಿ ಅನಾವರಣ ಸಮಿತಿ ತಿಳಿಸಿದೆ.

8.6 ಅಡಿ ಎತ್ತರದ ಕಂಚಿನ ಪುತ್ಥಳಿಯನ್ನು ಬೆಳಗಾವಿ ಜಿಲ್ಲೆಯ ಸವದತ್ತಿಯ ಶಿಲ್ಪಿ ನಂದಕುಮಾರ ಚಂದರಗಿ ಅವರು ನಿರ್ಮಿಸಿದ್ದಾರೆ. ಈ ಪುತ್ಥಳಿಗೆ ₹8 ಲಕ್ಷ ವೆಚ್ಚ ಮಾಡಲಾಗಿದೆ. ಅನಾವರಣ ಕಾರ್ಯಕ್ರಮದ ಸಾನಿಧ್ಯವನ್ನು ಕನಕ ಗುರುಪೀಠದ ಹೊಸದುರ್ಗ ಶಾಖಾಮಠದ ಶ್ರೀ ಈಶ್ವರಾನಂದಪುರಿ ಸ್ವಾಮೀಜಿ ವಹಿಸಲಿದ್ದಾರೆ. ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಚ್.ಬಿ. ಮಂಜಪ್ಪ ಸಮಾರಂಭ ಉದ್ಘಾಟಿಸಲಿದ್ದಾರೆ. ಕುಳಗಟ್ಟೆ ಗ್ರಾಮದ ನಿವೃತ್ತ ಕೃಷಿ ಅಧಿಕಾರಿ ಬಿ.ರಾಮಪ್ಪ ಅಧ್ಯಕ್ಷತೆ ವಹಿಸಲಿದ್ದಾರೆ.

ಅತಿಥಿಗಳಾಗಿ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್, ಸಂಸದೆ ಡಾ. ಪ್ರಭಾ ಮಲ್ಲಿಕಾರ್ಜುನ್, ಶಾಸಕ ಡಿ.ಜಿ. ಶಾಂತನಗೌಡ, ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ, ತಾಲೂಕು ಕುರುಬ ಸಮಾಜದ ಅಧ್ಯಕ್ಷ ಎಂ.ಸಿ. ಮೋಹನ್ ನೆಲಹೊನ್ನೆ, ಇನ್‌ಸೈಟ್ ಐಎಎಸ್ ಸಂಸ್ಥಾಪಕ ಜಿ.ಬಿ. ವಿನಯ್‌ಕುಮಾರ್, ಮುಖಂಡರಾದ ಎ.ಆರ್. ಚಂದ್ರಶೇಖರ್, ಬಿ. ಸಿದ್ದಪ್ಪ, ಎಚ್.ಎ. ಉಮಾಪತಿ, ಎಚ್.ಬಿ. ಶಿವಯೋಗಿ, ಕೆ.ವಿ. ಚನ್ನಪ್ಪ, ಎಂ.ಆರ್.ಮಹೇಶ್, ಎಂ.ಎಸ್. ಫಾಲಾಕ್ಷಪ್ಪ ಇನ್ನಿತರ ಗಣ್ಯರು ಭಾಗವಹಿಸಲಿದ್ದಾರೆ.

ತಾಲೂಕಿನ ಕುರುಬ ಸಮಾಜದ ಪದಾಧಿಕಾರಿಗಳು, ಸಮಾಜಗಳ ಬಂಧುಗಳು ಹಾಗೂ ಗ್ರಾಮದ ಎಸ್‌ಡಿಎಂಸಿ, ವಿಎಸ್‌ಎಸ್‌ಎನ್, ಹಾಲು ಉತ್ಪಾದಕರ ಸಂಘದ ಪದಾಧಿಕಾರಿಗಳು ಕಾರ್ಯಕ್ರಮಕ್ಕೆ ಆಗಮಿಸಬೇಕು ಎಂದು ಕಂಚಿನ ಪುತ್ಥಳಿ ಅನಾವರಣ ಸಮಿತಿ ಮುಖಂಡರು ಮನವಿ ಮಾಡಿದ್ದಾರೆ.

- - - -24ಎಚ್.ಎಲ್.ಐ2:

ಕುಳಗಟ್ಟೆಯಲ್ಲಿ ಸ್ಥಾಪಿಸಲಾಗುವ ಸಂಗೊಳ್ಳಿ ರಾಯಣ್ಣನ ಕಂಚಿನ ಪುತ್ಥಳಿ.

Share this article