28ಕ್ಕೆ ಸಾಹಿತಿ ಕಡಕೋಳಗೆ ಮಹಲಿಂಗ ರಂಗ ಪ್ರಶಸ್ತಿ ಪ್ರದಾನಲ್

KannadaprabhaNewsNetwork | Published : Nov 26, 2024 12:46 AM

ಸಾರಾಂಶ

ದಾವಣಗೆರೆ: ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಘಟಕ ಹಾಗೂ ಶ್ರೀಮತಿ ಗೌರಮ್ಮ ಮೋತಿ ಪಿ.ರಾಮರಾವ್‌ ಚಾರಿಟಬಲ್ ಟ್ರಸ್ಟ್‌ನಿಂದ ನ.28ರಂದು ನಗರದ ಕುವೆಂಪು ಕನ್ನಡ ಭವನದಲ್ಲಿ 2024ನೇ ಸಾಲಿನ ಮಹಲಿಂಗ ರಂಗ ಜಿಲ್ಲಾ ಸಾಹಿತ್ಯ ಪ್ರಶಸ್ತಿ, ಜಿಲ್ಲಾ ಮಟ್ಟದ ಗ್ರಾಮೀಣ ಸಿರಿ ಹಾಗೂ ನಗರ ಸಿರಿ ಪ್ರಶಸ್ತಿ ಪ್ರದಾನ ಮತ್ತು 13ನೇ ಕನ್ನಡ ಸಾಹಿತ್ಯ ಸಮ್ಮೇಳನದ ನವೀಕೃತ ಸ್ಮರಣ ಸಂಚಿಕೆ ಸಂಗಮ ಸಿರಿ ಲೋಕಾರ್ಪಣೆ ಸಮಾರಂಭ ನಡೆಯಲಿದೆ.

ದಾವಣಗೆರೆ: ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಘಟಕ ಹಾಗೂ ಶ್ರೀಮತಿ ಗೌರಮ್ಮ ಮೋತಿ ಪಿ.ರಾಮರಾವ್‌ ಚಾರಿಟಬಲ್ ಟ್ರಸ್ಟ್‌ನಿಂದ ನ.28ರಂದು ನಗರದ ಕುವೆಂಪು ಕನ್ನಡ ಭವನದಲ್ಲಿ 2024ನೇ ಸಾಲಿನ ಮಹಲಿಂಗ ರಂಗ ಜಿಲ್ಲಾ ಸಾಹಿತ್ಯ ಪ್ರಶಸ್ತಿ, ಜಿಲ್ಲಾ ಮಟ್ಟದ ಗ್ರಾಮೀಣ ಸಿರಿ ಹಾಗೂ ನಗರ ಸಿರಿ ಪ್ರಶಸ್ತಿ ಪ್ರದಾನ ಮತ್ತು 13ನೇ ಕನ್ನಡ ಸಾಹಿತ್ಯ ಸಮ್ಮೇಳನದ ನವೀಕೃತ ಸ್ಮರಣ ಸಂಚಿಕೆ ಸಂಗಮ ಸಿರಿ ಲೋಕಾರ್ಪಣೆ ಸಮಾರಂಭ ನಡೆಯಲಿದೆ.

ಈ ಕುರಿತು ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕಸಾಪ ಜಿಲ್ಲಾಧ್ಯಕ್ಷ ಬಿ.ವಾಮದೇವಪ್ಪ, ಅಂದು ಬೆಳಿಗ್ಗೆ 11ಕ್ಕೆ ಬಿ.ವಾಮದೇವಪ್ಪ ಅಧ್ಯಕ್ಷತೆಯಲ್ಲಿ ಹಿರಿಯ ಸಾಹಿತಿ, ಚಿಂತಕ ಕುಂ.ವೀರಭದ್ರಪ್ಪ ಸಮಾರಂಭ ಉದ್ಘಾಟಿಸಿ, ಪ್ರಶಸ್ತಿ ಪ್ರದಾನ ಮಾಡುವರು. ಮುಖ್ಯ ಅತಿಥಿಯಾಗಿ ಶ್ರೀಮತಿ ಗೌರಮ್ಮ ಮೋತಿ ಪಿ.ರಾಮರಾವ್‌ ಚಾರಿಟಬಲ್ ಟ್ರಸ್ಟ್‌ನ ಮೋತಿ ಆರ್.ಪರಮೇಶ್ವರರಾವ್‌ ಭಾಗವಹಿಸುವರು ಎಂದು ತಿಳಿಸಿದರು. ಹಿರಿಯ ರಂಗಕರ್ಮಿ, ಸಾಹಿತಿ, ದಾವಣಗೆರೆ ವೃತ್ತಿ ರಂಗಭೂಮಿ ರಂಗಾಯಣ ನಿರ್ದೇಶಕ ಮಲ್ಲಿಕಾರ್ಜುನ ಕಡಕೋಳರಿಗೆ ಮಹಲಿಂಗ ರಂಗ ಸಾಹಿತ್ಯ ಪ್ರಶಸ್ತಿ-2024 ಪ್ರದಾನ ಮಾಡಿ, ಗೌರವಿಸಲಾಗುವುದು. ಹಿರಿಯ ಪತ್ರಕರ್ತ, ಸಾಹಿತಿ ಬಾ.ಮ.ಬಸವರಾಜಯ್ಯ ಅಭಿನಂದನಾ ನುಡಿಗಳನ್ನಾಡುವರು. ಹಿರಿಯ ಸಾಹಿತಿಗಳಾದ ಡಾ.ಎಚ್.ಎ.ಭಿಕ್ಷಾವರ್ತಿಮಠ, ಎನ್.ಟಿ.ಎರ್ರಿಸ್ವಾಮಿ, ಪ್ರೊ.ಸಿ.ವಿ.ಪಾಟೀಲ ಗೌರವ ಉಪಸ್ಥಿತರಿರಲಿದ್ದು, ಶರಿಧಿ ಕಲಾ ಸಾಂಸ್ಕೃತಿಕ ಸಂಸ್ಥೆಯ ವಿದ್ಯಾರ್ಥಿಗಳಿಂದ ನಾಡಗೀತೆ, ಗೀತ ಗಾಯನವಿದೆ ಎಂದರು.

ಗ್ರಾಮೀಣ ಪ್ರದೇಶಗಳಲ್ಲಿ, ನಗರ ಮಟ್ಟದಲ್ಲಿ ಕನ್ನಡ ನಾಡು ನುಡಿಗಾಗಿ ಸೇವೆ ಸಲ್ಲಿಸುತ್ತಿರುವ ಸಾಧಕರಿಗೆ ನೀಡಲಾಗುವ 2024 ರ ಸಾಲಿನ "ಗ್ರಾಮೀಣ ಸಿರಿ ", "ನಗರ ಸಿರಿ " ಪ್ರಶಸ್ತಿಗಳನ್ನು ದಾವಣಗೆರೆ ತಾಲೂಕಿನ ಬಿ.ಕೆ.ಜಯಪ್ರಕಾಶ ಅಗಸನಕಟ್ಟೆ, ಹಿರೇತೊಗಲೇರಿಯ ಜಿ.ಸಿ.ಮಂಗಳ, ಹರಿಹರ ತಾಲೂಕಿನ ಕೆ.ಪಂಚಾಕ್ಷರಿ ಕಮಲಾಪುರ, ಕೊಂಡಜ್ಜಿ ಕೆ‌.ಟಿ.ಗೀತಾ, ಚನ್ನಗಿರಿ ತಾ. ಹೊದಿಗೆರೆ ಗ್ರಾಮದ ಪ್ರಭಾಕರ ಹೊದಿಗೆರೆ, ಸಂತೇಬೆನ್ನೂರಿನ ಸುನೀತ ರಾಜುರಿಗೆ ನೀಡಿ, ಗೌರವಿಸಲಾಗುವುದು ಎಂದು ಮಾಹಿತಿ ನೀಡಿದರು.

ಜಗಳೂರು ತಾ.ಬಸವನಕೋಟೆಯ ನಾಗೇಶ ಶಾಸ್ತ್ರಿಗಳು, ತೋರಣಗಟ್ಟೆ ಕಾಟಮ್ಮ, ಹೊನ್ನಾಳಿ ತಾ. ಕೂಲಂಬಿ ಬಿ.ಚಂದ್ರಶೇಖರಾಚಾರಿ, ಕತ್ತಿಗೆ ಎ.ಸಿ.ಚಂದ್ರಕಲ, ನ್ಯಾಮತಿ ತಾ. ಚೀಲೂರು ಪುರವಂತರ ಪರಮೇಶ್ವರಪ್ಪ, ಮಲ್ಲಿಗೇನಹಳ್ಳಿ ಸಿದ್ದಮ್ಮ ಭುವನೇಶ್ವರಪ್ಪ ಗ್ರಾಮೀಣ ಸಿರಿ-2024ರ ಪ್ರಶಸ್ತಿಗೆ ಪಾತ್ರರಾಗಿದ್ದಾರೆ. "ನಗರ ಸಿರಿ " ಪ್ರಶಸ್ತಿಗೆ ಬಸಾಪುರದ ಬಸವ ಕಲಾ ಲೋಕದ ಸಂಗೀತ ಮತ್ತು ಜಾನಪದ ಕಲಾವಿದ ಎಚ್.ಶಶಿಧರ ಹಾಗೂ ಸಂಗೀತ ಕ್ಷೇತ್ರದಿಂದ ಶರಧಿ ಕಲಾ ಸಾಂಸ್ಕೃತಿಕ ಸಂಸ್ಥೆಯ ಸಂಗೀತ ಶಿಕ್ಷಕಿ ವಿದುಷಿ ಶೋಭಾ ರಂಗನಾಥ ಭಾಜನರಾಗಿದ್ದಾರೆ ಎಂದು ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಕಸಾಪ ಜಿಲ್ಲಾ ಗೌರವ ಕಾರ್ಯದರ್ಶಿ ಬಿ.ದಿಳ್ಯಪ್ಪ, ಗೌರವ ಕೋಶಾಧ್ಯಕ್ಷ ಕೆ.ರಾಘವೇಂದ್ರ ನಾಯರಿ, ಎನ್.ಎಸ್.ರಾಜು, ಎಂ.ಎಸ್.ಮಲ್ಲಮ್ಮ, ರುದ್ರಾಕ್ಷಿಬಾಯಿ ಪುಟ್ಟಾನಾಯ್ಕ ಮತ್ತಿತರರಿದ್ದರು.

Share this article