ಕನ್ನಡಪ್ರಭ ವಾರ್ತೆ ಮಂಡ್ಯ
ರಾಜ್ಯದ ಎಲ್ಲ ಸಮುದಾಯ ಪ್ರಗತಿಪರ ಸಂಘಟನೆಗಳು, ವಿಚಾರವಂತರು, ಕುವೆಂಪು ಅನುಯಾಯಿಗಳು, ನಾಗರಿಕರನ್ನೊಳಗೊಂಡ ಸ್ವಾಗತ ಸಮಿತಿ ರಚಿಸಿ ಮಹಾ ಅಧಿವೇಶನಕ್ಕೆ ಸಿದ್ಧತೆ ನಡೆಯುತ್ತಿದೆ. ನಾಡಿನ ಎಲ್ಲ ಜನರು ಅಧಿವೇಶನದಲ್ಲಿ ಭಾಗವಹಿಸಬೇಕು. ಈ ನಿಟ್ಟಿನಲ್ಲಿ ಆನ್‌ಲೈನ್ ನೋಂದಣಿ ಪ್ರಕ್ರಿಯೆ ಆರಂಭಗೊಂಡಿದೆ ಎಂದರು.
ಬುದ್ಧ, ಬಸವ, ಅಂಬೇಡ್ಕರ್ ಆಶಯಗಳನ್ನೊಳಗೊಂಡ ಕುವೆಂಪು ಅವರ ಪಂಚತತ್ವಗಳೇ ವಿಶ್ವಮಾನವ ಧರ್ಮವಾಗಿದೆ. ಕಳೆದ ಸೆಪ್ಟೆಂಬರ್ ಮಾಹೆಯಲ್ಲಿ ನಡೆದ ಸಾಮಾಜಿಕ ಸಮೀಕ್ಷೆಯಲ್ಲಿ ಖ್ಯಾತ ಸಂಗೀತ ನಿರ್ದೇಶಕ ಹಂಸಲೇಖ ಸೇರಿದಂತೆ ೫೦೦ಕ್ಕೂ ಹೆಚ್ಚು ಜನ ಧರ್ಮ ಕಾಲಂನಲ್ಲಿ ವಿಶ್ವಮಾನವ ಧರ್ಮ ಎಂದು ನಮೂದಿಸಿದ್ದಾರೆ ಎಂದು ನುಡಿದರು.ಪತ್ರಕರ್ತ ಚಂದ್ರಶೇಖರ್ ದ.ಕೋ.ಹಳ್ಳಿ ಮಾತನಾಡಿ, ಯಾಚನಹಳ್ಳಿಯ ಶ್ರೀರಾಮಕೃಷ್ಣ ಸೇವಾ ಕೇಂದ್ರದಲ್ಲಿ ಕುವೆಂಪು ಅವರ ಚಿತಾಭಸ್ಮವನ್ನು ಸಂರಕ್ಷಿಸಲಾಗುತ್ತಿದೆ. ಸರ್ಕಾರದ ೧.೫೦ ಕೋಟಿ ರು. ಅನುದಾನದಿಂದ ಸ್ಮಾರಕ ನಿರ್ಮಾಣವಾಗುತ್ತಿದೆ. ಕುವೆಂಪು ಅವರು ಮೈಸೂರಿಗೆ ಹತ್ತಿರದ ಸಂಪರ್ಕ ಹೊಂದಿದ್ದರು. ಮಂಡ್ಯ ಜಿಲ್ಲೆಯ ಜನ ಕುವೆಂಪು ಅವರನ್ನು ಹೆಚ್ಚು ಹಚ್ಚಿಕೊಂಡಿದ್ದರು ಆದ ಕಾರಣ ಹೆಚ್ಚಿನ ಕುವೆಂಪು ಅಭಿಮಾನಿಗಳು ಮಹಾಅವೇಶನದಲ್ಲಿ ಭಾಗವಹಿಸುವಂತೆ ಮನವಿ ಮಾಡಿದರು.
ಗೋಷ್ಠಿಯಲ್ಲಿ ಕೆ.ಮಾಯಿಗೌಡ, ಎಂ.ವಿ.ಕೃಷ್ಣ, ಅಣ್ಣಯ್ಯ, ಟಿ.ಡಿ.ನಾಗರಾಜು ಇತರರಿದ್ದರು.ರಾಜ್ಯ ಮಟ್ಟದ ಕ್ರಿಕೆಟ್: ಮಂಡ್ಯ ವೈದ್ಯರ ತಂಡಕ್ಕೆ ಜಯ
ಕನ್ನಡಪ್ರಭ ವಾರ್ತೆ ಮಂಡ್ಯಹುಬ್ಬಳ್ಳಿ ನಗರದಲ್ಲಿ ಭಾನುವಾರ ನಡೆದ 2025ನೇ ಸಾಲಿನ ರಾಜ್ಯ ಮಟ್ಟದ ವೈದ್ಯರ ಕ್ರಿಕೆಟ್ ಪಂದ್ಯಾವಳಿಯಲ್ಲಿ ಮಂಡ್ಯ ವೈದ್ಯರ ತಂಡ ಚಾಂಪಿಯನ್ ಆಗಿ ಹೊರಹೊಮ್ಮಿತು.
ಮಂಡ್ಯ ತಂಡವನ್ನು ಮಂಡ್ಯ ವೈದ್ಯಕೀಯ ಕಾಲೇಜಿನ ಡಾ.ಮೋಹನ್, ತ್ರಿನೇತ್ರ ಕಣ್ಣಿನ ಆಸ್ಪತ್ರೆಯ ಡಾ.ಅವಿನಾಶ್, ಡಾ.ಶಶಾಂಕ್, ಡಾ.ಭರತ್, ಡಾ.ವಿವೇಕ್, ಡಾ.ಸುನಿಲ್, ಡಾ.ಕಿರಣ್, ಡಾ.ತೇಜಸ್ವಿ, ಡಾ.ಪ್ರವೀಣ್, ಡಾ.ಕಾರ್ತಿಕ್, ಡಾ.ಶ್ರೀನಿಧಿ, ಡಾ.ನಕುಲ್, ಡಾ.ಕೀರ್ತಿ ಸಾಗರ್ ಹಾಗೂ ಡಾ. ಸಚಿನ್ ಪ್ರತಿನಿಧಿಸಿದ್ದರು. ಪಂದ್ಯಾವಳಿಯಲ್ಲಿ ರಾಜ್ಯದಾದ್ಯಂತ ಒಟ್ಟು 32 ವೈದ್ಯರ ತಂಡಗಳು ಭಾಗವಹಿಸಿದ್ದವು. ವಿಜೇತ ಮಂಡ್ಯ ವೈದ್ಯರ ತಂಡಕ್ಕೆ ಕೇಂದ್ರ ಸಚಿವರಾದ ಪ್ರಹ್ಲಾದ್ ಜೋಶಿ ಪಾರಿತೋಷಕ ಹಾಗೂ ಬಹುಮಾನ ವಿತರಿಸಿದರು.