ಮಾದೇಶ್ವರ ಬೆಟ್ಟ ಪ್ರಾಧಿಕಾರ ಆಯೋನೆ । ಹಸಿರು ಚಪ್ಪರ, ತೋರಣಗಳಿಂದ ಸಿಂಗಾರ । ಮಹಾಜ್ಯೋತಿ ಉತ್ಸವಕ್ಕೆ ದೀಪದಗಿರಿ ಒಡ್ಡುವಿನಲ್ಲಿ ಸಕಲ ಸಿದ್ಧತೆ
ಕಾರ್ತಿಕ ಮಾಸದ ಕಡೆ ಸೋಮವಾರ ಹಿನ್ನೆಲೆಯಲ್ಲಿ ಹಬ್ಬದ ಆಚರಣೆಗೆ ದೀಪದಗಿರಿ ಒಡ್ಡುವಿನಲ್ಲಿ ಸಕಲ ಸಿದ್ಧತೆಗಳು ಭರದಿಂದ ಸಾಗಿವೆ.
ಹನೂರು ತಾಲೂಕಿನ ಮಲೆ ಮಹದೇಶ್ವರ ಬೆಟ್ಟ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ವತಿಯಿಂದ ನಡೆಯುತ್ತಿರುವ ಸೋಮವಾರ ಕಡೆ ಕಾರ್ತಿಕ ಮಾಸದ ಹಿನ್ನೆಲೆಯಲ್ಲಿ ದೀಪದಗಿರಿ ಒಡ್ದು ಸ್ಥಳದಲ್ಲಿ ಸಕಲ ಸಿದ್ಧತೆಯೊಂದಿಗೆ ಹಸಿರು ಚಪ್ಪರ, ತೋರಣಗಳಿಂದ ಸಿಂಗರಿಸಿ ಸೋಮವಾರ ರಾತ್ರಿ ನಡೆಯುವ ಮಹಾಜ್ಯೋತಿ ಉತ್ಸವಕ್ಕೆ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರ ಸಕಲ ಸಿದ್ಧತೆಯನ್ನು ಕೈಗೊಂಡಿದೆ.ನಾಲ್ಕನೇ ಕಡೆ ಕಾರ್ತಿಕ ಮಾಸ ವಿಶೇಷ:
ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರ ಜತೆಗೆ ಸೋಮವಾರ ನಡೆಯುವ ಈ ಮಹಾಜ್ಯೋತಿಗೆ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಎಇ ರಘು ಸ್ಥಳ ಪರಿಶೀಲನೆ ನಡೆಸಿ ಸಕಲ ಸಿದ್ಧತೆಯ ಪರಿಶೀಲನೆ ನಡೆಸಿದ್ದಾರೆ. ಜತೆಗೆ ರಾಜ್ಯದ ವಿವಿಧ ಭಾಗಗಳಿಂದ ಈ ಮಹಾಜೋತಿಯನ್ನು ಕಣ್ತುಂಬಿಕೊಳ್ಳಲು ಭಕ್ತ ಸಾಗರವೇ ಹರಿದು ಬರುವ ನಿರೀಕ್ಷೆಯಿದೆ.
ತಾಲೂಕಿನ ಮಲೆ ಮಾದೇಶ್ವರ ಬೆಟ್ಟದಲ್ಲಿ ಕಡೆ ಕಾರ್ತಿಕ ಮಾಸದ ಸೋಮವಾರ ವಿಶೇಷ ಪೂಜೆ ಪ್ರಯುಕ್ತ ಬೆಳಿಗ್ಗೆಯಿಂದಲೇ ಮಾದೇಶ್ವರನಿಗೆ ಬಿಲ್ವಾರ್ಚನೆ, ದೂಪದ ಸೇವೆ, ಎಣ್ಣೆ ಮಜ್ಜನ ಸೇವೆ ಹಾಗೂ ಮಹಾಮಂಗಳಾರತಿಯೊಂದಿಗೆ ಧಾರ್ಮಿಕ ವಿಧಿ ವಿಧಾನಗಳೊಂದಿಗೆ ಸರದಿ ಬೇಡಗಂಪಣ ಅರ್ಚಕರಿಂದ ಪೂಜಾ ಕಾರ್ಯಕ್ರಮಗಳು ಸಂಭ್ರಮ ಸಡಗರೊಂದಿಗೆ ನಡೆಯಲಿವೆ.
ಎಇ ರಘು, ಕಾರ್ಯದರ್ಶಿ, ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರ, ಮಲೆ ಮಹದೇಶ್ವರ ಬೆಟ್ಟ.