- 14ರಿಂದ 2 ದಿನ ಭಕ್ತರಿಗೆ ಪಾದುಕೆ ದರ್ಶನ ಅವಕಾಶ: ವಾಸುದೇವ ರಾಯ್ಕರ್ - - -
ಕನ್ನಡಪ್ರಭ ವಾರ್ತೆ ದಾವಣಗೆರೆಶ್ರೀ ಶಿರಿಡಿ ಸಾಯಿಬಾಬಾ ತಮ್ಮ ಜೀವಿತಾವದಿಯಲ್ಲಿ ಧರಿಸುತ್ತಿದ್ದ ಪಾದರಕ್ಷೆಗಳ ದರ್ಶನವನ್ನು ಏ.14 ಮತ್ತು 15ರಂದು ನಗರದ ಎಂಸಿಸಿ ಎ ಬ್ಲಾಕ್‌ನ ಶ್ರೀ ಶಿರಿಡಿ ಸಾಯಿ ಬಾಬಾ ಮಂದಿರದಲ್ಲಿ ಏರ್ಪಡಿಸಲಾಗಿದೆ ಎಂದು ಶಿರಿಡಿ ಶ್ರೀ ಸಾಯಿಬಾಬಾ ಮಂದಿರದ ಪಾದುಕಾ ಸೇವಾ ಸಮಿತಿ ಸಂಚಾಲಕ ವಾಸುದೇವ ರಾಯ್ಕರ್ ಹೇಳಿದರು.
ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಏ.13ರಂದು ಬಾಬಾ ಪಾದುಕೆಗಳು ದಾವಣಗೆರೆಗೆ ಆಗಮಿಸಲಿದ್ದು, ಎರಡು ದಿನಗಳ ಕಾಲ ಪಾದುಕೆ ದರ್ಶನಕ್ಕೆ ಅವಕಾಶ ಮಾಡಿಕೊಡಲಾಗಿದೆ ಎಂದರು.13ರಂದು ಸಂಜೆ 6.30 ಗಂಟೆಗೆ ಸುವರ್ಣ ರಥದಲ್ಲಿ ಬಾಬಾ ಅವರ ಮೂರ್ತಿ ಹಾಗೂ ಪಾದುಕೆ ನಗರಕ್ಕೆ ಆಗಮಿಸಲಿವೆ. ಇಲ್ಲಿನ ಶ್ರೀ ಜಯದೇವ ವೃತ್ತದಿಂದ ಎಂಸಿ ಕಾಲನಿ ಎ ಬ್ಲಾಕ್‌ನ ಶ್ರೀ ಶಿರಿಡಿ ಸಾಯಿಬಾಬಾ ಮಂದಿರದವರೆಗೂ ಬೃಹತ್ ಮೆರವಣಿಗೆ ನಡೆಯಲಿದೆ ಎಂದು ಹೇಳಿದರು.
14 ಮತ್ತು 15ರಂದು ಬೆಳಗ್ಗೆ 8ರಿಂದ ರಾತ್ರಿ 10 ಗಂಟೆವರೆಗೆ ನಗರದ ಎಂಸಿಸಿ ಎ ಬ್ಲಾಕ್‌ನ ಶ್ರೀ ಶಿರಿಡಿ ಸಾಯಿಬಾಬಾ ಮಂದಿರದಲ್ಲಿ ಬಾಬಾ ಪಾದುಕೆಗಳ ದರ್ಶನಕ್ಕೆ ಭಕ್ತರಿಗೆ ಅವಕಾಶ ಮಾಡಲಾಗಿದೆ. ಎರಡೂ ದಿನ ಮಧ್ಯಾಹ್ನ 12 ಗಂಟೆಗೆ ಆರತಿ, ಸಂಜೆ 6.30ಕ್ಕೆ ಸಂಜೆಯ ಆರತಿ ಇರುತ್ತದೆ. ಎರಡೂ ದಿನವೂ ಭಕ್ತರಿಗೆ ದಾಸೋಹ ಪ್ರಸಾದ ವ್ಯವಸ್ಥೆ ಇದೆ ಎಂದು ತಿಳಿಸಿದರು.ಶ್ರೀ ಸಾಯಿ ಟ್ರಸ್ಟ್ ಅಜೀವ ಅಧ್ಯಕ್ಷ ಶಾಸಕ ಡಾ.ಶಾಮನೂರು ಶಿವಶಂಕರಪ್ಪ, ಅಧ್ಯಕ್ಷ ಹಿರಿಯ ಉದ್ಯಮಿ ಎಸ್.ಎಸ್.ಗಣೇಶ್, ಎಲ್ಲ ಟ್ರಸ್ಟಿಗಳು ಭಾಗವಹಿಸುವರು. ಮುಖ್ಯ ಅತಿಥಿಗಳಾಗಿ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ, ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ ಮುಖ್ಯ ಅತಿಥಿಯಾಗಿ ಭಾಗವಹಿಸುವರು ಎಂದು ಮಾಹಿತಿ ನೀಡಿದರು.
ಪಾದುಕಾ ಸೇವಾ ಸಮಿತಿಯ ಡಾ. ಎಚ್.ಎಸ್. ಜಾಧವ್, ಪರಶುರಾಮ, ಜಿತೇಂದ್ರ, ಮಧುಸೂದನ, ರಾಜಶೇಖರ, ಶ್ರೀನಿವಾಸ, ತಿಪ್ಪೇಸ್ವಾಮಿ, ನಟರಾಜ ಇತರರು ಇದ್ದರು.- - -
-9ಕೆಡಿವಿಜಿ1:ಸಂಚಾಲಕ ವಾಸುದೇವ ರಾಯ್ಕರ್ ಸುದ್ದಿಗೋಷ್ಟಿಯಲ್ಲಿ ಕಾರ್ಯಕ್ರಮ ಕುರಿತು ಮಾಹಿತಿ ನೀಡಿದರು.