ಕನ್ನಡಪ್ರಭ ವಾರ್ತೆ ಹಲಗೂರು
ದಿ.ಲೀಲಾ ನಾಗರಾಜಪ್ಪನವರ ಪತ್ನಿ ನಾಗಸುಂದ್ರಮ್ಮ ದೇವರ ಭಾವಚಿತ್ರಕ್ಕೆ ಪುಷ್ಪಮಾಲೆ ಅರ್ಪಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿದರು.
ನಂತರ ಪ್ರಾಂಶುಪಾಲೆ ಎಚ್.ವಿ.ಶ್ವೇತಕುಮಾರಿ ಮಾತನಾಡಿ, ಶ್ರೀಕೃಷ್ಣ ಹುಟ್ಟಿದ ದಿನವನ್ನು ನಾವು ಗೋಕುಲಾಷ್ಠಮಿ ಅಥವಾ ಶ್ರೀಕೃಷ್ಣ ಜನ್ಮಾಷ್ಟಮಿ ಎಂದು ಆಚರಿಸುತ್ತೇವೆ. ಶ್ರೀಕೃಷ್ಣನು ಶ್ರಾವಣ ಮಾಸ ರೋಹಿಣಿ ನಕ್ಷತ್ರ ಕೃಷ್ಣ ಪಕ್ಷ ಅಷ್ಟಮಿಯ ದಿನದಿಂದು ಜನಿಸಿದರು. ಶಾಲೆಯಲ್ಲಿ ಪ್ರತಿ ವರ್ಷವೂ ಶ್ರೀಕೃಷ್ಣ ಜನ್ಮಾಷ್ಟಮಿಯನ್ನು ಆಚರಿಸುತ್ತಾ ಬಂದಿದ್ದೇವೆ ಎಂದರು.ಶಾಲೆ ಮಕ್ಕಳಿಗೆ ಕೃಷ್ಣ ಮತ್ತು ರಾಧೆ ವೇಷ ಧರಿಸುವ ಮೂಲಕ ದೇಶದ ಸಂಸ್ಕೃತಿ, ಧರ್ಮ, ಹಬ್ಬಗಳ ಆಚರಣೆ ಬಗ್ಗೆ ಈಗಿನಿಂದಲೇ ತಿಳುವಳಿಕೆ ನೀಡುವುದು ಇದರ ಉದ್ದೇಶವಾಗಿದೆ ಎಂದರು.
ಈ ವೇಳೆ ನಾಗಲಾಂಬ, ಮೇಲ್ವಿಚಾರಕಿ ಸರಸ್ವತಿ, ಶಿಕ್ಷಕಿಯರಾದ ಸೌಮ್ಯ, ಶ್ರುತಿ ಟಿ.ಎನ್., ಮಧುಶ್ರೀ ಎಂ, ಸಹಾಯಕಿಯರಾದ ಲಕ್ಷ್ಮಿ, ಮಾಲಾ ಸೇರಿದಂತೆ ಇತರರು ಇದ್ದರು.