ಧೈರ್ಯ, ಸ್ತ್ರೀಶಕ್ತಿಯ ಪ್ರತೀಕ ಒನಕೆ ಓಬವ್ವ

KannadaprabhaNewsNetwork |  
Published : Nov 12, 2025, 02:15 AM IST
 11ಡಿಡಬ್ಲೂಡಿ1 | Kannada Prabha

ಸಾರಾಂಶ

ಒನಕೆ ಓಬವ್ವ ತಮ್ಮ ಬುದ್ಧಿಶಕ್ತಿ ಮತ್ತು ಧೈರ್ಯದಿಂದ ತಮ್ಮ ಕಾಲದ ಆಕ್ರಮಣಕಾರರಿಗೆ ತಕ್ಕ ಪ್ರತಿರೋಧ ನೀಡಿದರು. ಅವರಂತಹ ಮಹಿಳೆಯರನ್ನು ನಾವು ಮುಂದಿನ ಪೀಳಿಗೆಗೆ ಪರಿಚಯಿಸಬೇಕು.

ಧಾರವಾಡ:

ಧೈರ್ಯ, ದೇಶಭಕ್ತಿ ಮತ್ತು ಸ್ತ್ರೀ ಶಕ್ತಿಯ ಪ್ರತೀಕವಾದ ವೀರವನಿತೆ ಒನಕೆ ಓಬವ್ವನ ತ್ಯಾಗ ಮತ್ತು ಸಾಹಸವನ್ನು ಪ್ರತಿಯೊಬ್ಬರು ನೆನಪಿಸಿಕೊಳ್ಳಬೇಕು ಎಂದು ಹುಡಾ ಅಧ್ಯಕ್ಷ ಶಾಕೀರ್ ಸನದಿ ಹೇಳಿದರು.

ಜಿಲ್ಲಾಡಳಿತ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ಆಲೂರು ವೆಂಕಟರಾವ್ ಸಾಂಸ್ಕೃತಿಕ ಭವನದಲ್ಲಿ ಮಂಗಳವಾರ ಆಯೋಜಿಸಿದ್ದ ವೀರವನಿತೆ ಒನಕೆ ಓಬವ್ವ ಜಯಂತಿಯಲ್ಲಿ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿದ ಅವರು, ಒನಕೆ ಓಬವ್ವ ತಮ್ಮ ಬುದ್ಧಿಶಕ್ತಿ ಮತ್ತು ಧೈರ್ಯದಿಂದ ತಮ್ಮ ಕಾಲದ ಆಕ್ರಮಣಕಾರರಿಗೆ ತಕ್ಕ ಪ್ರತಿರೋಧ ನೀಡಿದರು. ಅವರಂತಹ ಮಹಿಳೆಯರನ್ನು ನಾವು ಮುಂದಿನ ಪೀಳಿಗೆಗೆ ಪರಿಚಯಿಸಬೇಕು. ಶಾಲೆ-ಕಾಲೇಜುಗಳಲ್ಲಿ ಅವರ ಜೀವನದ ಕುರಿತು ವಿಶೇಷ ಚರ್ಚೆಗಳನ್ನು ನಡೆಸಿದರೆ ಮಕ್ಕಳಿಗೂ ಅವರ ಬಗ್ಗೆ ಇನ್ನೂ ಹೆಚ್ಚಾಗಿ ತಿಳಿಯುತ್ತದೆ ಎಂದರು. ಅಪರ ಜಿಲ್ಲಾಧಿಕಾರಿ ಗೀತಾ ಸಿ.ಡಿ. ಮಾತನಾಡಿ, ಒನಕೆ ಓಬವ್ವ ಅವರ ಸಾಹಸ ಕೇವಲ ಇತಿಹಾಸದ ಒಂದು ಘಟನೆ ಅಲ್ಲ, ಅದು ಮಹಿಳಾ ಶಕ್ತಿಯ ಶಾಶ್ವತ ಚಿಹ್ನೆ. ಓಬವ್ವ ನಮಗೆ ತೋರಿಸಿದ ಮಾರ್ಗ ದಿವ್ಯದೃಷ್ಟಿ. ನಾವೆಲ್ಲರೂ ಅವರ ಧೈರ್ಯ, ನಿಷ್ಠೆ ಮತ್ತು ದೇಶಭಕ್ತಿಯ ಪಾಠವನ್ನು ಜೀವನದಲ್ಲಿ ಅಳವಡಿಸಿಕೊಂಡರೆ, ಅವರಿಗೆ ನಿಜವಾದ ಗೌರವ ನೀಡಿದಂತಾಗುತ್ತದೆ ಎಂದು ಹೇಳಿದರು.ಸಾಹಿತಿ ಡಾ. ಸದಾಶಿವ ಮರ್ಜಿ ವಿಶೇಷ ಉಪನ್ಯಾಸ ನೀಡಿದರು. ಪ್ರಬಂಧ ಸ್ಪರ್ಧೆಯಲ್ಲಿ ವಿಜೇತ ವಿದ್ಯಾರ್ಥಿಗಳಿಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಸುಶೀಲಮ್ಮ ಚಲವಾದಿ ಮಾತನಾಡಿದರು. ಸಹಾಯಕ ಪೊಲೀಸ್ ಆಯುಕ್ತ ಪ್ರಶಾಂತ್ ಸಿದ್ದನಗೌಡರ, ಸಮಾಜದ ಮುಖಂಡರಾದ ಆನಂದ ಮುಶನ್ನವರ, ಮೇಘರಾಜ ಗುಡಿಮನಿ, ಯಲ್ಲಪ್ಪ ಮಂಟೂರ, ದೇವಾನಂದ ರತ್ನಾಕರ, ಶಿವಪುತ್ರಪ್ಪ ಚಿಕ್ಕಪ್ಪಇದ್ದರು.ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಕುಮಾರ ಬೆಕ್ಕೇರಿ ಪ್ರಾಸ್ತಾವಿಕ ಮಾತನಾಡಿದರು. ಆರತಿ ದೇವಶಿಖಾಮಣಿ ನಿರೂಪಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸರ್ವಾಧ್ಯಕ್ಷರಾಗಿ ಸೋಮಲಿಂಗ ಗೆಣ್ಣೂರ ಆಯ್ಕೆ
ಹೋರಾಟಗಾರರ ಮೇಲಿನ ಎಲ್ಲ ಕೇಸ್ ಹಿಂಪಡೆಯಿರಿ