ಮಹಾನ್ ಕಾಂತಿಕಾರಿ ಭಗತ್ ಸಿಂಗ್ 118ನೇ ಜನ್ಮ ದಿನ

KannadaprabhaNewsNetwork |  
Published : Sep 29, 2025, 01:02 AM IST

ಸಾರಾಂಶ

ಎಲ್ಲ ಮಾನವರು ಸಮಾನರು ಹಾಗೂ ದುಡಿಮೆಯನ್ನು ಗೌರವಿಸುವ ಮನೋಭಾವ ಬೆಳೆಸಿಕೊಳ್ಳಲು ಭಗತ್ ಸಿಂಗ್ ವಿಚಾರಗಳು ಸ್ಫೂರ್ತಿ ನೀಡುತ್ತವೆ ಎಂದು ಎಐಡಿವೈಒ ಜಿಲ್ಲಾಧ್ಯಕ್ಷರಾದ ಚನ್ನಬಸವ ಜಾನೇಕಲ್ ಅಭಿಪ್ರಾಯಪಟ್ಟರು.

ಕನ್ನಡಪ್ರಭ ವಾರ್ತೆ ರಾಯಚೂರು

ಎಲ್ಲ ಮಾನವರು ಸಮಾನರು ಹಾಗೂ ದುಡಿಮೆಯನ್ನು ಗೌರವಿಸುವ ಮನೋಭಾವ ಬೆಳೆಸಿಕೊಳ್ಳಲು ಭಗತ್ ಸಿಂಗ್ ವಿಚಾರಗಳು ಸ್ಫೂರ್ತಿ ನೀಡುತ್ತವೆ ಎಂದು ಎಐಡಿವೈಒ ಜಿಲ್ಲಾಧ್ಯಕ್ಷರಾದ ಚನ್ನಬಸವ ಜಾನೇಕಲ್ ಅಭಿಪ್ರಾಯಪಟ್ಟರು.

ನಗರದ ಶಹೀದ್ ಭಗತ್ ಸಿಂಗ್ ವೃತ್ತದಲ್ಲಿ ಎಐಡಿಎಸ್ಒ, ಎಐಡಿವೈಒ ಹಾಗೂ ಎಐಐಎಂಎಸ್ಎಸ್ ಸಂಘಟನೆಗಳು ಜಂಟಿಯಾಗಿ ಹಮ್ಮಿಕೊಂಡ ಮಹಾನ್ ಕಾಂತಿಕಾರಿ ಭಗತ್ ಸಿಂಗ್ ಅವರ 118ನೇ ಜನ್ಮ ದಿನ ಕಾರ್ಯಕ್ರಮದಲ್ಲಿ ಮಾತನಾಡಿದರು.

ಭಗತ್ ಸಿಂಗ್ ಬಾಲಕರಾಗಿದ್ದಾಗಲೇ ದೇಶದ ಸ್ವಾತಂತ್ರ್ಯದ ವಿಚಾರಗಳನ್ನು ಕೇಳಿಸಿಕೊಳ್ಳುತ್ತಲೇ ಬೆಳೆದರು. ಕೇವಲ 12 ವರ್ಷ ವಯಸ್ಸಿನ ಬಾಲಕ ಭಗತ್ ಜಲಿಯನ್ ವಾಲಾಬಾಗ್ ಹತ್ಯಾಕಾಂಡ ನಡೆದ ಸ್ಥಳಕ್ಕೆ ತೆರಳಿ ರಕ್ತಸಿಕ್ತ ಮಣ್ಣನ್ನು ತೆಗೆದುಕೊಂಡು ಬ್ರಿಟಿಷ್ ಸಾಮ್ರಾಜ್ಯಶಾಹಿ ವಿರುದ್ಧ ಹೋರಾಡುವ ಸಂಕಲ್ಪ ತೊಟ್ಟರು. ನಂತರ ಅಸಹಕಾರ ಚಳವಳಿಯಲ್ಲಿ ಸಕ್ರಿಯವಾಗಿ ಭಾಗವಹಿಸಿದ್ದರು. ಭಗತ್ ಅವರು ಸಾಹಿತ್ಯ, ಕಲೆ, ತತ್ವಶಾಸ್ತ್ರ, ವಿಜ್ಞಾನ, ಚರಿತ್ರೆಯನ್ನು ಪುಸ್ತಕ ಗಳನ್ನು ಓದಿ ಕೊಂಡಿದ್ದರು. ಜ್ಞಾನ ದಾಹಿಯಾಗಿದ್ದರು. ಜಯಚಂದ್ರ ವಿದ್ಯಾಲಂಕಾರ ಎಂಬ ಗುರುಗಳು ಅವರಿಗೆ ಎಚ್.ಆರ್.ಎ ಎಂಬ ಕ್ರಾಂತಿಕಾರಿ ಸಂಘಟನೆಗೆ ಪರಿಚಯಿ ಸಿದರು. ಆ ಕ್ರಾಂತಿಕಾರಿ ಸಂಘಟನೆ ಸೇರಿದ ನಂತರ ಅವರು ಹಂತ ಹಂತವಾಗಿ ಇನ್ನಷ್ಟು ಪ್ರಬುದ್ಧರಾಗಿ ಬೆಳೆದರು. ಇನ್ನು ಅಸ್ಪೃಶ್ಯತೆ , ಕೋಮುವಾದದ ವಿರುದ್ಧ ಮೊನಚಾದ ದಾಳಿಯನ್ನು ನಡೆಸಿದರು. ನಮ್ಮ ಶತ್ರು ಬಂಡವಾಳಶಾಹಿ ವ್ಯವಸ್ಥೆ, ಬ್ರಿಟಿಷ್ ಸಾಮ್ರಾಜ್ಯದ ವಿರುದ್ಧ ರಾಜಿ ರಹಿತ ಹೋರಾಟ ಬೆಳೆಸಬೇಕೆಂದು ಅವರು ಜನತೆಗೆ ಕರೆ ನೀಡಿದರು ಎಂದು ಹೇಳಿದರು.

ಎಐಡಿಎಸ್ಓ ಜಿಲ್ಲಾಧ್ಯಕ್ಷರಾದ ಹಯ್ಯಾಳಪ್ಪ ಅವರು ಮಾತನಾಡಿ, ಶಿಕ್ಷಣ ವ್ಯಾಪಾರೀಕರಣ, ಬೆಲೆ ಏರಿಕೆ, ನಿರುದ್ಯೋಗ ಸಮಸ್ಯೆ ವಿರುದ್ಧ ಹಾಗೂ ಮಹಿಳೆಯರ ಮೇಲೆ ನಡೆಯುತ್ತಿರುವ ಅಮಾನವೀಯ ಘಟನೆಗಳ ವಿರುದ್ಧ ಹೋರಾಡಲು ನಮಗೆ ಭಗತ್ ಸಿಂಗ್ ಆದರ್ಶ ಅತ್ಯಂತ ಅವಶ್ಯಕ ಎಂದು ಹೇಳಿದರು. ಎಐಐಎಂಎಸ್ಎಸ್ ಸಂಘಟನೆ ಜಿಲ್ಲಾ ಕಾರ್ಯದರ್ಶಿ ಶ್ರೀಮತಿ ಸರೋಜಾ ಗೋವಾರ್ ಅವರು ಕಾರ್ಯಕ್ರಮವನ್ನು ನಡೆಸಿಕೊಟ್ಟರು. ಎಐಯುಟಿವಯುಸಿ ಜಿಲ್ಲಾ ಉಪಾಧ್ಯಕ್ಷರಾದ ಅಣ್ಣಪ್ಪ, ಜಿಲ್ಲಾ ಕಾರ್ಯದರ್ಶಿ ಮಹೇಶ್ ಚೀಕಲಪರವಿ ಅವರು ಭಗತ್ ಸಿಂಗ್ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿದರು. ಸಂಘಟನೆಗಳ ಪದಾಧಿಕಾರಿಗಳಾದ ಬಸವರಾಜ್, ನಂದಗೋಪಾಲ್, ಶ್ರೀಕಾಂತ್, ಮೌನೇಶ್, ನೂರ್ ಪಾಷ, ಕೃಷ್ಣ ಮನ್ಸಲಾಪುರ, ನಾಗವೇಣಿ, ಶ್ರೀಕಾಂತ್, ರಾಜೇಶ್, ಮಲ್ಲನಗೌಡ ಮುಂತಾದ ಯುವಕರು ಹಿರಿಯರು ಮುದ್ದು ಮಕ್ಕಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಭಗತ್ ಸಿಂಗ್ ಅವರಿಗೆ ಗೌರವ ಸಲ್ಲಿಸಿದರು. ಮನಸಲಾಪುರ ಗ್ರಾಮದಲ್ಲಿ ನಿನ್ನೆ ಸಂಜೆ ಎಐಡಿವೈಒ ಗ್ರಾಮ ಘಟಕದ ವತಿಯಿಂದ ವಾಲ್ಮೀಕಿ ವೃತ್ತದಲ್ಲಿ ಭಗತ್ ಸಿಂಗ್ ಜನ್ಮದಿನವನ್ನು ಆಚರಿಸಲಾಯಿತು. ಎಐಡಿವೈಒ ಜಿಲ್ಲಾಧ್ಯಕ್ಷರಾದ ಚನ್ನಬಸವ ಜಾನೇಕಲ್ ಅವರು ಭಗತ್ ಸಿಂಗ್ ಜೀವನ ವಿಚಾರದ ಕುರಿತು ಮಾತನಾಡಿದರು. ಗ್ರಾಮ ಘಟಕದ ಅಧ್ಯಕ್ಷರಾದ ಕೃಷ್ಣ ಕಾರ್ಯದರ್ಶಿ ಸಂತೋಷ್ ಸಾಗರ್, ಸತೀಶ್, ಮಂಜುನಾಥ್, ಅನಿಲ್, ಶಿವರಾಜ್, ಶಿವಪುತ್ರ ಮುಂತಾದ ಗ್ರಾಮದ ಯುವಕರು ರೈತರು ಕಾರ್ಯ ಕ್ರಮದಲ್ಲಿ ಭಾಗವಹಿಸಿ ಗೌರವ ಸಲ್ಲಿಸಿದರು. ಮಹಾತ್ಮ ಗಾಂಧಿ ಕ್ರೀಡಾಂಗಣದಲ್ಲಿ ಇಂದು ಬೆಳಗ್ಗೆ ಕ್ರೀಡಾಪಟುಗಳ ನಡುವೆ ಭಗತ್ ಸಿಂಗ್ ಜನ್ಮದಿನವನ್ನು ಆಚರಿಸಲಾಯಿತು. ಹಾಗೆಯೇ ಉಂಡ್ರಾಳದೊಡ್ಡಿ ಗ್ರಾಮದಲ್ಲಿ ಗ್ರಾಮದ ಯುವಕರು ಎಐಡಿವೈಒ ನೇತೃತ್ವದಲ್ಲಿ ಭಗತ್ ಸಿಂಗ್ ಜನ್ಮದಿನವನ್ನು ಆಚರಿಸಿದರು. ಎಐಡಿವೈಒ ಜಿಲ್ಲಾ ಕಾರ್ಯದರ್ಶಿ ವಿನೋದ್ ಕುಮಾರ್ ರವರು ಮಾತನಾಡಿದರು. ಗ್ರಾಮದ ಯುವಕರಾದ ಉದಯ್ , ನರಸಿಂಹ, ಬಾಬು ಮುಂತಾದವರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಹೈಕೋರ್ಟ್‌ ಹೊಸ ಕಟ್ಟಡಕ್ಕೆ 30 ಎಕ್ರೆ ಕೋರಿಕೆ : ರಾಜ್ಯ ಸರ್ಕಾರಕ್ಕೆ ನೋಟಿಸ್‌
ಬಿಎಂಐಸಿ ಮರುಪರಿಶೀಲಿಸಿ: ರಾಜ್ಯಕ್ಕೆ ಕೋರ್ಟ್‌ ಸೂಚನೆ