ಒಬ್ಬರ ಆಶ್ರಯ ನಿವೇಶನ ಬೇರೊಬ್ಬರಿಗೆ: ಆರೋಪ

KannadaprabhaNewsNetwork |  
Published : Jun 23, 2025, 11:51 PM IST
22 ಟಿವಿಕೆ 3 – ತುರುವೇಕೆರೆಯ ಪಟ್ಟಣ ಪಂಚಾಯತಿಯ ಸಿಬ್ಬಂದಿ ನಕಲಿ ದಾಖಲೆ ಸೃಷ್ಠಿಸಿ ಅಮಾಯಕರನ್ನು ವಂಚಿಸಿದ್ದಾರೆಂದು ದಲಿತ ಸಂಘರ್ಷ ಸಮಿತಿಯ ಪದಾದಿಕಾರಿಗಳು ಆರೋಪಿಸಿದರು. | Kannada Prabha

ಸಾರಾಂಶ

ಆಶ್ರಯ ಯೋಜನೆಯಡಿ ಮಂಜೂರು ಮಾಡಲಾದ ನಿವೇಶನವನ್ನು ಬೇರೆಯವರ ಹೆಸರಿಗೆ ಖಾತೆ ಮಾಡಿರುವ ಇಲ್ಲಿಯ ಪಟ್ಟಣ ಪಂಚಾಯಿತಿಯ ಸಿಬ್ಬಂದಿಯ ಕರಾಮತ್ತು ಬೆಳಕಿಗೆ ಬಂದಿದೆ.

ಕನ್ನಡಪ್ರಭವಾರ್ತೆ ತುರುವೇಕೆರೆ

ಆಶ್ರಯ ಯೋಜನೆಯಡಿ ಮಂಜೂರು ಮಾಡಲಾದ ನಿವೇಶನವನ್ನು ಬೇರೆಯವರ ಹೆಸರಿಗೆ ಖಾತೆ ಮಾಡಿರುವ ಇಲ್ಲಿಯ ಪಟ್ಟಣ ಪಂಚಾಯಿತಿಯ ಸಿಬ್ಬಂದಿಯ ಕರಾಮತ್ತು ಬೆಳಕಿಗೆ ಬಂದಿದೆ.

ಪತ್ರಿಕಾಗೋಷ್ಠಿಯಲ್ಲಿ ದಾಖಲೆಗಳ ಸಹಿತ ಮಾತನಾಡಿದ ತಾಲೂಕು ದಲಿತ ಸಂಘರ್ಷ ಸಮಿತಿಯ ಪದಾಧಿಕಾರಿ ಅಫ್ಜಲ್ ಪಾಷಾ, 19-11-1991 ರಲ್ಲಿ ತಮ್ಮ ತಂದೆ ಅಪ್ಸರ್ ಮತ್ತು ತಾಯಿ ಷಹಿದಾ ರವರ ಹೆಸರಿಗೆ ಪಟ್ಟಣದ ಮೀನಾಕ್ಷಿ ಬಡಾವಣೆಯಲ್ಲಿ ಸರ್ವೇ ನಂಬರ್ 123/27 ರಲ್ಲಿ 18/28 ಅಡಿ ಅಳತೆಯ ನಿವೇಶನವನ್ನು ಆಶ್ರಯ ಯೋಜನೆಯಡಿ ನೀಡಲಾಗಿತ್ತು. ಆರ್ಥಿಕವಾಗಿ ಆಗದ ಕಾರಣ ಮನೆ ಕಟ್ಟಲು ಸಾಧ್ಯವಾಗಿರಲಿಲ್ಲ. ಈಗ ಮನೆ ಕಟ್ಟುವ ಸಲುವಾಗಿ ಇ ಖಾತೆ ಮಾಡಿಸಲು ಸ್ಥಳೀಯ ಪಟ್ಟಣ ಪಂಚಾಯಿತಿಗೆ ಹೋದಾಗ ತಮ್ಮ ತಂದೆಯವರಿಗೆ ನೀಡಲಾಗಿದ್ದ ನಿವೇಶನವನ್ನು ಅಲ್ಲಿನ ಸಿಬ್ಬಂದಿ 2024 ರಲ್ಲಿ ಬೇರೆಯವರ ಹೆಸರಿಗೆ ಮಾಡಿರುವುದು ಬಯಲಿಗೆ ಬಂತು ಎಂದು ಅಫ್ಜಲ್ ತಿಳಿಸಿದರು. ದೇವನಾಯಕನಹಳ್ಳಿಯ ಮಹಮದ್ ಆಲಿ ಎಂಬುವವರಿಗೆ ನಮ್ಮ ನಿವೇಶನದ ಖಾತೆ ಮಾಡಿಕೊಡಲಾಗಿದೆ. ಮಹಮದ್ ಆಲಿ ಯವರ ನಿವೇಶನದ ಸಂಖ್ಯೆ 123/ 45 ಆಗಿದೆ. ಆದರೆ ಪಟ್ಟಣ ಪಂಚಾಯಿತಿ ಸಿಬ್ಬಂದಿ ಮಹಮದ್ ಆಲಿಯವರಿಂದ ತಿದ್ದಿರುವ ನಕಲಿ ಆಶ್ರಯ ಹಕ್ಕು ಪತ್ರ, ಆಧಾರ್ ಕಾರ್ಡ್, ರೇಷನ್ ಕಾರ್ಡ್ ನ್ನು ಪಡೆದು ನಕಲಿ ದಾಖಲೆ ಸೃಷ್ಠಿಸಿ ನಮ್ಮ ನಿವೇಶನವನ್ನು ಮಹಮದ್ ಆಲಿಯವರಿಗೆ ಮಾಡಿಕೊಟ್ಟಿದ್ದಾರೆಂದು ಅಫ್ಜಲ್ ದೂರಿದರು. ಪಟ್ಟಣ ಪಂಚಾಯಿತಿಯ ಸಿಬ್ಬಂದಿ ಬಡವರು ಮತ್ತು ಶ್ರೀಮಂತರಿಗೇ ಒಂದೊಂದು ರೀತಿ ಸೇವೆ ನೀಡುತ್ತಿದ್ದಾರೆ. ಬಡವರ ಇ ಖಾತೆ ಮಾಡಿಸಲು ತಿಂಗಳುಗಟ್ಟಲೆ ಸುತ್ತಿಸುವ ಅಲ್ಲಿನ ಸಿಬ್ಬಂದಿ ಶ್ರೀ ಮಂತರಿಂದ ಭಕ್ಷೀಸು ಪಡೆದು ಹತ್ತು ಹನ್ನೆರೆಡು ದಿನಗಳಲ್ಲಿ ಇ ಖಾತೆ ಮಾಡಿಕೊಡುತ್ತಿದ್ದಾರೆ. ಇಲ್ಲಿ ಬಡವರಿಗೆ ಸೇವೆ ಎಂಬುದು ಮರಿಚಿಕೆಯಾಗಿದೆ. ಈ ಕುರಿತು ಪಟ್ಟಣ ಪಂಚಾಯಿತಿಯ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು ಮತ್ತು ಅಧಿಕಾರಿಗಳಿಗೆ ತಿಳಿಸಿದರೂ ಸಹ ಪ್ರಯೋಜನವಾಗಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು. ನಮಗಾಗಿರುವ ರೀತಿ ಬಹಳ ಮಂದಿಗೆ ಅನ್ಯಾಯ ಎಸಗಲಾಗಿದೆ. ಇನ್ನು ಕೆಲವೇ ದಿನಗಳಲ್ಲಿ ಅನ್ಯಾಯಕ್ಕೆ ಒಳಗಾಗಿರುವ ಜನರನ್ನು ಒಂದೆಡೆ ಸೇರಿಸಿ ಪಟ್ಟಣ ಪಂಚಾಯಿತಿ ಮುಂದೆ ಪ್ರತಿಭಟನೆ ಮಾಡಲಾಗುವುದು. ಈ ಬಗ್ಗೆ ಲೋಕಾಯುಕ್ತಕ್ಕೂ ದೂರು ಸಲ್ಲಿಸಲಾಗಿದೆ ಎಂದರು. ಈ ಸಂಧರ್ಭದಲ್ಲಿ ಜಿಲ್ಲಾ ಡಿಎಸ್ ಎಸ್ ನ ಸಂಘಟನಾ ಸಂಚಾಲಕ ದಂಡಿನಶಿವರ ಕುಮಾರ್, ತಾಲೂಕು ಸಂಚಾಲಕ ಮಲ್ಲೂರು ತಿಮ್ಮೇಶ್, ಸಂಘಟನಾ ಸಂಚಾಲಕ ಗುರುದತ್ ಸೇರಿದಂತೆ ಹಲವಾರು ಮಂದಿ ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರಾಜ್ಯದಲ್ಲಿ ಮದ್ಯ ಮಾರಾಟ ನಿಷೇಧವಾಗುತ್ತಾ ?
ಯಾವ ದೇವ್ರಿಗೆ ಪೂಜೆ ಮಾಡಿಸಿದ್ದೀರಿ? : ಮಧುಗೆ ರವಿ!