ಕನ್ನಡಪ್ರಭ ವಾರ್ತೆ ಗುರುಮಠಕಲ್
ಪಟ್ಟಣದ ಸರ್ಕಾರಿ ಬಾಲಕರ ಪದವಿಪೂರ್ವ ಕಾಲೇಜಿನ (ಪ್ರೌಢ ) ವಿಭಾಗದ ಶಿಕ್ಷಣ ಇಲಾಖೆಯ ಮತ್ತು ಮಂತ್ರ ಫಾರ್ ಚೇಂಜ್ ಸಂಸ್ಥೆಯ ಸಂಯೋಗದಲ್ಲಿ ಆಯೋಜಿಸಿದ್ದ ನನ್ನ ಕನಸು ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ವಿದ್ಯಾರ್ಥಿಗಳು ಮೊದಲು ಉನ್ನತ ಹುದ್ದೆ ಅಲಂಕರಿಸುವ ಗುರಿ ಹೊಂದಬೇಕು. ಪೊಲೀಸ್, ಶಿಕ್ಷಕ ಸೇರಿದಂತೆ ವಿವಿಧ ಹುದ್ದೆಗಳು ದೊರೆತರೂ ಅಲ್ಲಿಗೇ ತೃಪ್ತಿಪಟ್ಟುಕೊಳ್ಳದೇ, ಉನ್ನತ ಗುರಿಯತ್ತ ಸಾಗುವ ಪ್ರಯತ್ನ ಮುಂದುವರಿಸಬೇಕು ಎಂದು ಸಲಹೆ ನೀಡಿದರು.
ಹಿರಿಯ ಉಪನ್ಯಾಸಕ ಶೇಖರಪ್ಪ, ಶಿಕ್ಷಣ ಸಂಯೋಜಕ ರವೀಂದ್ರ ಚವ್ಹಾಣ, ಮಂತ್ರ ಫಾರ್ ಚೇಂಜ್ ಸಂಸ್ಥೆಯ ಸಂತೋಷ, ಗಣೇಶ, ಮುಖ್ಯಗುರುಗಳಾದ ಕಿಷ್ರೆಡ್ಡಿ ಹಾಗೂ ಶರಣಪ್ಪ ಚಿಂತಕುಂಟಾ, ದೈಹಿಕ ಶಿಕ್ಷಕ ಲಕ್ಷ್ಮೀಕಾಂತರೆಡ್ಡಿ, ಅಧಿಕಾರಿಗಳು, ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.----ಬಾಕ್ಸ್------
ಸೈದಾಪುರ: ಉತ್ತಮ ಸಾಧನೆಗೆ ಸತತ ಪರಿಶ್ರಮ ಅತಿ ಮುಖ್ಯವಾಗಿದೆ ಎಂದು ಯುಪಿಎಸಸಿ ಸಾಧಕ ಚಂದ್ರಶೇಖರ ಅಭಿಪ್ರಾಯಪಟ್ಟರು. ಪಟ್ಟಣದ ವಿದ್ಯಾವರ್ಧಕ ಪ್ರೌಢ ಶಾಲೆಯಲ್ಲಿ ನನ್ನ ಕನಸು ಕಾರ್ಯಕ್ರಮದ ಅಂಗವಾಗಿ ವಿದ್ಯಾರ್ಥಿಗಳ ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ಆಸಕ್ತಿದಾಯಕ ವಿಷಯಗಳನ್ನು ನೀವು ಆಯ್ಕೆ ಮಾಡಿಕೊಂಡು ಪರೀಕ್ಷೆ ಬರೆಯಬೇಕು. ನಮ್ಮ ಗುರಿ ಹಾಗೂ ಪ್ರಯತ್ನ ಮುಖ್ಯವಾಗಿದೆ ಎಂದು ಹೇಳಿದರು.
ಶಾಲಾ ಮುಖ್ಯಗುರು ಲಿಂಗಾರೆಡ್ಡಿ ನಾಯಕ, ಪ್ರಾಂಶುಪಾಲರಾದ ಕರಬಸಯ್ಯ ದಂಡಿಗಿಮಠ, ದೇವಿಂದ್ರ ಪೀರಾ, ಇಸಿಒ ಚಾಂದಸಾಬ.ಎಂ, ಸಿಆರ್‍ಪಿ ಲಿಂಗಾರೆಡ್ಡಿ, ತಮ್ಮಣ್ಣ, ಮೌನೇಶ, ಶಿಕ್ಷಕರು, ಉಪನ್ಯಾಸಕರು, ಸಿಬ್ಬಂದಿಗಳು, ವಿದ್ಯಾರ್ಥಿಗಳು ಸೇರಿದಂತೆ ಇತರರಿದ್ದರು. ಸಂಗಾರೆಡ್ಡಿ ನಿರೂಪಿಸಿದರು.