ವಿಶೇಷ ಟಿಕೆಟ್ ತಪಾಸಣಾ ಅಭಿಯಾನ: ದಂಡದ ರೂಪದಲ್ಲಿ 2.32 ಲಕ್ಷ ಸಂಗ್ರಹ

KannadaprabhaNewsNetwork |  
Published : Nov 07, 2026, 01:15 AM IST
46 | Kannada Prabha

ಸಾರಾಂಶ

ನ.1 ರಂದು ಅರಸೀಕೆರೆ ಮತ್ತು ದಾವಣಗೆರೆ ತಪಾಸಣಾ ತಂಡಗಳು ಮೈಸೂರು-ಅರಸೀಕೆರೆ-ಯಶವಂತಪುರ-ಬೀರೂರು- ದಾವಣಗೆರೆ-ಹಾವೇರಿ ಹಾಗೂ ಚಿತ್ರದುರ್ಗ ಸೇರಿದಂತೆ ವಿವಿಧ ಮಾರ್ಗಗಳಲ್ಲಿ ತಪಾಸಣೆ ನಡೆಸಿವೆ. ಈ ಸಂದರ್ಭದಲ್ಲಿ ಒಟ್ಟು 124 ಪ್ರಕರಣಗಳನ್ನು ಪತ್ತೆಹಚ್ಚಿ 1,22,980 ರೂ. ಮೊತ್ತವನ್ನು ಸಂಗ್ರಹಿಸಲಾಗಿದೆ.

ಕನ್ನಡಪ್ರಭ ವಾರ್ತೆ ಮೈಸೂರು

ನೈಋತ್ಯ ರೈಲ್ವೆಯ ಮೈಸೂರು ವಿಭಾಗವು ಪ್ರಯಾಣಿಕರು ಮಾನ್ಯ ಟಿಕೆಟ್‌ ಗಳೊಂದಿಗೆ ಪ್ರಯಾಣಿಸುವುದನ್ನು ಖಚಿತಪಡಿಸಿಕೊಳ್ಳಲು, ಟಿಕೆಟ್ ಇಲ್ಲದೆ ಹಾಗೂ ಅನಿಯಮಿತವಾಗಿ ಪ್ರಯಾಣಿಸುವುದನ್ನು ತಡೆಗಟ್ಟಲು ಮತ್ತು ಪ್ರಯಾಣಿಕರಲ್ಲಿ ಜಾಗೃತಿ ಮೂಡಿಸಲು ನ.1 ರಿಂದ ವಿವಿಧ ರೈಲ್ವೆ ಮಾರ್ಗಗಳಲ್ಲಿ ವಿಶೇಷ ಟಿಕೆಟ್ ತಪಾಸಣಾ ಅಭಿಯಾನ ನಡೆಸುತ್ತಿದೆ.

ಈ ವಿಶೇಷ ಅಭಿಯಾನದ ಅಂಗವಾಗಿ ಒಟ್ಟು 16 ಟಿಕೆಟ್ ತಪಾಸಣೆಗಳನ್ನು ನಡೆಸಲಾಗಿದ್ದು, ಇದರಲ್ಲಿ 12 ತಪಾಸಣೆಗಳನ್ನು ಪ್ರಯಾಣ ಟಿಕೆಟ್ ಪರೀಕ್ಷಕರು ಹಾಗೂ 4 ತಪಾಸಣೆಗಳನ್ನು ಮುಖ್ಯ ವಾಣಿಜ್ಯ ನಿರೀಕ್ಷಕರು ನಡೆಸಿದ್ದಾರೆ. ಒಟ್ಟು 9 ಸಿಬ್ಬಂದಿಯನ್ನು ಈ ಅಭಿಯಾನದಲ್ಲಿ ನಿಯೋಜಿಸಲಾಗಿದ್ದು, ಪಿಆರ್ ಎಸ್, ಯುಟಿಎಸ್ ಹಾಗೂ ರಿಯಾಯಿತಿ ಟಿಕೆಟ್‌ ಗಳು ಸೇರಿದಂತೆ ಒಟ್ಟು 1771 ಟಿಕೆಟ್‌ ಗಳನ್ನು ಪರಿಶೀಲಿಸಲಾಗಿದೆ.

ನ.1 ರಂದು ಅರಸೀಕೆರೆ ಮತ್ತು ದಾವಣಗೆರೆ ತಪಾಸಣಾ ತಂಡಗಳು ಮೈಸೂರು-ಅರಸೀಕೆರೆ-ಯಶವಂತಪುರ-ಬೀರೂರು- ದಾವಣಗೆರೆ-ಹಾವೇರಿ ಹಾಗೂ ಚಿತ್ರದುರ್ಗ ಸೇರಿದಂತೆ ವಿವಿಧ ಮಾರ್ಗಗಳಲ್ಲಿ ತಪಾಸಣೆ ನಡೆಸಿವೆ. ಈ ಸಂದರ್ಭದಲ್ಲಿ ಒಟ್ಟು 124 ಪ್ರಕರಣಗಳನ್ನು ಪತ್ತೆಹಚ್ಚಿ 1,22,980 ರು. ಮೊತ್ತವನ್ನು ಸಂಗ್ರಹಿಸಲಾಗಿದೆ.

ನ.2 ರಂದು ಮೈಸೂರು ಹಾಗೂ ಇತರ ನಿಗದಿತ ಸ್ಥಳಗಳ ತಪಾಸಣಾ ತಂಡಗಳು ಮೈಸೂರು- ಬೆಂಗಳೂರು ಮತ್ತು ಮೈಸೂರು– ಹಾಸನ ಮಾರ್ಗಗಳಲ್ಲಿ ತಪಾಸಣೆ ನಡೆಸಿವೆ. ಈ ಸಂದರ್ಭದಲ್ಲಿ ಒಟ್ಟು 96 ಪ್ರಕರಣಗಳನ್ನು ಪತ್ತೆಹಚ್ಚಿ 1,01,900 ರೂ. ಮೊತ್ತವನ್ನು ಸಂಗ್ರಹಿಸಲಾಗಿದೆ.

ನ.5 ರಂದು ಮೈಸೂರು ಪ್ರದೇಶದ ಮೈಸೂರು-ಚಾಮರಾಜನಗರ, ಮೈಸೂರು-ಹಾಸನ ಹಾಗೂ ಮೈಸೂರು-ಮಂಡ್ಯ ಮಾರ್ಗಗಳಲ್ಲಿ ನೈಋತ್ಯ ರೈಲ್ವೆಯ ಪ್ರಧಾನ ವ್ಯವಸ್ಥಾಪಕರ ಮೇಲ್ವಿಚಾರಣೆಯಲ್ಲಿ ವಿಶೇಷ ಟಿಕೆಟ್ ತಪಾಸಣೆ ನಡೆಸಲಾಯಿತು. ಈ ಸಂದರ್ಭದಲ್ಲಿ ಒಟ್ಟು 14 ಪ್ರಕರಣಗಳನ್ನು ಪತ್ತೆಹಚ್ಚಿ 7565 ರೂ. ಮೊತ್ತವನ್ನು ಸಂಗ್ರಹಿಸಲಾಗಿದೆ.

ನ.1 ರಿಂದ 5 ರವರೆಗೆ ಈ ವಿಶೇಷ ಟಿಕೆಟ್ ತಪಾಸಣಾ ಅಭಿಯಾನದ ಮೂಲಕ 234 ಪ್ರಕರಣಗಳನ್ನು ಪತ್ತೆ ಹಚ್ಚಿ, 2,32,445 ರು. ದಂಡ ಸಂಗ್ರಹಿಸಲಾಗಿದೆ.

ಪ್ರಯಾಣಿಕರು ಪ್ರಯಾಣ ಆರಂಭಿಸುವ ಮೊದಲು ಮಾನ್ಯ ಟಿಕೆಟ್‌ ಗಳನ್ನು ಖರೀದಿಸಿ, ಸೂಕ್ತ ಪ್ರಯಾಣದ ದಾಖಲೆಗಳೊಂದಿಗೆ ಪ್ರಯಾಣಿಸಬೇಕು. ಇದರಿಂದ ಅನಗತ್ಯ ತೊಂದರೆ ಹಾಗೂ ದಂಡವನ್ನು ತಪ್ಪಿಸಿಕೊಳ್ಳಬಹುದು ಎಂದು ಮೈಸೂರು ವಿಭಾಗವು ಮನವಿ ಮಾಡಿದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರೈತರ ಬೇಡಿಕೆ ಈಡೇರಿಸಲು ಕುಲರತ್ನಭೂಷಣ ಮುನಿಗಳ ಆಗ್ರಹ
ನಾಡಿನ ರೈತರು, ಕಾರ್ಮಿಕರ ಹಿತರಕ್ಷಣೆಗೆ ಬದ್ಧ: ಎಸ್.ಆರ್. ಪಾಟೀಲ