ಕನ್ನಡಪ್ರಭ ವಾರ್ತೆ ಮೈಸೂರು
ನಗರದ ಸರಸ್ವತಿಪುರಂನಲ್ಲಿರುವ ವಿಜಯವಿಠಲ ಕಾಲೇಜಿನಲ್ಲಿ ಬುಧವಾರ ನಡೆದ ಗುರುಪೂರ್ಣಿಮಾ ಕಾರ್ಯಕ್ರಮದಲ್ಲಿ ವ್ಯಾಸ ಮಹರ್ಷಿಗಳ ಭಾವಚಿತ್ರಕ್ಕೆ ಪುಷ್ಪಾರ್ಚನೆ ನೆರವೇರಿಸಿದ ನಂತರ ಅವರು ಮಾತನಾಡಿದರು.
ವಿದ್ಯಾರ್ಥಿ ಜೀವನದ ಮಹತ್ವವನ್ನು ಅರಿತು ಗುರುಗಳಿಗೆ ಗೌರವ ನೀಡುವುದನ್ನು ರೂಢಿಸಿಕೊಳ್ಳಬೇಕು. ಅವಿದ್ಯೆ, ಅಂಧಕಾರವನ್ನು ಕಳೆದು ಜ್ಞಾನದ ಜ್ಯೋತಿಯನ್ನು ಬೆಳಗುವವನೇ ಗುರು. ಗುರುವಿಗೆ ಶರಣಾಗುವುದರಿಂದ ಸನ್ಮಾರ್ಗದಲ್ಲಿ ಜೀವನದಲ್ಲಿ ಮುನ್ನೆಡೆಯಬಹುದು. ಶಿಕ್ಷಣವನ್ನು ಪಡೆದ ಪ್ರತಿಯೊಬ್ಬನು ಗುರುವಿಗೆ ಋಣಿಯಾಗಿರಬೇಕು. ವಿದ್ಯೆ ವಿನಯವನ್ನು ತಂದುಕೊಡಬೇಕು. ಇಂದಿನ ವಿದ್ಯಾರ್ಥಿಗಳು ವಿನಯಶೀಲತೆಯಿಂದ ಕ್ಷಣಕ್ಷಣವೂ ವಿದ್ಯಾರ್ಜನೆಯತ್ತ ಗಮನ ನೀಡಿ ತಂದೆ-ತಾಯಿ ಹಾಗೂ ಗುರುವನ್ನು ಗೌರವಿಸಿ ಅಜ್ಞಾನದಿಂದ ಜ್ಞಾನದ ಕಡೆಗೆ ಸಾಗಬೇಕು ಎಂದು ವಿದ್ಯಾರ್ಥಿಗಳಿಗೆ ವಿದ್ಯೆ ಹಾಗೂ ಗುರುವಿನ ಮಹತ್ವ ತಿಳಿ ಹೇಳಿದರು.ಕಾಲೇಜಿನ ಆಂಗ್ಲಭಾಷಾ ಉಪನ್ಯಾಸಕಿ ಮಯೂರಲಕ್ಷ್ಮಿ ಮಾತನಾಡಿ, ಗುರುಪೂರ್ಣಿಮಾ ಮಹತ್ವವನ್ನು ತಿಳಿಸುತ್ತಾ, ಆಷಾಢ ಶುದ್ಧ ಪೂರ್ಣಿಮೆಯ ಈ ದಿನ ಭಗವಾನ್ ವೇದವ್ಯಾಸರು ಜನ್ಮ ತಳೆದು ಜಗತ್ತಿಗೆ ಮಹಾಭಾರತದಂಥ ಶ್ರೇಷ್ಠ ಗ್ರಂಥವನ್ನು ಕೊಡುಗೆಯಾಗಿ ನೀಡಿದರು.
ಜೆಎಸ್ಎಸ್ ಪಬ್ಲಿಕ್ ಶಾಲೆಯಲ್ಲಿ ಗುರುವಂದನಾ ಕಾರ್ಯಕ್ರಮ
ಶಾಲೆಯ ಪ್ರಾಂಶುಪಾಲೆ ಅರ್ಚನಾ ಅವರು ದೀಪ ಬೆಳಗಿಸಿ, ಶ್ರೀ ರಾಜೇಂದ್ರ ಸ್ವಾಮೀಜಿಗಳ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ, ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಉಪಪ್ರಾಂಶುಪಾಲೆ ಕೆ.ಎ. ಸುನಿತ, ಶಾಲಾ ಶಿಕ್ಷಕ ವೃಂದ ವೇದಿಕೆಯಲ್ಲಿ ಇದ್ದರು.5ನೇ ತರಗತಿಯ ವಿದ್ಯಾರ್ಥಿಗಳು ಗೀತನಮನ ಕಾರ್ಯಕ್ರಮ ನಡೆಸಿಕೊಟ್ಟರು. ಶಾಲಾ ಶಿಕ್ಷಕ ವೃಂದವು ಶ್ರೀ ರಾಜೇಂದ್ರ ಸ್ವಾಮೀಜಿ ಅವರನ್ನು ಕುರಿತಾದ ಗೀತೆಯನ್ನು ಹಾಡುವುದರ ಮೂಲಕ ಗುರುಗಳಿಗೆ ನಮನ ಸಲ್ಲಿಸಿದರು. ಅಲ್ಲದೇ ಗುರುಮಹಿಮೆಯನ್ನು ಬಿಂಬಿಸುವ ಹಾಡುಗಳನ್ನು ಹಾಡಲಾಯಿತು. ಶಾಲಾ ವಿದ್ಯಾರ್ಥಿಗಳು ಗುರುಗಳ ಕಾಲಿಗೆ ನಮಸ್ಕರಿಸಿ ಆಶೀರ್ವಾದ ಪಡೆದುಕೊಂಡರು. ಶಾಲೆಯ 10ನೇ ತರಗತಿಯ ವಿದ್ಯಾರ್ಥಿಯಾದ ವಿಶೃತ್ ಎಸ್. ಪ್ರಸಾದ್ ದಿನದ ಮಹತ್ವ ಕುರಿತು ಮಾತನಾಡಿದರು. ವಿದ್ಯಾರ್ಥಿನಿ ಜೀವಿತ ನಿರೂಪಿಸಿದರು.