ಸಂಸ್ಕಾರ ಮತ್ತು ನೆಮ್ಮದಿಗಾಗಿ ಪುರಾಣ ಪ್ರವಚನ ಆಲಿಸಬೇಕು: ಬಸವಲಿಂಗ ಶ್ರೀ

KannadaprabhaNewsNetwork |  
Published : Apr 30, 2025, 12:34 AM IST
ಶರಣಬಸವೇಶ್ವರ ಪ್ರವಚನ ಮಂಗಲ ಹಾಗು ಸಾಮೂಹಿಕ ವಿವಾಹ ಉದ್ದೇಶಿಸಿ ಗವಿಮಠದ ಬಸವಲಿಂಗ ಶ್ರೀಗಳು ಮಾತನಾಡಿದರು. | Kannada Prabha

ಸಾರಾಂಶ

ಉತ್ತಮ ಸಂಸ್ಕಾರ ಮತ್ತು ನೆಮ್ಮದಿಗಾಗಿ ಪ್ರವಚನ ಆಲಿಸಬೇಕು. ಪುರಾಣ ಮತ್ತು ಪ್ರವಚನಕ್ಕೆ ಹೆಚ್ಚಿನ ಆದ್ಯತೆ ನೀಡಿ ಇಂದಿನ ಯುವ ಪೀಳಿಗೆ ಮಾನವೀಯತೆ ಅಳವಡಿಸಿಕೊಳ್ಳಬೇಕು ನವಲಗುಂದ ಗವಿಮಠದ ಶ್ರೀ ಬಸವಲಿಂಗ ಮಹಾ ಸ್ವಾಮಿಗಳು ಹೇಳಿದರು.

ಹೊಳೆಆಲೂರ: ಉತ್ತಮ ಸಂಸ್ಕಾರ ಮತ್ತು ನೆಮ್ಮದಿಗಾಗಿ ಪ್ರವಚನ ಆಲಿಸಬೇಕು. ಪುರಾಣ ಮತ್ತು ಪ್ರವಚನಕ್ಕೆ ಹೆಚ್ಚಿನ ಆದ್ಯತೆ ನೀಡಿ ಇಂದಿನ ಯುವ ಪೀಳಿಗೆ ಮಾನವೀಯತೆ ಅಳವಡಿಸಿಕೊಳ್ಳಬೇಕು ನವಲಗುಂದ ಗವಿಮಠದ ಶ್ರೀ ಬಸವಲಿಂಗ ಮಹಾ ಸ್ವಾಮಿಗಳು ಹೇಳಿದರು.ಅವರು ಬೆನಹಾಳ ಗ್ರಾಮದಲ್ಲಿ ನಡೆದ ಪ್ರತಿ ವರ್ಷದಂತೆ ಶ್ರೀ ಶರಣಬಸವೇಶ್ವರ ಪುರಾಣ ಮಂಗಲ ಹಾಗೂ ಸಾಮೂಹಿಕ ವಿವಾಹ ಕಾರ್ಯಕ್ರಮದ ಸಾನಿಧ್ಯ ವಹಿಸಿ ಮಾತನಾಡಿದರು.ಏಪ್ರಿಲ್ 6ರಿಂದ 27ರ ವರೆಗೆ ನಿರಂತರವಾಗಿ ಸಂಜೆ ಶರಣ ಬಸವೇಶ್ವರ ಪುರಾಣದಲ್ಲಿ ಅವರ ಜೀವನ ಚರಿತ್ರೆ ಹಾಗೂ ಅವರು ಸಮಾಜಕ್ಕೆ ಕೊಟ್ಟ ಕೊಡುಗೆ ಕುರಿತು ಪುರಾಣದಲ್ಲಿ ಮಾನವೀಯ ಮೌಲ್ಯಗಳು, ಧಾರ್ಮಿಕ ಕಾರ್ಯಗಳು, ಒಳ್ಳೆಯ ಗುಣಗಳನ್ನು ತಿಳಿದಿದ್ದೀರಿ. ಈಗಿನ ಯುವ ಪೀಳಿಗೆ ಪುರಾಣ ಪ್ರವಚನದ ಕಡೆ ಒಲವು ನೀಡಿ, ಉತ್ತಮ ಸಮಾಜ ನಿರ್ಮಾಣ ಮಾಡುವುದರಲ್ಲಿ ಮುಂದಾಗಬೇಕು. ಪುರಾಣ ಪ್ರವಚನ ಆಲಿಸುವುದರಿಂದ ಮಾನವನ ಜೀವನ ಸಂಸ್ಕಾರ ಮತ್ತು ನೆಮ್ಮದಿ ಹೆಚ್ಚುತ್ತಾ ಹೋಗುತ್ತದೆ ಎಂದು ಅವರು ಹೇಳಿದರು.ಕಾರ್ಯಕ್ರಮದಲ್ಲಿ ಪ್ರವಚನಕಾರರಾಗಿ ಬೀದರ್ ಜಿಲ್ಲೆಯ ಗದಿಗೌಡಗಾವ್‌ನ ಹಾವಗಿ ಲಿಂಗೇಶ್ವರ ಸಂಸ್ಥಾನ ಹಿರೇಮಠದ ಶ್ರೀ ಶಾಂತವೀರ ಶಿವಾಚಾರ್ಯ ಸ್ವಾಮಿಗಳು, ನವಲಗುಂದ ಗವಿಮಠದ ಶ್ರೀ ಬಸವಲಿಂಗ ಸ್ವಾಮಿಗಳು, ಹುಣಸಘಟ್ಟದ ಗುರುಮೂರ್ತಿ ಶಿವಾಚಾರ್ಯ ಸ್ವಾಮಿಗಳು, ಬದಾಮಿ ನವಗ್ರಹ ಹಿರೇಮಠದ ಶ್ರೀ ಶಿವಪುಜಾ ಶಿವಾಚಾರ್ಯ ಸ್ವಾಮಿಗಳು, ಗುಳೇದಗುಡ್ಡದ ಒಪ್ಪತ್ತೇಶ್ವರ ಸ್ವಾಮಿಗಳು, ಕೊತಬಾಳ ಅಂಕಲಗಿಮಠದ ಗಂಗಾಧರ ಸ್ವಾಮಿಗಳು, ಕಲಕೇರಿ ವೀರಯ್ಯ ಅಜ್ಜನವರು ಸಾನಿಧ್ಯ ವಹಿಸಿದ್ದರು.

ಈ ಸಂದರ್ಭದಲ್ಲಿ ಶ್ರೀರಾಮಲಿಂಗೇಶ್ವರ ಸೇವಾ ಸಮಿತಿಯ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ಬೆನಹಾಳ ಮತ್ತು ಹುನಗುಂಡಿ ಗ್ರಾಮದ ಭಕ್ತರು ಅಕ್ಕನ ಬಳಗದವರು ಗ್ರಾಮದುದ್ದಕ್ಕೂ ನಡೆದ ಕುಂಭ, ರಾಮಲಿಂಗೇಶ್ವರ ಭಾವಚಿತ್ರ, ಶರಣಬಸವೇಶ್ವರ ಭಾವಚಿತ್ರ ಮೆರವಣಿಗೆಯಲ್ಲಿ ಗುರು ಹಿರಿಯರು, ಯುವಕರು ಮಹಿಳೆಯರು ಯಶಸ್ವಿಗೊಳಿಸಿದರು.

PREV

Recommended Stories

ಕೇಂದ್ರದಂತೆ ರಾಜ್ಯ ಸರ್ಕಾರ ಮಾದರಿ ಹೆಜ್ಜೆ ಇರಿಸುವುದೇ?
ಜಿಎಸ್ಟಿ ಕಡಿತದ ಲಾಭ ಜನರಿಗೆ ಸಿಗುವಂತಾಗಲಿ: ಸಿಎಂ ಆಶಯ