ಕನ್ನಡಪ್ರಭ ವಾರ್ತೆ ಐಗಳಿಪೂರ್ವಜರು ಪುಂಡಿಪಲ್ಲೆ, ಶೇಂಗಾ ಚಟ್ನಿ, ಬೆಣ್ಣೆ, ತಿಂದು ಆರೋಗ್ಯವಂತರಾಗಿದ್ದರು. ಜತೆಗೆ ಶತಕ ವರ್ಷ ಸುಂದರ ಬದುಕನ್ನು ಕಟ್ಟಿಕೊಂಡಿದ್ದರು. ನೆಮ್ಮದಿಯ ಜೀವನ ಸಾಗಿಸುತ್ತಿದ್ದರು. 21ನೇ ಶತಮಾನದಲ್ಲಿ ಈಗ ಬೇಕರಿ ಅಂಗಡಿಯ ಪದಾರ್ಥ ತಿಂದು ಚಿಕ್ಕ ವಯಸ್ಸಿನಲ್ಲಿ ಸೊಂಟುಬಾಗಿ ಶರೀರ ಸಂಪತ್ತು ಕಳೆದುಕೊಳ್ಳುತ್ತಿದ್ದಾರೆ. ಅಲ್ಲದೇ ಆಯಸ್ಸು ಸಹ ಕಮ್ಮಿಯಾಗಿದೆ ಎಂದು ಕಕಮರಿಯ ಆತ್ಮಾರಾಮ ಸ್ವಾಮೀಜಿ ಕಳವಳ ವ್ಯಕ್ತಪಡಿಸಿದರು.
ಸದಲಗಾದ ಡಾ.ಶ್ರದ್ಧಾನಂದ ಪೂಜ್ಯರು ಮಾತನಾಡಿ, ಯಾವುದೇ ವಸ್ತುವಿಗೆ ಬೆಲೆ ಕಟ್ಟಬಹುದು. ಆದರೆ, ಮಾನವನ ಬೆಲೆ ಕಟ್ಟಲು ಎಂದಿಗೂ ಸಾಧ್ಯವಿಲ್ಲ. ಬಿಡುವಿನ ಸಮಯದಲ್ಲಿ ಶಿವಾನುಭವ ಕಾರ್ಯಕ್ರಮದಲ್ಲಿ ಭಾಗಿಯಾಗಿರಿ ದಾನ, ಧರ್ಮ ಪರೋಪಕಾರಿ ಮಾಡುವುದನ್ನು ರೂಢಿಸಿಕೊಳ್ಳಿರಿ. ಒತ್ತಡದ ಜೀವನ ಸಾಗಿಸುವುದು ಬೇಡ. ನೆಮ್ಮದಿಯ ಜೀವನ ಸಾಗಿಸಿರಿ. ಗೃಹಸ್ಥರು ಯಾವಾಗಲೂ ಚಿಂತೆಯಲ್ಲಿ ತೊಡಗಿದ್ದಾರೆ. ಸಾಧು, ಸಂತರು ಸಂತಸದಿಂದ ಜೀವನ ಸಾಗಿಸುತ್ತಾರೆ ಎಂದರು.
ಶ್ರೀರಾಮ ಕುಟೀರದ ತಾರಾಚಂದ ಅಧ್ಯಕ್ಷತೆ ವಹಿಸಿ ಆಶೀರ್ವಚನ ಮಾಡಿದರು. ಕನ್ನಾಳದ ಬಸವಲಿಂಗ ಸ್ವಾಮೀಜಿ, ಇಟನಾಳದ ಪೂಜ್ಯ ಸಿದ್ದೇಶ್ವರ ಸ್ವಾಮೀಜಿ, ಈರಣ್ಣ ಶಾಸ್ತ್ರಿಗಳಿಂದ ಪ್ರವಚನ ಹೇಳಿದರು. ರಾಮಚಂದ್ರ ಪೂಜಾರಿ ದಾಸಬೋಧ ಹೇಳಿದರು. ಸುಜಾತಾ ಸಂಗಡಿಗರಿಂದ ಭಕ್ತಿ ಪದ ಈ ವೇಳೆ ಗ್ರಾಪಂ ಸದಸ್ಯರಾದ ಭೀರಪ್ಪ ಹಿರೇಕುರುಬರ, ಜಯಶ್ರೀ ನಾಯಿಕ, ಲಕ್ಷ್ಮೀಬಾಯಿ ಹಿರೇಕುರುಬರ, ರಾವಸಾಬ ಕಾಳೆ, ಹಿರಿಯ ಪತ್ರಕರ್ತ ಮಲಗೌಡ ಪಾಟೀಲ ಸೇರಿದಂತೆ ನೂರು ಜನ ಶಿಬಿರಾರ್ಥಿಗಳು ಇದ್ದರು. 5 ದಿನ ಶಿಬಿರದ ಅನಿಸಿಕೆ ಹೇಳಿದರು. ರಾಮಕೃಷ್ಣ ಚಂದ್ರಸಾಲಿ ಸ್ವಾಗತಿಸಿದರು, ಕಲ್ಲಪ್ಪ ಗುಡೋಡಗಿ ವಂದಿಸಿದರು.