-ಬಾಲಛೇಡದಲ್ಲಿ ಕನಕದಾಸ, ಸಂಗೊಳ್ಳಿ ರಾಯಣ್ಣ ಮೂರ್ತಿ ಪ್ರತಿಷ್ಠಾಪನೆ
ಕನ್ನಡಪ್ರಭ ವಾರ್ತೆ ಸೈದಾಪುರ
ಶರಣರು, ಸಂತರು, ದಾಸರು ಹಾಕಿ ಕೊಟ್ಟ ಮಾರ್ಗದರ್ಶನದಲ್ಲಿ ಇಂದಿನ ಯುವಪೀಳಿಗೆ ನಿತ್ಯವೂ ಸಾಗಿದರೆ, ಮೂರ್ತಿಗಳ ಪ್ರತಿಷ್ಠಾಪನೆಯ ಗುರಿ ಮತ್ತು ಉದ್ದೇಶ ಸಾರ್ಥಕ ಆಗುತ್ತದೆ ಎಂದು ಶಾಸಕ ಶರಣಗೌಡ ಕಂದಕೂರ ಅಭಿಪ್ರಾಯಪಟ್ಟರು.ಸೈದಾಪುರ ಸಮೀಪದ ಬಾಲಛೇಡ ಗ್ರಾಮದಲ್ಲಿ ಮಂಗಳವಾರ ನೂತನವಾಗಿ ಪ್ರತಿಷ್ಠಾಪಿಸಿದ ಕನಕದಾಸ ಮತ್ತು ಸಂಗೊಳ್ಳಿ ರಾಯಣ್ಣ ಪುತ್ಥಳಿ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಶಿಕ್ಷಣದ ಕೊರತೆಯಿಂದ ಇಲ್ಲಿಯ ಜನರು ಸಾಕಷ್ಟು ಸಮಸ್ಯೆಗಳು ಎದುರಿಸುತ್ತಿದ್ದಾರೆ. ಕಾರಣ, ಮಕ್ಕಳಿಗೆ ಉತ್ತಮ ಶಿಕ್ಷಣ ನೀಡುವ ಮೂಲಕ ಇಂತಹ ದಾಸರ ಮತ್ತು ವೀರರ ತತ್ವ ಸಿದ್ಧಾಂತಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಿ ಎಂದರು.
ಭಗವಂತನಿಗೆ ದಾಸನಾದಾಗ ಮಾತ್ರ ಮಹಾತ್ಮರಾಗಲು ಸಾಧ್ಯ. ಮಕ್ಕಳಿಗೆ ಸಂಸ್ಕೃತಿ ಮತ್ತು ಉನ್ನತ ಶಿಕ್ಷಣ ಕೊಡಿಸಿ, ಅವರ ಭವಿಷ್ಯಕ್ಕಾಗಿ ಕೂಡಿಟ್ಟ ಹಣವನ್ನು ವೆಚ್ಚಮಾಡಿ. ಆದರೆ, ದೇವರ ಹೆಸರಲ್ಲಿ ದುಂದುವೆಚ್ಚಮಾಡಬೇಡಿ ಎಂದು ಶ್ರೀಗಳು ಹೇಳಿದರು.
ಆರಂಭದಲ್ಲಿ ಕಳಸ, ಕುಂಭದೊಂದಿಗೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ಭವ್ಯ ಮೆರವಣಿಗೆ ನಡೆಯಿತು. ತಿಂಥಣಿ ಬ್ರಿಡ್ಜ್‌ನ ಕನಕ ಗುರುಪೀಠ ಕಾಗಿನೆಲೆ ಮಠದ ಲಿಂಗಬೀರದೇವರು, ಸೋಮೇಶ್ವರಾನಂದ ಸ್ವಾಮಿ, ನಿಖಿಲ್.ವಿ ಶಂಕರ್, ವಿಶ್ವನಾಥ ನೀಲಹಳ್ಳಿ, ನಿರಂಜನರೆಡ್ಡಿ ಶರಣಿಕ ಕುಮಾರ ದೊಕಾ. ಕೆ. ಶೆಟ್ಟಿಹಳ್ಳಿ, ಚಂದ್ರುಗೌಡ ಸೈದಾಪುರ. ನರಸಪ್ಪ ಕವಡೆ, ಚಂದ್ರಶೇಖರ್ ವಾರದ, ಪ್ರಭುಲಿಂಗ ವಾರದ, ಸಣ್ಣಭೀಮಶಪ್ಪ ಜೇಗರ್, ಸಿದ್ದಣ್ಣಗೌಡ ಕಾಡಂಗೇರ್, ಮಲ್ಲಣ್ಣ ಐಕೂರು, ರವಿಂದ್ರಕುಮಾರ ಕಡೇಚೂರು, ಸಿದ್ದು ಪೂಜಾರಿ, ವಿಜಯ ಕಂದಳ್ಳಿ, ಬೀರಲಿಂಗಪ್ಪ ಕಿಲ್ಲನಕೇರಾ, ಪುಂಡಲಿಕ್, ಚಂದ್ರಶೇಖರ ಇದ್ದರು.
-4ವೈಡಿಆರ್7 : ಸೈದಾಪುರ ಸಮೀಪದ ಬಾಲಛೇಡ ಗ್ರಾಮದಲ್ಲಿ ಮಂಗಳವಾರ ಕನಕದಾಸ ಮತ್ತು ಸಂಗೊಳ್ಳಿರಾಯಣ್ಣ ಪುತ್ಥಳಿ ಲೋಕಾರ್ಪಣೆ ಕಾರ್ಯಕ್ರಮ ಶಾಸಕ ಶರಣಗೌಡ ಕಂದಕೂರ ಉದ್ಘಾಟಿಸಿದರು.