ಉಪೇಂದ್ರ ದಂಪತಿಗೆ ಆನ್‌ಲೈನ್ ವಂಚನೆ : ಖದೀಮರ ಜಾಡು ಪತ್ತೆ

KannadaprabhaNewsNetwork |  
Published : Sep 30, 2025, 12:00 AM ISTUpdated : Sep 30, 2025, 08:35 AM IST
Upendra

ಸಾರಾಂಶ

ಇತ್ತೀಚೆಗೆ ನಟ ಉಪೇಂದ್ರ ಹಾಗೂ ಅವರ ಪತ್ನಿ ಪ್ರಿಯಾಂಕಾ ಉಪೇಂದ್ರ ಅವರ ಹೆಸರಿನಲ್ಲಿ ಹಣ ವಸೂಲಿ ಪ್ರಕರಣದಲ್ಲಿ ಬಿಹಾರ ಮೂಲದ ಸೈಬರ್ ವಂಚಕರ ಪಾತ್ರ ಇರುವುದನ್ನು ಸದಾಶಿವನಗರ ಠಾಣೆ ಪೊಲೀಸರು ಪತ್ತೆ ಹಚ್ಚಿದ್ದಾರೆ.

 ಬೆಂಗಳೂರು :  ಇತ್ತೀಚೆಗೆ ನಟ ಉಪೇಂದ್ರ ಹಾಗೂ ಅವರ ಪತ್ನಿ ಪ್ರಿಯಾಂಕಾ ಉಪೇಂದ್ರ ಅವರ ಹೆಸರಿನಲ್ಲಿ ಹಣ ವಸೂಲಿ ಪ್ರಕರಣದಲ್ಲಿ ಬಿಹಾರ ಮೂಲದ ಸೈಬರ್ ವಂಚಕರ ಪಾತ್ರ ಇರುವುದನ್ನು ಸದಾಶಿವನಗರ ಠಾಣೆ ಪೊಲೀಸರು ಪತ್ತೆ ಹಚ್ಚಿದ್ದಾರೆ.

ತಾರಾ ದಂಪತಿ ಮೊಬೈಲ್ ಹ್ಯಾಕ್ ಮಾಡಿ ಅವರ ಸ್ನೇಹಿತರು ಹಾಗೂ ಕುಟುಂಬ ಸದಸ್ಯರಿಂದ 1.5 ಲಕ್ಷ ರು ಹಣವನ್ನು ಸೈಬರ್ ವಂಚಕರು ವಸೂಲಿ ಮಾಡಿದ್ದರು. ಈ ಹಣ ವರ್ಗಾವಣೆ ಜಾಡು ಹಿಡಿದು ಆರೋಪಿಗಳನ್ನು ಪೊಲೀಸರು ಗುರುತು ಹಿಡಿದಿದ್ದು, ವಂಚಕರ ಬಂಧನಕ್ಕೆ ಪೊಲೀಸರು ಕಾರ್ಯಾಚರಣೆ ಮುಂದುವರೆಸಿದ್ದಾರೆ.

ಕೆಲ ದಿನಗಳ ಹಿಂದೆ ಆನ್‌ಲೈನ್ ಶಾಪಿಂಗ್‌ಗೆ ನೀಡಿದ್ದ ಉಪೇಂದ್ರ ಹಾಗೂ ಅವರ ಪ್ರಿಯಾಂಕ ಉಪೇಂದ್ರ ಅವರ ಮೊಬೈಲ್ ಸಂಖ್ಯೆಗಳನ್ನು ದುಷ್ಕರ್ಮಿಗಳು ಹ್ಯಾಕ್ ಮಾಡಿದ್ದರು. ಬಳಿಕ ತುರ್ತು 50 ಸಾವಿರ ರು. ನೆರವು ನೀಡುವಂತೆ ಕೋರಿ ತಾರಾ ದಂಪತಿ ಹೆಸರಿನಲ್ಲಿ ಅವರ ಕುಟುಂಬ ಸದಸ್ಯರು ಹಾಗೂ ಸ್ನೇಹಿತರಿಗೆ ಆರೋಪಿಗಳು ವಾಟ್ಸಪ್ ಸಂದೇಶ ಕಳುಹಿಸಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ ಕೆಲವರು ಹಣ ಕಳುಹಿಸಿದ್ದರು. ಈ ಸೈಬರ್ ವಂಚನೆ ಬಗ್ಗೆ ತಿಳಿದ ಕೂಡಲೇ ಸದಾಶಿವನಗರ ಠಾಣೆ ಪೊಲೀಸರಿಗೆ ಉಪೇಂದ್ರ ದಂಪತಿ ದೂರು ಕೊಟ್ಟಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.
Read more Articles on

Recommended Stories

ಪೆರಿಯಶಾಂತಿ, ಅಡ್ಡಹೊಳೆಯಲ್ಲಿ ಆನೆ ದಾಟು ಕಾಮಗಾರಿ ಪೂರ್ಣ
ಶಿರೋಮಣಿ ಪ್ರಶಸ್ತಿಯಿಂದ ಸಿದ್ದಕಟ್ಟೆ ಸಹಕಾರ ಸಂಘದ ಹೆಸರು ರಾಜ್ಯಾದ್ಯಂತ ಪಸರಿಸಿದೆ: ಸಂದೇಶ್ ಶೆಟ್ಟಿ