ಪಿಎಂ ಕಿಸಾಸ್‌ಗೆ ಜಿಲ್ಲೆಯಲ್ಲಿ 195 ಮಂದಿ ಮಾತ್ರ ಅರ್ಹರು!

KannadaprabhaNewsNetwork |  
Published : Aug 21, 2026, 01:15 AM IST
ಚಿತ್ರದುರ್ಗ ಮೂರನೇ ಪುಟದ ಲೀಡ್ | Kannada Prabha

ಸಾರಾಂಶ

ಚಿತ್ರದುರ್ಗರೈತರನ್ನು ಉತ್ತೇಜಿಸುವ ಸಂಬಂಧ ಪಿಎಂ ಕಿಸಾನ್ ಯೋಜನೆಯಡಿ ಪ್ರತಿ ನಾಲ್ಕು ತಿಂಗಳಿಗೊಮ್ಮೆ ಡಿಬಿಟಿ ಮೂಲಕ ರೈತರ ಖಾತೆಗೆ ನೇರವಾಗಿ ಜಮೆ ಆಗುತ್ತಿದ್ದ ಎರಡು ಸಾವಿರ ರುಪಾಯಿ ಮುಂದಿನ ತಿಂಗಳು ಬರುವುದೇ ಡೌಟು.

-ಹೆಬ್ಬೆಟ್ಟು ಇಲ್ಲವೇ ಮುಖ ಕೊಡದಿದ್ರೆ ರೈತರಿಗೆ ₹ 2000 ಬರಲ್ಲ । 1,51,693 ಫಲಾನುಭವಿಗಳಲ್ಲಿ 1,51,498 ರೈತರ ಇ-ಕೆವೈಸಿ ಬಾಕಿಕನ್ನಡಪ್ರಭ ವಾರ್ತೆ, ಚಿತ್ರದುರ್ಗ

ರೈತರನ್ನು ಉತ್ತೇಜಿಸುವ ಸಂಬಂಧ ಪಿಎಂ ಕಿಸಾನ್ ಯೋಜನೆಯಡಿ ಪ್ರತಿ ನಾಲ್ಕು ತಿಂಗಳಿಗೊಮ್ಮೆ ಡಿಬಿಟಿ ಮೂಲಕ ರೈತರ ಖಾತೆಗೆ ನೇರವಾಗಿ ಜಮೆ ಆಗುತ್ತಿದ್ದ ಎರಡು ಸಾವಿರ ರುಪಾಯಿ ಮುಂದಿನ ತಿಂಗಳು ಬರುವುದೇ ಡೌಟು.

ಪಿಎಂ ಕಿಸಾನ್ ಯೋಜನೆಯಡಿ ನಕಲಿ ಫಲಾನುಭವಿಗಳನ್ನು ತಡೆದು, ಪಾರದರ್ಶಕವಾಗಿ ಹಣ ಜಮೆ ಮಾಡಲು ಕೇಂದ್ರ ಮುಂದಾಗಿರುವುದರ ಪರಿಣಾಮವಿದು. 24 ನೇ ಕಂತಿನ ಹಣ ಪಡೆಯಬೇಕೆಂದರೆ ಕಂಪ್ಯೂಟರ್‌ಗೆ ಹೆಬ್ಬೆಟ್ಟು ಇಲ್ಲವೇ ಮುಖ ನೀಡಲೇಬೇಕು. ಬಯೋಮೆಟ್ರಿಕ್ ಫೇಸ್ ಆಧಾರಿತ ಇ-ಕೆವೈಸಿ ಕಡ್ಡಾಯ.

ಇ-ಕೆವೈಸಿ ಮಾಡಿಸದಿದ್ದರೆ ಮುಂದಿನ ಕಂತಿನ ಹಣದಿಂದ ವಂಚಿತರಾಗಬೇಕಾಗುತ್ತದೆ. ನೇರ ನಗದು ವರ್ಗಾವಣೆ ಮೂಲಕ ರೈತರ ಖಾತೆಗೆ ಹಣ ಸೇರುತ್ತಿದ್ದರೂ ಈ ಬಾರಿ ಕಂತು ಬಿಡುಗಡೆಗೆ ಕೇಂದ್ರ ಸರ್ಕಾರ ಮಾರ್ಗಸೂಚಿ ಬಿಡುಗಡೆ ಮಾಡಿದೆ. ಬ್ಯಾಂಕ್ ಖಾತೆಗೆ ಆಧಾರ್ ಕಾರ್ಡ್‍ನ್ನು ಎನ್‍ಪಿಸಿಐ ಜತೆ ಲಿಂಕ್ ಮಾಡಿಸಿದ್ದರೂ ಈ ಸಲ ಪ್ರತಿಯೊಬ್ಬ ಫಲಾನುಭವಿ ಬಯೋಮೆಟ್ರಿಕ್ ಅಥವಾ ಫೇಸ್ ಆಧಾರಿತ ಇ-ಕೆವೈಸಿ ಮಾಡಿಸಬೇಕು. ಈ ಮೂಲಕ ಮೃತರನ್ನು ಕೈಬಿಟ್ಟು ಅರ್ಹ ಫಲಾನುಭವಿಗಳ ಪತ್ತೆಗೆ ಸರ್ಕಾರ ಮುಂದಾಗಿದೆ.

ಈ ಹಿಂದೆ ರೈತರು ಆಧಾರ್ ಒಟಿಪಿ ಆಧಾರಿತ ಇ-ಕೆವೈಸಿ ಮಾಡಿಸುತ್ತಿದ್ದರು. ಇದರಿಂದ ಮೃತಪಟ್ಟ ಖಾತೆದಾರರ ಅಥವಾ ಫಲಾನುಭವಿಗಳ ಖಾತೆಗೂ ಹಣ ವರ್ಗಾವಣೆಕೊಂಡ ಪ್ರಕರಣಗಳು ಬೆಳಕಿಗೆ ಬಂದಿದ್ದವು. ಹೀಗಾಗಿ ಕೇಂದ್ರ ಸರ್ಕಾರ ಬಯೋಮೆಟ್ರಿಕ್ ಅಥವಾ ಫೇಸ್ ಆಧಾರಿತ ಇ-ಕೆವೈಸಿಗೆ ಮಾತ್ರ ಅವಕಾಶ ನೀಡಿ, ಒಟಿಪಿ ಆಧಾರಿತ ಇ-ಕೆವೈಸಿಗೆ ಕಡಿವಾಣ ಹಾಕಿದೆ.

ಜಿಲ್ಲೆಯಲ್ಲಿ ಒಟ್ಟು 1,51,693 ಫಲಾನುಭವಿಗಳಿದ್ದು, ಈ ಪೈಕಿ 1,51,498 ರೈತರ ಇ-ಕೆವೈಸಿ ಬಾಕಿ ಉಳಿದಿದೆ. ಚಿತ್ರದುರ್ಗದಲ್ಲಿ 31,736, ಚಳ್ಳಕೆರೆಯಲ್ಲಿ 33,846, ಹಿರಿಯೂರಿನಲ್ಲಿ 24,875, ಹೊಳಲ್ಕೆರೆಯಲ್ಲಿ 25,895, ಹೊಸದುರ್ಗದಲ್ಲಿ 24,023 ಹಾಗೂ ಮೊಳಕಾಲ್ಮೂರಿನಲ್ಲಿ 11,123 ಫಲಾನುಭವಿಗಳ ಇ-ಕೆವೈಸಿ ಬಾಕಿ ಇದೆ.

ರೈತರು ಸಾಮಾನ್ಯ ಸೇವಾ ಕೇಂದ್ರಗಳು, ಗ್ರಾಮ ಒನ್, ಕರ್ನಾಟಕ ಒನ್ ಹಾಗೂ ರೈತ ಸಂಪರ್ಕ ಕೇಂದ್ರಗಳಲ್ಲಿ ಬಯೋಮೆಟ್ರಿಕ್ ನೀಡಿ ಇ-ಕೆವೈಸಿ ಪೂರ್ಣಗೊಳಿಸಬಹುದು. ಮುಖ ದೃಢೀಕರಣ ಆಧಾರಿತ ಇ-ಕೆವೈಸಿ ಮಾಡಿಸಿಕೊಳ್ಳಲು ಪ್ರತಿ ಗ್ರಾಮದ ವಿಲೇಜ್ ನೋಡಲ್ ಅಧಿಕಾರಿಗಳಾದ ಕೃಷಿ ಸಖಿ, ಪಶು ಸಖಿ ಹಾಗೂ ರೈತ ಸಂಪರ್ಕ ಕೇಂದ್ರಗಳನ್ನು ಸಂಪರ್ಕಿಸಬಹುದು ಹಾಗೂ ರೈತರು ಸ್ವತಃ ಪಿಎಂ ಕಿಸಾನ್ ಮೊಬೈಲ್ ಅಪ್ಲಿಕೇಶನ್ ಮೂಲಕ ಇ-ಕೆವೈಸಿ ಮಾಡಿಕೊಳ್ಳಬಹುದು.---ಪೋಟೋ ಫೈಲ್ ನೇಮ್ 20 ಸಿಟಿಡಿ3--

--------------

ಕೋಟ್

ಇಕೆವೈಸಿ ಕಡ್ಡಾಯ

ಪಿಎಂ ಕಿಸಾನ್ ಯೋಜನೆಯಡಿ ರೈತರು ಸೆಪ್ಟೆಂಬರ್ ತಿಂಗಳಲ್ಲಿ 24 ನೇ ಕಂತಿನ ಹಣ ಪಡೆಯಬೇಕಾದರೆ ಬಯೋಮೆಟ್ರಿಕ್ ಇಕೆವೈಸಿ ಕಡ್ಡಾಯ. ಪಿಎಂ ಕಿಸಾನ್ ಮೊಬೈಲ್ ಅಪ್ಲಿಕೇಶನ್ ಗೂಗಲ್ ಪ್ಲೇ ಸ್ಟೋರ್ ನಲ್ಲಿ ಲಭ್ಯವಿದೆ. https://play.google.com/store/apps/details?id=com.nic.project.pmkisan ಲಿಂಕ್ ಬಳಸಿ ರೈತರು ಡೌನ್ಲೋಡ್ ಮಾಡಿಕೊಳ್ಳಬಹುದು. ಇಲ್ಲವೇ ಗ್ರಾಮ ಒನ್ ಕೇಂದ್ರ ಸಂಪರ್ಕಿಸಬಹುದು.

----------

ಬಿ. ಮಂಜುನಾಥ್, ಜಂಟಿ ಕೃಷಿ ನಿರ್ದೇಶಕ ಚಿತ್ರದುರ್ಗ.

===(ಪೋಟೋ ಮಂಜುನಾಥ್)

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಹೊಕ್ರಾಣಿ: ಬಾವಿಯಲ್ಲಿ ಯುವತಿ ಶವ ಪತ್ತೆ
ಮುದಗಲ್‌: ಈದ್ ಮಿಲಾದ್ ಹಬ್ಬದ ಶಾಂತಿ ಸಭೆ