ಶಿವಾನಂದ ಗೊಂಬಿ
ಕಳೆದ ವರ್ಷ ಬಜೆಟ್‌ನಲ್ಲಿ ಘೋಷಿಸಿದ ಯೋಜನೆಗಳ ಪೈಕಿ ಈ ಎರಡಕ್ಕೆ ಸರ್ಕಾರ ಅನುದಾನ ನೀಡಿರುವುದು. ಉಳಿದ ಎಲ್ಲ ಯೋಜನೆಗಳು ಬರೀ ಘೋಷಣೆಗಳಾಗಿಯೇ ಉಳಿದಿವೆ.
ಏನೇನು ಘೋಷಿಸಿತ್ತು?: ಬೆಣ್ಣಿಹಳ್ಳ ಪ್ರವಾಹ ತಡೆಗೆ ಗೋಡೆ ನಿರ್ಮಿಸುವ ಯೋಜನೆ, ಬಯೋ ಸಿಎನ್‌ಜಿ ಘಟಕ ಸ್ಥಾಪನೆ, ಇಂಟಿಗ್ರೆಟೆಡ್ ಟೌನ್‌ಶಿಪ್, ಕ್ರಿಟಿಕಲ್ ಕೇರ್ ಬ್ಲಾಕ್, ಕೈಗಾರಿಕಾ ಕಾರಿಡಾರ್‌ನಡಿ ಧಾರವಾಡದಲ್ಲಿ 6 ಸಾವಿರ ಎಕರೆ ಪ್ರದೇಶಾಭಿವೃದ್ಧಿ (ನೋಡ್), ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಗೆ ₹200 ಕೋಟಿ, ಕೌಶಲ್ಯ ಅಭಿವೃದ್ಧಿ ಕೇಂದ್ರ, ವಾಲ್ಮಿ ಉನ್ನತೀಕರಣ.. ತಡರಾತ್ರಿ ವರೆಗೂ ನಗರ ಜೀವನ.. ಇವೆಲ್ಲವೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕಳೆದ ಬಜೆಟ್‌ನಲ್ಲಿ ಹುಬ್ಬಳ್ಳಿ-ಧಾರವಾಡ ಜಿಲ್ಲೆಗೆ ಘೋಷಿಸಿರುವ ಯೋಜನೆಗಳು.ಈಡೇರಿದ್ದು ಏನೇನು?: ಬೆಣ್ಣಿಹಳ್ಳ ಪ್ರವಾಹ ಬ್ರೇಕ್ ಹಾಕಬೇಕೆಂಬ ಉದ್ದೇಶದಿಂದ ತಡೆಗೋಡೆ ನಿರ್ಮಿಸಲು ಕರ್ನಾಟಕ ನೀರಾವರಿ ನಿಗಮ ₹1652 ಕೋಟಿ ಯೋಜನೆ ಸಿದ್ಧಪಡಿಸಿ ಸರ್ಕಾರಕ್ಕೆ ಕಳುಹಿಸಿತ್ತು. ಆದರೆ ಸರ್ಕಾರ ಇದನ್ನು ಪಕ್ಕಕ್ಕೆ ಸರಿಸಿ ಬರೀ ₹200 ಕೋಟಿ ಬಿಡುಗಡೆ ಮಾಡಿದೆ. ಆ ಕೆಲಸವಿನ್ನೂ ಶುರುವಾಗಿಲ್ಲ. ಟೆಂಡರ್ ಪ್ರಕ್ರಿಯೆ ನಡೆದಿದೆ.
ಈಡೇರದ ಯೋಜನೆಗಳಿವು: ಜನರ ಆರೋಗ್ಯದ ದೃಷ್ಟಿಯಿಂದ ಹುಬ್ಬಳ್ಳಿ ಅಥವಾ ಧಾರವಾಡದಲ್ಲಿ ಕ್ರಿಟಿಕಲ್ ಕೇರ್ ಬ್ಲಾಕ್ ಮಾಡುವುದಾಗಿ ಘೋಷಿಸಿತ್ತು. ಆದರೆ ಈ ಬಗ್ಗೆ ಈ ವರೆಗೂ ಚಕಾರ ಕೂಡ ಎತ್ತುವ ಗೋಜಿಗೆ ಸರ್ಕಾರ ಹೋಗಿಲ್ಲ.
ಇನ್ನು ಬೆಂಗಳೂರು- ಮುಂಬೈ ಕೈಗಾರಿಕಾ ಕಾರಿಡಾರ್‌ನಿಂದ ಅನುಕೂಲವಾಗಲೆಂಬ ಉದ್ದೇಶದಿಂದ 6 ಸಾವಿರ ಎಕರೆ ಪ್ರದೇಶವನ್ನು ಗುರುತಿಸಿ ಕೈಗಾರಿಕೆಗಾಗಿ ಅಭಿವೃದ್ಧಿಪಡಿಸುವುದಾಗಿ ಹೇಳಿಕೊಂಡಿತ್ತು. ಆ ಕೆಲಸವೂ ಶುರುವಾಗಿಲ್ಲ.
ಹೀಗೆ ಸರ್ಕಾರ ಘೊಷಿಸಿದ್ದಷ್ಟು ಕೊಟ್ಟಿಲ್ಲ. ಆದರೆ ಅಲ್ಪಸ್ವಲ್ಪ ಕೊಟ್ಟಿರುವುದಂತೂ ಸತ್ಯ.
ತಡರಾತ್ರಿವರೆಗೂ ನಗರ ಜೀವನ: ಕಳೆದ ಬಜೆಟ್‌ನಲ್ಲಿ ಬೆಂಗಳೂರಿನಂತೆ ಹುಬ್ಬಳ್ಳಿಯಲ್ಲೂ ತಡರಾತ್ರಿ 1ರ ವರೆಗೆ ಜನಜೀವನ ನಡೆಯಲಿದೆ ಎಂದು ತಿಳಿಸಿತ್ತು. ಅಂದರೆ ಹೋಟೆಲ್, ಬಾರ್ ಆ್ಯಂಡ್ ರೆಸ್ಟೋರೆಂಟ್‌ಗಳೆಲ್ಲ 1ರ ವರೆಗೆ ತೆರೆಯಲಿವೆ ಎಂದು ಹೇಳಿಕೊಂಡಿತ್ತು. ಹಾಗೆ ನೋಡಿದರೆ ಅನಧಿಕೃತವಾಗಿ ಅದಕ್ಕಿಂತ ಮುಂಚೆನಿಂದಲೂ ರಾತ್ರಿ 2 ವರೆಗೂ ನಡೆಯುತ್ತಿದ್ದವು. ಬಜೆಟ್ ಘೋಷಣೆ ಬಳಿಕವೂ ಅದು ಮುಂದುವರಿದಿದೆ ಅಷ್ಟೇ.