ತಾಜಬಾವಡಿಯಲ್ಲಿ ಮನೆಗಳ ಗಣಪತಿಗೆ ಮಾತ್ರ ಅವಕಾಶ

KannadaprabhaNewsNetwork |  
Published : Sep 05, 2026, 02:45 AM IST
 | Kannada Prabha

ಸಾರಾಂಶ

ವಿಜಯಪುರ: ತಾಜ್‌ಬಾವಡಿ ಸ್ಮಾರಕವನ್ನು ರಾಜ್ಯ ಸಂರಕ್ಷಿತ ಪಾರಂಪರಿಕ ಸ್ಮಾರಕವೆಂದು ಘೋಷಿಸಿದ್ದರಿಂದ ಸಾರ್ವಜನಿಕ ಗಣೇಶ ವಿಸರ್ಜನೆಗಾಗಿ ನಗರದ ತಾಜಬಾವಡಿ ಆವರಣದಲ್ಲಿ ಪುಷ್ಕರಣೆ ಕಾಮಗಾರಿಯನ್ನು ದೊಡ್ಡ ಗಾತ್ರದಲ್ಲಿ ನಿರ್ಮಿಸಲು ಸಾಧ್ಯವಿಲ್ಲವೆಂದು ವಲ್ಡ್‌ ಮ್ಯಾನುಮೇಂಟ್‌ ಫಂಡ್‌ ಫೌಂಡೇಷನ್ ಇಂಡಿಯಾದವರು ತಿಳಿಸಿದ್ದಾರೆ.

ಕನ್ನಡಪ್ರಭ ವಾರ್ತೆ ವಿಜಯಪುರ

ತಾಜಬಾವಡಿ ಸ್ಮಾರಕವನ್ನು ರಾಜ್ಯ ಸಂರಕ್ಷಿತ ಪಾರಂಪರಿಕ ಸ್ಮಾರಕವೆಂದು ಘೋಷಿಸಿದ್ದರಿಂದ ಸಾರ್ವಜನಿಕ ಗಣೇಶ ವಿಸರ್ಜನೆಗಾಗಿ ನಗರದ ತಾಜಬಾವಡಿ ಆವರಣದಲ್ಲಿ ಪುಷ್ಕರಣೆ ಕಾಮಗಾರಿಯನ್ನು ದೊಡ್ಡ ಗಾತ್ರದಲ್ಲಿ ನಿರ್ಮಿಸಲು ಸಾಧ್ಯವಿಲ್ಲವೆಂದು ವಲ್ಡ್‌ ಮ್ಯಾನುಮೇಂಟ್‌ ಫಂಡ್‌ ಫೌಂಡೇಷನ್ ಇಂಡಿಯಾದವರು ತಿಳಿಸಿದ್ದಾರೆ. ಪಾಲಿಕೆಯಿಂದ ತಾತ್ಕಾಲಿಕ ಹೊಂಡ ನಿರ್ಮಿಸಬೇಕಾದರೆ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳ ಅನುಮತಿ ಇಲ್ಲದೆ ಯಾವುದೇ ಕಾಮಗಾರಿ ಕೈಗೊಳ್ಳಲು ಸಾಧ್ಯವಿಲ್ಲ ಎಂಬ ವಿಷಯವನ್ನು ಪಾಲಿಕೆ ಸಾಮಾನ್ಯ ಸಭೆಯಲ್ಲಿ ತಿಳಿಸಲಾಗಿದೆ. ಹಾಗಾಗಿ ತಾಜಬಾವಡಿಯಲ್ಲಿ ಮನೆಯಲ್ಲಿನ ಸಣ್ಣ ಗಣಪತಿ ವಿಸರ್ಜನೆಗೆ ಮಾತ್ರ ಅವಕಾಶವಿದೆ ಎಂದು ಮಹಾನಗರ ಪಾಲಿಕೆ ಆಯುಕ್ತ ವಿಜಯಕುಮಾರ ಮೆಕ್ಕಳಕಿ ತಿಳಿಸಿದ್ದಾರೆ.

ತಾಜಬಾವಡಿ ಆವರಣದಲ್ಲಿ ಪ್ರಸ್ತುತ ಟಾಟಾ ಕನಲ್ಟನ್ಸಿ ಸರ್ವಿಸಿಸ್‌ ನವರ ಸಿಎಸ್‌ಆರ್‌ ಅನುದಾನದಲ್ಲಿ ನಿರ್ಮಿಸುತ್ತಿರುವ ಪುಷ್ಕರಣೆ/ಆಂಪಿ ಥಿಯೇಟರ್‌ ಕಾಮಗಾರಿ ಪ್ರಕಾರ ದೊಡ್ಡ ಗಾತ್ರದ ಗಣೇಶ ಮೂರ್ತಿಗಳನ್ನು ವಿಸರ್ಜಿಸಲು ಅವಕಾಶವಿಲ್ಲದಿರುವುದರಿಂದ ಪಾಲಿಕೆಯಿಂದ ಸಾರ್ವಜನಿಕ ಗಣಪತಿ ವಿಸರ್ಜನೆಗಾಗಿ ನಗರದ ವಾಪ್ತಿಯಲ್ಲಿ ಕೆ.ಎಸ್‌.ಆರ್‌.ಟಿ.ಸಿ ಸ್ಯಾಟ್‌ಲೈಟ್‌ ಬಸ್‌ ಸ್ಟ್ಯಾಂಡ್‌ ಹತ್ತಿರ ಮತ್ತು ಜೈಲ್‌ ದರ್ಗಾ ಹತ್ತಿರದ ಜಾಗೆಯಲ್ಲಿ, ಸಾರ್ವಜನಿಕ ಸ್ಥಳಗಳಲ್ಲಿ ಪ್ರತಿಷ್ಠಾಪಿಸಿದ ಗಣೇಶ ಮೂರ್ತಿಗಳನ್ನು ವಿಸರ್ಜಿಸಲು ಸಾರ್ವಜನಿಕ ಗಣೇಶ ವಿಸರ್ಜನಾ ಹೊಂಡಗಳನ್ನು ನಿರ್ಮಿಸಲಾಗುತ್ತಿದೆ.

ತಾಜಬಾವಡಿ ಆವರಣದಲ್ಲಿ ಕಾಯಂ ಪುಷ್ಕರಣಿಯಲ್ಲಿ ಕೇವಲ ಮನೆಗಳಲ್ಲಿ ಪ್ರತಿಷ್ಠಾಪಿಸಿದ ಗಣೇಶ ಮೂರ್ತಿಗಳನ್ನು ಮಾತ್ರ (ಸುಮಾರು ಎರಡು ಅಡಿಗಳವರೆಗೆ) ವಿಸರ್ಜಿಸಲು ಹಾಗೂ ಕೆ.ಎಸ್‌.ಆರ್‌.ಟಿ.ಸಿ ಸ್ಯಾಟ್‌ಲೈಟ್‌ ಬಸ್‌ ಸ್ಟ್ಯಾಂಡ್‌ ಹತ್ತಿರ ಮತ್ತು ಜೈಲ್‌ ದರ್ಗಾ ಹತ್ತಿರದ ಜಾಗೆಯಲ್ಲಿ ನಿರ್ಮಿಸಲಾಗುತ್ತಿರುವ ಕೃತಕ ಗಣೇಶ ಮೂರ್ತಿ ವಿಸರ್ಜನಾ ಹೊಂಡಗಳಲ್ಲಿ ಸಾರ್ವಜನಿಕ ಗಣೇಶ ಮೂರ್ತಿಗಳನ್ನು ವಿಸರ್ಜಿಸಲು ನಗರದ ಎಲ್ಲ ಗಣೇಶ ಮಂಡಳಿಗಳ ಪದಾಧಿಕಾರಿಗಳಿಗೆ ಹಾಗೂ ನಗರದ ಸಾರ್ವಜನಿಕರಿಗೆ ಸಹಕರಿಸುವಂತೆ ಆಯುಕ್ತ ವಿಜಯಕುಮಾರ ಮೆಕ್ಕಳಕಿ ಕೋರಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ತಾತ್ಕಾಲಿಕ ಆಸ್ಪತ್ರೆ ತೆರೆಯಲು ತಾಲೂಕು ಆರೋಗ್ಯ ಅಧಿಕಾರಿಯವರ ನೇತೃತ್ವದಲ್ಲಿ ರಕ್ಷಾ ಸಮಿತಿ ಸಭೆ
ಅನುದಾನ ಬಿಡುಗಡೆ ಮಾಡಿ ಅಭಿವೃದ್ಧಿಗೆ ಪ್ರೋತ್ಸಾಹ