ತಾಲೂಕಿನ ಅಭಿವೃದ್ಧಿಗಾಗಿ ರಾಜ್ಯ ಸರ್ಕಾರದ ಗಮನ ಸೆಳೆದು ಅನುದಾನವನ್ನು ಬಿಡುಗಡೆ ಮಾಡಿಸಿದ್ದಾರೆ,
ಕನ್ನಡಪ್ರಭ ವಾರ್ತೆ ಬೆಟ್ಟದಪುರ
ಪಿರಿಯಾಪಟ್ಟಣ ಅಭಿವೃದ್ಧಿಗೆ ಅನುಗುಣವಾಗಿ ರಾಜ್ಯ ಸರ್ಕಾರ ಅನುದಾನ ಬಿಡುಗಡೆ ಮಾಡಿ ಕ್ಷೇತ್ರದ ಅಭಿವೃದ್ಧಿಗೆ ಪ್ರೋತ್ಸಾಹ ನೀಡುತ್ತಿದೆ ಎಂದು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ತಿಳಿಸಿದರು.ಗ್ರಾಮದ ಸಿಡಿಲು ಮಲ್ಲಿಕಾರ್ಜುನ ಸ್ವಾಮಿ ಬೆಟ್ಟಕ್ಕೆ ಶುಕ್ರವಾರ 50 ಕೋಟಿ ರೂ. ವೆಚ್ಚದಲ್ಲಿ ರಸ್ತೆ ನಿರ್ಮಾಣಕ್ಕೆ ಗುದ್ದಲಿ ಪೂಜೆ ನೆರವೇರಿಸಿದ ನಂತರ ನಡೆದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಶಾಸಕ ಕೆ. ವೆಂಕಟೇಶ್ ಅವರು ತಾಲೂಕಿನ ಅಭಿವೃದ್ಧಿಗಾಗಿ ರಾಜ್ಯ ಸರ್ಕಾರದ ಗಮನ ಸೆಳೆದು ಅನುದಾನವನ್ನು ಬಿಡುಗಡೆ ಮಾಡಿಸಿದ್ದಾರೆ, ಬಹುದಿನಗಳ ಬೇಡಿಕೆಯಾಗಿದ್ದ ಸಿಡಿಲು ಮಲ್ಲಿಕಾರ್ಜುನ ಸ್ವಾಮಿಯ ಬೆಟ್ಟಕ್ಕೆ ಹೋಗುವ ರಸ್ತೆಯ ಕಾಮಗಾರಿಗೆ 50 ಕೋಟಿ ರೂ.ಗಳನ್ನು ಬಿಡುಗಡೆ ಮಾಡಲಾಗಿದೆ.ಇಲಾಖೆ ವತಿಯಿಂದ ಶಾಲೆ ಕಾಲೇಜು ನಿರ್ಮಾಣ ನೀರಾವರಿ ಯೋಜನೆಗಳಿಗೆ ಚಾಲನೆ ಸೇರಿದಂತೆ ಇನ್ನಿತರ ಅಭಿವೃದ್ಧಿ ಯೋಜನೆಗಳಿಗೆ ಸಹಕಾರ ನೀಡಲಾಗುತ್ತಿದೆ, ಸ್ಥಳೀಯ ಶಾಸಕ ಕೆ. ವೆಂಕಟೇಶ್ ಅವರ ಈ ಅವಿರತ ಶ್ರಮವನ್ನು ತಾಲೂಕಿನ ಜನತೆ ಎಂದಿಗೂ ಮರೆಯಬಾರದು ಎಂದರು.
ನಗರ ಅಭಿವೃದ್ಧಿ ಸಚಿವ ಡಾ. ಯತೀಂದ್ರ ಸಿದ್ದರಾಮಯ್ಯ ಮಾತನಾಡಿ, ತಾಲೂಕು ಬರಪೀಡಿತ ಪ್ರದೇಶದಿಂದ ಕೈ ಬಿಟ್ಟಿರುವುದಕ್ಕೆ ಕೇಂದ್ರ ಸರ್ಕಾರದ ಮಾನದಂಡಗಳು ಮೂಲ ಕಾರಣವಾಗಿದ್ದು, ಇದರಲ್ಲಿ ಯಾರೋಬ್ಬರ ಪಾತ್ರವಿಲ್ಲ ಅಲ್ಲದೆ ರಾಜ್ಯ ಸರ್ಕಾರ ಮತ್ತೊಂದು ಬರಪೀಡಿತ ಪ್ರದೇಶದ ಬೆಳೆ ಸಮೀಕ್ಷೆ ನಡೆಸುತ್ತಿದ್ದು, ಇದರಲ್ಲಿ ತಾಲೂಕನ್ನು ಬರಪೀಡಿತ ಪ್ರದೇಶವಾಗಿ ಘೋಷಿಸಲಾಗುವುದು.ಶಾಸಕ ಕೆ. ವೆಂಕಟೇಶ್ ಬಹಳ ಕಾಲದಲ್ಲಿ ಬೇಡಿಕೆ ಇದಾಗಿದೆ. ಈ ಬಗ್ಗೆ ಸಿದ್ದರಾಮಯ್ಯ ಅವರಿಗೆ ಒತ್ತಾಯ ಮಾಡಿದ್ದೆ. ಅವರು ಲೋಕೋಪಯೋಗಿ ಸಚಿವರಿಗೆ ವಿಶೇಷವಾಗಿ 50 ಕೋಟಿ ಅನುದಾನ ಮಂಜೂರು ಮಾಡಿಕೊಟ್ಟಿದಾರೆ, ಇವರಿಬ್ಬರಿಗೆ ಧನ್ಯವಾದಗಳು ಅರ್ಪಿಸುತ್ತೇನೆ. ಐತಿಹಾಸಿಕ ಕಾರ್ಯಕ್ರಮ ದೇವಸ್ಥಾನಕ್ಕೆ ರಸ್ತೆ ಮಾಡಿಯೇ ಬೆಟ್ಟ ಹತ್ತುವುದಾಗಿ ಶಪಥ ಮಾಡಿದ್ದೆ. ಅಭಿವೃದ್ಧಿಗೆ ಮನಸ್ಸಿರಬೇಕು. ಕ್ಷೇತ್ರದ ಸಮಸ್ಯೆ ಅರಿವಿರಬೇಕು. ಅಗತ್ಯತೆ ಪೂರೈಸುವ ಚಿಂತನೆ ಇರಬೇಕು. 9 ಚುನಾವಣೆಯಲ್ಲಿ ಎದುರಿಸಿದ್ದೇನೆ. 6 ಬಾರಿ ಗೆದ್ದಿದ್ದೇನೆ. ಪ್ರಾಮಾಣಿಕ ಕೆಲಸ ಮಾಡಿದ್ದೇನೆ. ಅಂದಿನಿ ಸರ್ಕಾರ ಸಹಕಾರ ನೀಡಿದ್ದಾರೆ. ಸಿದ್ದರಾಮಯ್ಯ ಅವರು ಅಭಿವೃದ್ಧಿಗೆ ಎಲ್ಲ ಸಹಕಾರ ನೀಡಿದ್ದಾರೆ.
ಕೆರೆ ನೀರೂ ತುಂಬಿಸುವ ಕೆಲಸ ಮಾಡಿದ್ದೇವೆ. ಪೈಪ್ ಲೈನ್ ಮಾಡುತ್ತಿದ್ದಾರೆ. ಮುಂದಿನ ದಿನ ಸಂಪೂರ್ಣವಾಗುತ್ತದೆ. 300 ಕೋಟಿ ಅನುದಾನಿತ ನೀಡಿದ್ದಾರೆ. ಕುಸುಮ ಸೋಲಾರ್ ಯೋಜನೆ ಮೂಲಕ ನಿರಂತರ ವಿದ್ಯುತ್ ನೀಡಲು ರೈತರಿಗೆ ಸಹಾಯವಾಗುತ್ತದೆ.ಶಿಕ್ಷಣ ಆದ್ಯತೆ ನೀಡಿ 85 ಸ್ಮಾರ್ಟ್ ಕ್ಲಾಸ್ ನೀಡಿದ್ದೇನೆ.ನಾನು ಮೈಮರೆತು ಕೂತಿಲ್ಲ. ಅಭಿವೃದ್ದಿ ಬಗ್ಗೆ ಇಲ ಸಲ್ಲದ ಆರೋಪ ಮಾಡುವುದು ಸರಿಯಲ್ಲ. ಅಭಿವೃದ್ಧಿಗೆ ಶ್ರಮಿಸಿದವರ ಪರವಾಗಿ ನಿಲ್ಲಬೇಕು ಎಂದರು.
ವಿಧಾನ ಪರಿಷತ್ ಸದಸ್ಯ ಕೆ. ಶಿವಕುಮಾರ್, ತಹಸಿಲ್ದಾರ್ ನಿಸರ್ಗ ಪ್ರಿಯ, ತಾಪಂ ಇಒ ಸುನಿಲ್ ಕುಮಾರ್, ಮೈಲೇಕ್ ಅಧ್ಯಕ್ಷ ಎಚ್.ಡಿ. ಗಣೇಶ್, ಲೋಕೋಪಯೋಗಿ ಇಲಾಖೆಯ ಹಿರಿಯ ಎಂಜಿನಿಯರ್‌ಮಂಜುನಾಥ್, ರಮೇಶ್, ಸತೀಶ್, ಯೋಗಾನಂದ, ದಿನೇಶ್, ಮುಖಂಡರಾದ ಡಾ.ಬಿ.ಜೆ. ವಿಜಯ್ ಕುಮಾರ್, ಕಾಂಗ್ರೆಸ್ ಮುಖಂಡ ಶಿವಕುಮಾರ್, ನಿರೂಪ, ರಾಜೇಶ್, ಕೆ. ಹೊಲದಪ್ಪ, ರೆಹಮದ್ ಜಾನ್ ಬಾಬು, ಪಿ. ಮಹದೇವ್, ಸರಸ್ವತಿ, ಅನಿತಾ ತೋಟಪ್ಪ ಶೆಟ್ಟಿ ಇದ್ದರು.