ಐವರ ಪೈಕಿ ಓರ್ವ ಮಾತ್ರ ಅಕ್ರಮ ಬಾಂಗ್ಲಾದ ಪ್ರಜೆ: ಡಿಸಿಪಿ ಸ್ಪಷ್ಟನೆ

KannadaprabhaNewsNetwork |  
Published : Nov 23, 2026, 04:00 AM IST
Veera Loka (5) | Kannada Prabha

ಸಾರಾಂಶ

ವರ್ತೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಅಕ್ರಮ ಬಾಂಗ್ಲಾದೇಶಿ ಪ್ರಜೆಗಳು ವಾಸವಾಗಿರುವ ಕುರಿತು ಜಾಲತಾಣಗಳಲ್ಲಿ ವಿಡಿಯೋವೊಂದು ವೈರಲ್‌ ಆದ ಬೆನ್ನಲ್ಲೆ ಪೊಲೀಸರು ಐವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾಗ ಈ ಪೈಕಿ ಒಬ್ಬಾತ ಮಾತ್ರ ಬಾಂಗ್ಲಾ ದೇಶದ ಪ್ರಜೆಯಾಗಿರುವುದು ಕಂಡು ಬಂದಿದೆ.

-ಜಾಲತಾಣಗಳಲ್ಲಿ ವೈರಲ್‌ ಆಗಿದ್ದ ವಿಡಿಯೋ-ಉಳಿದ ನಾಲ್ವರು ಅಸ್ಸಾಂನ ನಿವಾಸಿಗಳುಕನ್ನಡಪ್ರಭ ವಾರ್ತೆ ಬೆಂಗಳೂರು

ವರ್ತೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಅಕ್ರಮ ಬಾಂಗ್ಲಾದೇಶಿ ಪ್ರಜೆಗಳು ವಾಸವಾಗಿರುವ ಕುರಿತು ಜಾಲತಾಣಗಳಲ್ಲಿ ವಿಡಿಯೋವೊಂದು ವೈರಲ್‌ ಆದ ಬೆನ್ನಲ್ಲೆ ಪೊಲೀಸರು ಐವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾಗ ಈ ಪೈಕಿ ಒಬ್ಬಾತ ಮಾತ್ರ ಬಾಂಗ್ಲಾ ದೇಶದ ಪ್ರಜೆಯಾಗಿರುವುದು ಕಂಡು ಬಂದಿದೆ.

ನ.19ರ ಮಧ್ಯಾಹ್ನ 12 ಗಂಟೆ ಸುಮಾರಿಗೆ ವರ್ತೂರು ಪೊಲೀಸ್ ಠಾಣೆಯ ಹೊಯ್ಸಳ ವಾಹನಕ್ಕೆ 112 ಸಹಾಯವಾಣಿ ಮೂಲಕ ದೂರು ಬಂದಿದ್ದು, ದೂರಿನ ಮೇರೆಗೆ ಹೊಯ್ಸಳ ಕರ್ತವ್ಯದಲ್ಲಿದ್ದ ಎಎಸ್‌ಐ ನಂಜುಂಡೇಶ್ವರ ಅವರು ಬಾಗಲೂರು ಗ್ರಾಮದ ಶೋಭಾ ಡ್ರೀಮ್ ಏಕರ್ಸ್ ಅಪಾರ್ಟ್‌ಮೆಂಟ್ ಸಮೀಪದ ಖಾಲಿ ಜಾಗದಲ್ಲಿರುವ ಕಾರ್ಮಿಕರ ಶೆಡ್‌ಗಳ ಬಳಿ ತೆರಳಿ, ದೂರುದಾರರನ್ನು ಸಂಪರ್ಕಿಸಿ, ಅನುಮಾನಾಸ್ಪದವಾಗಿ ಕಂಡುಬಂದ 5 ಜನರನ್ನು ವಿಚಾರಣೆಗಾಗಿ ಪೊಲೀಸ್ ಠಾಣೆಗೆ ಕರೆತಂದಿದ್ದು, ವಿಚಾರಣೆ ವೇಳೆ 5 ಜನರ ಪೈಕಿ ಮೊಹಮ್ಮದ್ ಬಾಬುಲ್ ಶೇಕ್ ಎಂಬ ಒಬ್ಬ ವ್ಯಕ್ತಿ ಮಾತ್ರ ಬಾಂಗ್ಲಾದೇಶದ ಪ್ರಜೆಯಾಗಿರುವುದು ತಿಳಿದು ಬಂದಿದೆ. ಅವರ ಪಾಸ್‌ಪೋರ್ಟ್ ಮತ್ತು ವೀಸಾ ದಾಖಲೆಗಳನ್ನು ಪರಿಶೀಲಿಸಿ, ಸಂಬಂಧಪಟ್ಟ ಪ್ರಾಧಿಕಾರದ ಮುಂದೆ ಹಾಜರುಪಡಿಸಿ ದಾಖಲೆಗಳ ನೈಜತೆಯನ್ನು ದೃಢೀಕರಿಸಿಕೊಂಡ ನಂತರ ಅವರನ್ನು ಕಾನೂನುಬದ್ಧವಾಗಿ ಬಿಡುಗಡೆಗೊಳಿಸಲಾಗಿದೆ.

ಉಳಿದ ನಾಲ್ವರು ಅಸ್ಸಾಂನ ಬಾರ್ಪೇಟಾ ಮತ್ತು ಮೋರಿಗಾಂವ್ ಜಿಲ್ಲೆಗಳ ನಿವಾಸಿಗಳಾಗಿರುತ್ತಾರೆ. ಅವರ ದಾಖಲೆಗಳನ್ನು ಅಸ್ಸಾಂ ರಾಜ್ಯದ ಸಂಬಂಧಪಟ್ಟ ಸ್ಥಳೀಯ ಪೊಲೀಸ್ ಠಾಣೆಗಳಿಗೆ ಕಳುಹಿಸಿ, ದಾಖಲೆಗಳ ನೈಜತೆಯನ್ನು ಪರಿಶೀಲಿಸಿ, ಇ-ಮೇಲ್ ಮೂಲಕ ವರದಿ ಪಡೆದುಕೊಂಡ ನಂತರ ಅವರನ್ನು ಸಹ ಕಾನೂನುಬದ್ಧವಾಗಿ ಬಿಡುಗಡೆಗೊಳಿಸಲಾಗಿದೆ.

ಸತ್ಯಾಸತ್ಯತೆಯನ್ನು ಪರಿಶೀಲಿಸಿ: ಡಿಸಿಪಿ

ಜಾಲತಾಣಗಳಲ್ಲಿ ಅಕ್ರಮ ಬಾಂಗ್ಲಾದೇಶಿ ಪ್ರಜೆಗಳು ವಾಸವಾಗಿರುವ ಕುರಿತು ವಿಡಿಯೋವೊಂದು ಹರಿದಾಡುತ್ತಿದ್ದು, ಆ ವಿಡಿಯೋದಲ್ಲಿನ ಅಂಶಗಳು ವಾಸ್ತವಾಂಶಗಳಿಗೆ ದೂರವಾಗಿರುತ್ತವೆ. ನಗರ ಪೊಲೀಸ್ ಇಲಾಖೆಯು ಅಕ್ರಮ ವಲಸಿಗರ ಕುರಿತು ನಿರಂತರವಾಗಿ ನಿಗಾ ವಹಿಸುತ್ತಿದ್ದು, ಕಾನೂನುಬದ್ಧವಾಗಿ ಪರಿಶೀಲನೆ ನಡೆಸಿ ಅಗತ್ಯ ಕ್ರಮಗಳನ್ನು ಕೈಗೊಳ್ಳುತ್ತಿದೆ. ಆದ್ದರಿಂದ, ಸಾರ್ವಜನಿಕರು ಜಾಲತಾಣಗಳಲ್ಲಿ ಹರಿದಾಡುವ ಪರಿಶೀಲಿಸದ ಮಾಹಿತಿಗಳನ್ನು ನಂಬಬಾರದು ಹಾಗೂ ಅಂತಹ ಮಾಹಿತಿಗಳನ್ನು ಇತರರಿಗೆ ಹಂಚಿಕೊಳ್ಳುವ ಮೊದಲು ಅವುಗಳ ಸತ್ಯಾಸತ್ಯತೆಯನ್ನು ಖಚಿತಪಡಿಸಿಕೊಳ್ಳಬೇಕು ಎಂದು ವೈಟ್‌ಫೀಲ್ಡ್‌ ಡಿಸಿಪಿ ಹರಿ ಬಾಬು ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಡಿಕೆ ಸೂಚನೆ ಬೆನ್ನಲ್ಲೇ 150 ರೌಡಿ ಮನೆ ಮೇಲೆ ದಾಳಿ
3 ದಿನಗಳ ವೀರಲೋಕ ಪುಸ್ತಕ ಸಂತೆಗೆ ತೆರೆ