ಧರ್ಮದಿಂದ ಮಾತ್ರ ಇಡೀ ಜಗತ್ತನ್ನು ಗೆಲ್ಲಲು ಸಾಧ್ಯ : ಸಚಿವ ಕೆ.ಹೆಚ್.ಮುನಿಯಪ್ಪ

KannadaprabhaNewsNetwork |  
Published : Mar 03, 2026, 01:15 AM IST
ಫೆÇೀಟೋ 4 : ಸೋಂಪುರ ಹೋಬಳಿಯ ವನಕಲ್ಲು ಮಠದಲ್ಲಿ ನಡೆದ 52ನೇ ವರ್ಷದ ಜಾತ್ರಾ ಮಹೋತ್ಸವದ ಅಂಗವಾಗಿ ವಿವಿಧ ಪ್ರಶಸ್ತಿ ಪ್ರಧಾನ ಸಮಾರಂಭ, ಸಂಸ್ಕೃತೋತ್ಸವ, ರಾಜ್ಯ ಮಟ್ಟದ ಜಾನಪದೋತ್ಸವದಲ್ಲಿ ಸಚಿವ ಕೆ.ಹೆಚ್.ಮುನಿಯಪ್ಪ ಮಾತನಾಡಿದರು. | Kannada Prabha

ಸಾರಾಂಶ

ವನಕಲ್ಲು ಮಠ ದಿನೇ ದಿನೇ ಬೆಳೆಯುತ್ತಿದೆ, ಸಮುದಾಯದವರು ಒಗ್ಗಟ್ಟಾಗಬೇಕು, ಮಠದ ಅಭಿವೃದ್ಧಿಗೆ ₹5 ಲಕ್ಷ ಅನುದಾನ ನೀಡಿದ್ದು, ಮುಂದಿನ ದಿನಗಳಲ್ಲಿ ಇನ್ನಷ್ಟೂ ಸಹಕಾರ ನೀಡುತ್ತೇನೆ, ಅಧರ್ಮವನ್ನು ಹೋಗಲಾಡಿಸುವುದು, ಧರ್ಮದಿಂದ ಮಾತ್ರ ಸಾಧ್ಯ, ಭಗವದ್ಗೀತೆ ಸಾರವನ್ನು ಪ್ರತಿಯೊಬ್ಬರೂ ತಿಳಿಯಿರಿ ಎಂದು ಹೇಳಿದರು.

ಕನ್ನಡಪ್ರಭ ವಾರ್ತೆ ದಾಬಸ್‍ಪೇಟೆ

ಧರ್ಮದಿಂದ ಮಾತ್ರ ಇಡೀ ಜಗತ್ತನ್ನು ಗೆಲ್ಲಲು ಸಾಧ್ಯ, ಮಠಕ್ಕೆ ಅಗತ್ಯವಿರುವ ಮೂಲಭೂತ ಸೌಲಭ್ಯವನ್ನು ನನ್ನ ಅನುದಾನದಿಂದ ಕೈಗೊಳ್ಳುತ್ತೇನೆ, ಶ್ರೀ ಕೃಷ್ಣನ ಧರ್ಮವನ್ನು ಪ್ರತಿಯೊಬ್ಬರೂ ಪಾಲಿಸಿ ಎಂದು ಆಹಾರ ಮತ್ತು ನಾಗರಿಕ, ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಚ್.ಮುನಿಯಪ್ಪ ತಿಳಿಸಿದರು.

ಸೋಂಪುರ ಹೋಬಳಿಯ ವನಕಲ್ಲು ಮಠದಲ್ಲಿ ನಡೆದ 52ನೇ ವರ್ಷದ ಜಾತ್ರಾ ಮಹೋತ್ಸವದ ಅಂಗವಾಗಿ ವಿವಿಧ ಪ್ರಶಸ್ತಿ ಪ್ರದಾನ ಸಮಾರಂಭ, ಸಂಸ್ಕ್ರತೋತ್ಸವ, ರಾಜ್ಯ ಮಟ್ಟದ ಕನ್ನಡ ಸಾಹಿತ್ಯ ಸಂಸ್ಕ್ರತಿ ಉತ್ಸವ ಕಾರ್ಯಕ್ರಮ ಉದ್ಘಾಟಿಸಿದರು.

ವನಕಲ್ಲು ಮಠ ದಿನೇ ದಿನೇ ಬೆಳೆಯುತ್ತಿದೆ, ಸಮುದಾಯದವರು ಒಗ್ಗಟ್ಟಾಗಬೇಕು, ಮಠದ ಅಭಿವೃದ್ಧಿಗೆ ₹5 ಲಕ್ಷ ಅನುದಾನ ನೀಡಿದ್ದು, ಮುಂದಿನ ದಿನಗಳಲ್ಲಿ ಇನ್ನಷ್ಟೂ ಸಹಕಾರ ನೀಡುತ್ತೇನೆ, ಅಧರ್ಮವನ್ನು ಹೋಗಲಾಡಿಸುವುದು, ಧರ್ಮದಿಂದ ಮಾತ್ರ ಸಾಧ್ಯ, ಭಗವದ್ಗೀತೆ ಸಾರವನ್ನು ಪ್ರತಿಯೊಬ್ಬರೂ ತಿಳಿಯಿರಿ ಎಂದು ಹೇಳಿದರು.

ವನಕಲ್ಲು ಮಲ್ಲೇಶ್ವರ ಸ್ವಾಮಿಯ ಕೃಪೆಯಿಂದ ಇಡೀ ನಾಡಿನೆಲ್ಲೆಡೆ ಉತ್ತಮ ಮಳೆ- ಬೆಳೆಯಾಗಲಿ, ಶ್ರೀ ಮಠದಲ್ಲಿ ಜಾತ್ರಾ ಮಹೋತ್ಸವ ಯಶಸ್ವಿಯಾಗಿರುವುದು ಸಂತಸವಾಗಿದೆ, ಜನತೆಗೆ ವನಕಲ್ಲು ಮಲ್ಲೇಶ್ವರ ಸ್ವಾಮಿಯ ಆಶೀರ್ವಾದದಿಂದ ರೈತರಿಗೆ ಮಳೆ ಮತ್ತು ಬೆಳೆಯಾಗಿ ನಾಡು ಸುಭೀಕ್ಷವಾಗಲಿ, ಮಠದ ಮೂಲಭೂತ ಸೌಲಭ್ಯ ಅಭಿವೃದ್ಧಿಗೆ ಸದಾ ಸಿದ್ಧನಾಗಿರುತ್ತೇನೆ, ಹಲವಾರು ವರ್ಷಗಳಿಂದ ನಮ್ಮ ಸಂಸ್ಕೃತಿಯಲ್ಲಿ ಸಮಾಜ ಸೇವೆಯು ಮಾನವನ ಸೇವೆ ಎಂಬಂತೆ ರೂಪುಗೊಂಡಿದೆ, ಜ್ಞಾನಾರ್ಜನೆ ಪ್ರತಿಯೊಬ್ಬರಿಗೂ ಮುಖ್ಯ, ಈ ಜಾತ್ರಾ ಮಹೋತ್ಸವ ಕಲೆ, ಸಂಸ್ಕೃತಿ, ಜಾನಪದೀಯತೆಯ ಪ್ರತೀಕವಾಗಿದೆ ಎಂದರು.

ವನಕಲ್ಲು ಮಠದ ಡಾ.ಶ್ರೀ.ಬಸವರಮಾನಂದ ಸ್ವಾಮೀಜಿ ಮಾತನಾಡಿ, 15ನೇ ಶತಮಾನದಲ್ಲೇ ಶ್ರೀ ಕ್ಷೇತ್ರದ ಉಲ್ಲೇಖವಿದೆ, ಈಶ್ವರಸ್ವಾಮಿ, ಗಂಗೆ- ಗೌರಿಯನ್ನು ಜೊತೆಯಾಗಿ ಹೊಂದಿರುವ ಏಕೈಕ ಕ್ಷೇತ್ರ ವನಕಲ್ಲಾಗಿದೆ, ಮಠದಿಂದ ಪ್ರತಿವರ್ಷ ನೀಡುವ ವನಕಲ್ಲು ಶ್ರೀ ಪ್ರಶಸ್ತಿಯನ್ನು ಸಂಸದ ವಿ.ಸೋಮಣ್ಣ ರವರಿಗೆ, ಜಗಜ್ಯೋತಿ ಪ್ರಶಸ್ತಿಯನ್ನು ಸಚಿವರಾದ ಕೆ.ಎಚ್.ಮುನಿಯಪ್ಪರವರಿಗೆ, ವಿಶ್ವಜ್ಯೋತಿ ಪ್ರಶಸ್ತಿಯನ್ನು ವಿಶ್ರಾಂತ ಅರಣ್ಯ ಸಂರಕ್ಷಣಾಧಿಕಾರಿಯಾದ ಡಾ.ಚಿಕ್ಕಪ್ಪಯ್ಯರವರಿಗೆ ಹಾಗೂ ಶರಣಶ್ರೀ ಪ್ರಶಸ್ತಿಯನ್ನು ವಿ.ವೀರೇಶ್ ರವರಿಗೆ ಪ್ರದಾನ ಮಾಡಲಾಗಿದೆ ಎಂದರು.

ಹೊನ್ನಮ್ಮಗವಿ ಮಠದ ಶ್ರೀ ರುದ್ರಮುನಿ ಶಿವಾಚಾರ್ಯ ಸ್ವಾಮೀಜಿ, ಪ್ರಪಂಚದಾದ್ಯಂತ ಯುದ್ಧದ ಕಾರ್ಮೋಡ ಕವಿಯುತ್ತಿದೆ, ಆದರೆ ಭಾರತ ಮಾತ್ರ ಆಧ್ಯಾತ್ಮಿಕತೆ, ಮಠ, ಮಂದಿರಗಳಿಂದ ಪ್ರಪಂಚಕ್ಕೆ ಭಕ್ತಿ ಸಂದೇಶವನ್ನು ನೀಡುತ್ತಿದೆ, ಜಗತ್ತಿನಲ್ಲಿ ಶಾಂತಿ ನೆಲೆಸಬೇಕಾಗಿದೆ ಎಂದರು.

ಕಾರ್ಯಕ್ರಮದಲ್ಲಿ ಮಾದಾರ ಚನ್ನಯ್ಯ ಸ್ವಾಮೀಜಿ, ಬಸವಣ್ಣ ದೇವರ ಮಠದ ಶ್ರೀ ಸಿದ್ಧಲಿಂಗ ಸ್ವಾಮೀಜಿ, ಮಾತನಾಡಿದರು.

ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿ, ಮುರುಘಾ ಮಠದ ಬಸವಪ್ರಭು ಸ್ವಾಮೀಜಿ, ಮಹಾಂತ ಸ್ವಾಮೀಜಿ ಮುರುಘೇಂದ್ರ ಸ್ವಾಮೀಜಿ, ಆರ್.ಟಿ.ಓ ನಾಗೇಶ್ ಕುಮಾರ್, ಕುಂಚಿಟಿಗ ಮಹಾಸಂಸ್ಥಾನದ ಡಾ.ಶ್ರೀ.ಶಾಂತವೀರ ಸ್ವಾಮೀಜಿ, ಶಿವಕುಮಾರ್, ನಾಗರನವಿಲೆ ಗ್ರಾಪಂ ಮಾಜಿ ಅಧ್ಯಕ್ಷರಾದ ರಾಮಾಂಜಿನಯ್ಯ, ಎಚ್.ಪಿ.ಸುರೇಶ್, ದಾನಿಗಳಾದ ದೊಡ್ಡೇಗೌಡ, ರಾಜಣ್ಣ, ಮುಖಂಡರಾದ ಹೆಗ್ಗುಂದ ಲೋಕೇಶ್, ಶಿವಾನಂದನಗರ ಮರಿಯಪ್ಪಾ, ನಯಾಜ್ ಖಾನ್, ವೀರಯ್ಯ, ನಿರೂಪಣೆಕಾರರಾದ ಯೋಗಾನಂದ್, ಮಣ್ಣೆ ಮೋಹನ್, ಮಠದ ನೂರಾರು ಸದ್ಭಕ್ತರು, ಹಲವಾರು ಮುಖಂಡರು, ಎನ್.ಎಸ್.ಎಸ್.ಸ್ವಯಂಸೇವಕರು, ರಾಜಕೀಯ ಧುರೀಣರು, ಕಲಾವಿದರು ಹಾಜರಿದ್ದರು.

--------

ಫೆÇೀಟೋ 4 : ಸೋಂಪುರ ಹೋಬಳಿಯ ವನಕಲ್ಲು ಮಠದಲ್ಲಿ ನಡೆದ 52ನೇ ವರ್ಷದ ಜಾತ್ರಾ ಮಹೋತ್ಸವದ ಅಂಗವಾಗಿ ವಿವಿಧ ಪ್ರಶಸ್ತಿ ಪ್ರದಾನ ಸಮಾರಂಭ, ಸಂಸ್ಕೃತೋತ್ಸವ, ರಾಜ್ಯ ಮಟ್ಟದ ಜಾನಪದೋತ್ಸವದಲ್ಲಿ ಸಚಿವ ಕೆ.ಎಚ್.ಮುನಿಯಪ್ಪ ಮಾತನಾಡಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕೃಷಿಗೆ 50 ಸಾವಿರ ಕೋಟಿ ಮೀಸಲಿಡಲು ಪ್ರತಿಭಟನೆ
ಪೌರ ಕಾರ್ಮಿಕರನ್ನು ಭರ್ತಿ ಮಾಡಲು ಸೂಚನೆ