ಎಸ್.ಜಾನಕಿಗೆ ಎಸ್ ಜಾನಕಿಯೇ ಸರಿಸಾಟಿ

KannadaprabhaNewsNetwork |  
Published : Jul 25, 2026, 01:30 AM IST
24 ಟಿವಿಕೆ 4 – ತುರುವೇಕೆರೆಯ ಕನ್ನಡ ಭವನದಲ್ಲಿ ಎಸ್.ಜಾನಕಿ ಅಮ್ಮನವರ ಗಾನಾಂಜಲಿ ಕಾರ್ಯಕ್ರಮ ಜರುಗಿತು. | Kannada Prabha

ಸಾರಾಂಶ

ವಿವಿಧ ಭಾಷೆಗಳಲ್ಲಿ ಸಾವಿರಾರು ಹಾಡುಗಳನ್ನು ಹಾಡಿ ಗಾನ ರಸಿಕರನ್ನು ರಂಜಿಸಿದ ಎಸ್. ಜಾನಕಿಗೆ ಎಸ್.ಜಾನಕಿಯೇ ಸರಿ ಸಾಟಿ. ಅವರನ್ನು ಮೀರಿಸುವವರು ಇಲ್ಲವೇ ಇಲ್ಲ ಎಂದು ತಾಲೂಕು ಕನ್ನಡ ಸಾಹಿತ್ಯ ಪರಿಷತ್ ನ ಅಧ್ಯಕ್ಷ ಡಿ.ಪಿ.ರಾಜು ಎಸ್.ಜಾನಕಿ ಯವರ ಗುಣಗಾನ ಮಾಡಿದರು.

ಕನ್ನಡಪ್ರಭ ವಾರ್ತೆ ತುರುವೇಕೆರೆ

ವಿವಿಧ ಭಾಷೆಗಳಲ್ಲಿ ಸಾವಿರಾರು ಹಾಡುಗಳನ್ನು ಹಾಡಿ ಗಾನ ರಸಿಕರನ್ನು ರಂಜಿಸಿದ ಎಸ್. ಜಾನಕಿಗೆ ಎಸ್.ಜಾನಕಿಯೇ ಸರಿ ಸಾಟಿ. ಅವರನ್ನು ಮೀರಿಸುವವರು ಇಲ್ಲವೇ ಇಲ್ಲ ಎಂದು ತಾಲೂಕು ಕನ್ನಡ ಸಾಹಿತ್ಯ ಪರಿಷತ್ ನ ಅಧ್ಯಕ್ಷ ಡಿ.ಪಿ.ರಾಜು ಎಸ್.ಜಾನಕಿ ಯವರ ಗುಣಗಾನ ಮಾಡಿದರು.

ಪಟ್ಟಣದ ಕನ್ನಡ ಭವನದಲ್ಲಿ ನಡೆದ ಎಸ್. ಜಾನಕಿ ಅಮ್ಮನವರ ಗಾನಾಂಜಲಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತ್ತಿದ್ದರು. ಎಸ್. ಜಾನಕಿಯವರು ಹಲವು ಭಾಷೆಗಳಲ್ಲಿ ತಮ್ಮ ಪ್ರತಿಭೆಯನ್ನು ಪ್ರಸ್ತುತಪಡಿಸಿದ್ದರು. ಆದರೆ ಅವರ ಉಸಿರು ಕನ್ನಡವೇ ಆಗಿತ್ತು. ಅವರು ತಮ್ಮ ಕೊನೆ ಉಸಿರು ಚೆಲ್ಲಿದ್ದೂ ಸಹ ಕನ್ನಡ ನೆಲದಲ್ಲೇ ಎನ್ನುವುದು ವಿಶೇಷ. ಎಸ್.ಜಾನಕಿಯವರು ಪುಟ್ಟ ಮಕ್ಕಳ ದನಿಯಿಂದ ಹಿಡಿದು ಮುದುಕರವರೆಗೂ ಹಾಡಿರುವುದು ದಾಖಲೆಯೇ ಸರಿ. ಅವರ ಗಾನಸಿರಿಯಲ್ಲಿ ಬಂದಿರುವ ಸಾವಿರಾರು ಹಾಡುಗಳು ಪ್ರೇರಣೆಯಾಗಿದೆ. ಯುವ ಕಲಾವಿದರಿಗೆ ಅವರ ಹಾಡುಗಳು ಮಾದರಿಯಾಗಿವೆ. ಅವರು ಹಾಡಿರುವ ಹಾಡಿನಲ್ಲಿ ಒಳ್ಳೆಯ ಸಾಹಿತ್ಯ, ಅಭಿರುಚಿ ಇರುವುದು ಅವರು ಜೀವನದ ಪರಿ ಹೇಗಿತ್ತು ಎಂಬುದನ್ನು ಸಾರುತ್ತದೆ ಎಂದು ಡಿ.ಪಿ.ರಾಜು ಹೇಳಿದರು.

ಈ ವೇಳೆ ಗಾಯಕರಾದ ಕಿರಣ್ ಆಚಾರ್ಯ, ಈಶ್ವರ್, ವಾಸವಿ ಸತೀಶ್, ಕವಿತಾ ಸತ್ಯನಾರಾಯಣ್ ಎಸ್.ಜಾನಕಿ ಅಮ್ಮನವರ ಐವತ್ತಕ್ಕೂ ಹೆಚ್ಚು ಹಾಡುಗಳನ್ನು ಹಾಡಿ ಪ್ರೇಕ್ಷಕರನ್ನು ರಂಜಿಸಿದರು. ಗಾನಾಂಜಲಿ ಕಾರ್ಯಕ್ರಮದಲ್ಲಿ ಬರಹಗಾರ ತುರುವೇಕೆರೆ ಪ್ರಸಾದ್, ಚಂದ್ರಕೀರ್ತಿ, ರೂಪಶ್ರೀ, ದಿನೇಶ್, ಚಂದ್ರಶೇಖರ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಮಾಜದ ಅಗತ್ಯಕ್ಕೆ ಸ್ಪಂದಿಸುವ ಎಐ ಪರಿಹಾರ ರೂಪಿಸಿ
ಮತದಾರರು ಸಮಗ್ರ ಪರಿಷ್ಕರಣೆಗೆ ಸಹಕಾರ ನೀಡಿ