ಕನ್ನಡಪ್ರಭ ವಾರ್ತೆ ಪಾಂಡವಪುರ
ಎಐ ನಂತಹ ತಂತ್ರಜ್ಞಾನಗಳು ಪ್ರಂಪಚಕ್ಕೆ ತನ್ನ ಕೊಡುಗೆ ನೀಡುತ್ತಿದ್ದರೂ ಅದರ ವಿನ್ಯಾಸ ಮಾಡುವ ಕ್ರಿಯಾಶೀಲತೆ ಮಾತ್ರ ಮನುಷ್ಯನದು. ಆದ್ದರಿಂದ ವಿದ್ಯಾರ್ಥಿಗಳು ಉತ್ತಮ ಭಾಷಾ ಕೌಶಲ್ಯ ಹಾಗೂ ಔದ್ಯೋಗಿಕ ಕೌಶಲ್ಯವನ್ನು ಬೆಳೆಸಿಕೊಂಡರೆ ಮುಂದಿನ ದಿನಗಳಲ್ಲಿ ತಂತ್ರಜ್ಞಾನದಂತಹ ಉದ್ಯೋಗ ಪಡೆಯಲು ಸಾಧ್ಯ ಎಂದರು.
ಪೋಷಕರು ನಿಮ್ಮ ಕಾಲೇಜಿನ ಶುಲ್ಕವನ್ನು ಕಟ್ಟಲು ಸಾಧ್ಯವೇ ಹೊರತು ತಮ್ಮ ಬಳಿಯೆ ಕುಳಿತು ಉಪನ್ಯಾಸ ಮಾಡಲು ಸಾಧ್ಯವಿಲ್ಲ. ತಾವೆಲ್ಲರು ಪದವಿ ಹಂತಕ್ಕೆ ಬಂದಿದ್ದೀರಿ. ನಿಮ್ಮ ಓದಿನ ಕಡೆ ಹೆಚ್ಚು ಗಮನ ನೀಡಬೇಕು ಎಂದರು.ಎನ್‌ಎಸ್‌ಎಸ್ ಅಧಿಕಾರಿ ಕುಮಾರ್ ಮಾತನಾಡಿ, ಕಾಲೇಜಿನಲ್ಲಿರುವ ವಿವಿಧ ಕೋರ್ಸ್ಗಳು ಹಾಗೂ ಪ್ರಯೋಜನ ಎಸ್‌ಇಪಿಯ ಸ್ವರೂಪ, ಉದ್ಯೋಗ ಮಾಹಿತಿ ಜೊತೆಗೆ ನಮ್ಮ ವಿದ್ಯಾರ್ಥಿಗಳು ಕ್ರೀಡೆಯಲ್ಲಿ, ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಮಾಡಿದ ಸಾಧನೆ, ಎನ್‌ಎಸ್‌ಎಸ್‌ನ ಚಟುವಟಿಕೆ, ಭಾರತೀಯ ಸ್ಕೌಟ್ ಮತ್ತು ಗೈಡ್ ತಂಡದ ಚಟುವಟಿಕೆ, ಯುವ ರೆಡ್‌ಕ್ರಾಸ್ ಘಟಕದ ಚಟುವಟಿಕೆ ಹಾಗೂ ಸ್ಪರ್ಧಾತ್ಮಕ ಪರೀಕ್ಷೆಗೆ ಹೇಗೆ ತಯಾರಿ ನಡೆಸಬೇಕು ಎಂಬ ಮಾಹಿತಿ ನೀಡಿದರು.
ಮೂರು ವರ್ಷದ ಪದವಿಯ ಯೋಜನೆ ಸ್ಫೋಕನ್ ಇಂಗ್ಲಿಷ್, ವ್ಯಕ್ತಿತ್ವ ವಿಕಸನ, ಟ್ಯಾಲಿ, ಸ್ಪರ್ಧಾತ್ಮಕ ತರಬೇತಿಗಳನ್ನು ಸಂಸ್ಥೆ ನೀಡುತ್ತಿದ್ದು, ಎಲ್ಲಾ ವಿದ್ಯಾರ್ಥಿಗಳು ಇದರ ಸದುಪಯೋಗ ಪಡೆಯಬೇಕು ಎಂದರು.ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಡಾ.ನಿಶಾಂತ್ ಎ ನಾಯ್ಡು ಮಾತನಾಡಿ, ಹುಟ್ಟಿದ ಯಾವ ಮನುಷ್ಯನ ಜೀವಕ್ಕೂ ಯಾವುದೇ ಗ್ಯಾರೆಂಟಿ, ಯಾವುದೇ ವ್ಯಾರೆನ್ಟಿ ಇರುವುದಿಲ್ಲ. ಗ್ರಾಮೀಣ ಭಾಗದ ಪೋಷಕರು ತಮ್ಮ ಹೆಣ್ಣು ಮಕ್ಕಳನ್ನು ವಿವಾಹ ಮಾಡಿ ಕಳಿಸಿಬಿಡುವ ಜವಬ್ದಾರಿ ಜೊತೆ ಅವರಿಗೆ ಸ್ವಾವಲಂಬಿ ಬದುಕನ್ನು ರೂಪಿಸಬೇಕು ಎಂದರು.
ಹೆಣ್ಣು ಮಕ್ಕಳು ಎಲ್ಲಾ ಕ್ಷೇತ್ರಗಳಲ್ಲೂ ತಮ್ಮನ್ನು ತೊಡಗಿಸಿಕೊಳ್ಳಲು ಅಗತ್ಯ ಶಿಕ್ಷಣ ವ್ಯವಸ್ಥೆ ಕೊಡಿಸಿ ಮಹಿಳಾ ಸಬಲೀಕರಣಕ್ಕೆ ಒತ್ತಾಸೆಯಾಗಿ ನಿಲ್ಲಬೇಕು ಎಂದರು.ವೇದಿಕೆಯಲ್ಲಿ ಆಂತರಿಕ ಗುಣಮಟ್ಟ ಭರವಸೆ ಘಟಕದ ಸಂಯೋಜಕ ರಘುನಂದನ್ ಡಿ, ನ್ಯಾಕ್ ಸಮಿತಿ ಸಂಯೋಜಕ ಚರಣ್ ರಾಜ್, ಕಲ್ಚರಲ್ ಕಮಿಟಿ ಸಂಯೋಜಕ ವಿ.ಶ್ರೀಧರ, ರಸಾಯನಶಾಸ್ತ್ರದ ಮುಖ್ಯಸ್ಥೆ ಹರಿಣಿ ಹಾಗೂ ಅರ್ಥಶಾಸ್ತ್ರದ ಮುಖ್ಯಸ್ಥರಾದ ತನ್ಝಿಯಾ ಕೌಸರ್ ಉಪಸ್ಥಿತರಿದ್ದರು. ಬಿಎ, ಬಿಎಸ್ಸಿ, ಬಿಸಿಎ, ಬಿಕಾಂ ಹಾಗೂ ಬಿಬಿಎ ತರಗತಿಗಳ ಸುಮಾರು ಇನ್ನೂರಕ್ಕೂ ಹೆಚ್ಚು ವಿದ್ಯಾರ್ಥಿಗಳು ಹಾಗೂ ಪೋಷಕರು ಭಾಗವಹಿಸಿದ್ದರು.