-ತಾಲೂಕಿನ ಚಿಕ್ಕೋಬನ ಹಳ್ಳಿಯ ಶಾಲೆಯಲ್ಲಿ ನಡೆದ ಬೀಳ್ಕೊಡುಗೆ ಕಾರ್ಯಕ್ರಮ
-----ಕನ್ನಡ ಪ್ರಭ ವಾರ್ತೆ ಮೊಳಕಾಲ್ಮುರು.
ಶಿಕ್ಷಕ ಎಂದರೆ ಶಿಸ್ತು, ಸಂಯಮವನ್ನು ಜೀವನದಲ್ಲಿ ಅಳವಡಿಸಿಕೊಂಡು ಮಕ್ಕಳ ಶಿಕ್ಷಣಾಭಿವೃದ್ಧಿಗೆ ಶ್ರಮಿಸುವಂತವರು. ಆ ಚಿಂತನೆಗಳೊಂದಿಗೆ ನಿಮ್ಮೆಲ್ಲರ ಸಹಕಾರದಿಂದ ಶಾಲೆಯ ಅಭಿವೃದ್ಧಿಗೆ ಶ್ರಮಿಸಿದ್ದೇನೆ. ನಿಮ್ಮ ಪ್ರೀತಿ ಮತ್ತು ವಿಶ್ವಾಸ ಸದಾ ಹೀಗೆಯೇ ಇರಲಿ ಎಂದು ಎಂದು ದೈಹಿಕ ಶಿಕ್ಷಕ ಮಂಜುನಾಥ ಹೇಳಿದರು.ತಾಲೂಕಿನ ಚಿಕ್ಕೋಬನ ಹಳ್ಳಿಯ ಶಾಲೆಯಲ್ಲಿ ನಡೆದ ಬೀಳ್ಕೊಡುಗೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಶಿಕ್ಷಣದ ಜೊತೆಗೆ ಮಕ್ಕಳಿಗೆ ಕ್ರೀಡೆಯು ಬಹುಮುಖ್ಯವಾಗಿದೆ. ನನ್ನ ಸೇವಾ ಅವಧಿಯಲ್ಲಿ ಶಾಲೆಯ ಮಕ್ಕಳಿಗೆ ಉತ್ತೇಜನ ನೀಡಿ ರಾಜ್ಯ ಮತ್ತು ವಿಭಾಗ ಮಟ್ಟದ ಕ್ರೀಡಾಕೂಟದಲ್ಲಿ ಭಾಗವಹಿಸಿ ಪ್ರತಿಭೆ ಅನಾವರಣ ಗೊಳಿಸುವ ಜೊತೆಗೆ ಗ್ರಾಮವನ್ನು ರಾಜ್ಯಮಟ್ಟಕ್ಕೆ ಪರಿಚಯಿಸುವ ಕೆಲಸ ಮಾಡಿದ್ದೇನೆ. ಇದಕ್ಕೆ ನಿಮ್ಮೆಲ್ಲರ ಸಹಕಾರ ಮತ್ತು ಪ್ರೀತಿಯಿಂದಲೇ ಸಾಧ್ಯವಾಗಿದೆ. ಸರ್ಕಾರಿ ನೌಕರರಿಗೆ ವರ್ಗಾವಣೆ ಸಹಜ. ಸೇವೆ ಸಲ್ಲಿಸಿದ ಸ್ಥಳದಲ್ಲಿ ಶಿಕ್ಷಕ ಮಾಡಿದ ಸಾಧನೆಗಳು ಮಾತ್ರ ಅವಿಸ್ಮರಣೀಯವಾಗಿ ಉಳಿಯಲಿವೆ. ನೀವೆಲ್ಲರೂ ಪ್ರೀತಿಯಿಂದ ಮಾಡಿದ ಸನ್ಮಾನ ಹಾಗೂ ಅಭಿನಂದನೆಗೆ ಸದಾಕಾಲ ಚಿರಋಣಿ ಎಂದರು.ಈ ವೇಳೆ ಗ್ರಾಮ ಪಂಚಾಯಿತಿ ಸದಸ್ಯ ಓ. ಕರಿಬಸಪ್ಪ ಮಾತನಾಡಿ, ಗ್ರಾಮೀಣ ಭಾಗದಲ್ಲಿ ಮಕ್ಕಳ ಶೈಕ್ಷಣಿಕ ಅಭಿವೃದ್ಧಿಗೆ ಅವಿರಥವಾಗಿ ಶ್ರಮಿಸಿದ ಶಿಕ್ಷಕ ಮಂಜುನಾಥ್ ಅವರು ಶಾಲೆಯ ವೃತ್ತಿ ಬದುಕಿನಲ್ಲಿ ಮಕ್ಕಳನ್ನು ಕ್ರೀಡಾಸಕ್ತರನ್ನಾಗಿಸಿ ರಾಜ್ಯಮಟ್ಟದಲ್ಲಿ ಪ್ರತಿನಿಧಿಸುವಂತ ಕಾರ್ಯ ಮಾಡಿದ್ದು ಶ್ಲಾಘನೀಯ. ಇನ್ನಷ್ಟು ದಿನ ಅವರ ಸೇವೆ ನಮ್ಮ ಗ್ರಾಮಕ್ಕೆ ಅಗತ್ಯವಾಗಿತ್ತು. ಸರ್ಕಾರ ಅವರನ್ನು ವರ್ಗಾವಣೆ ಮಾಡಿರುವುದು ಬೇಸರ ತರಿಸಿದೆ. ಎಲ್ಲೇ ಇರಲಿ ಬಡ ಮಕ್ಕಳ ಏಕ ಬೆಳವಣಿಗೆಗೆ ಸಹಕಾರಿಯಾಗಲಿ ಎಂದರು.
ಕಾರ್ಯಕ್ರಮಕ್ಕೂ ಮುನ್ನ ಶಿಕ್ಷಕ ಮಂಜುನಾಥ ದಂಪತಿಯನ್ನು ಬೆಳ್ಳಿರಥದಲ್ಲಿ ಕೂರಿಸಿ ಜನಪದ ವಾದ್ಯಗಳ ಮೂಲಕ ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಿ ಬೀಳ್ಕೊಡುಗೆ ನೀಡಲಾಯಿತು.ಸಂದರ್ಭದಲ್ಲಿ ಮುಖ್ಯ ಶಿಕ್ಷಕ ಉಮೇಶ್, ಎಸ್ ಡಿ ಎಂ ಸಿ ಅಧ್ಯಕ್ಷ ಮಲ್ಲೇಶ್, ಶಿವಣ್ಣ, ಪಾಪಣ್ಣ,ಗ್ರಾಮ ಪಂಚಾಯಿತಿ ಸದಸ್ಯರಾದ ಲಸುಮಕ್ಕ, ನಾಗಭೂಷಣ, ದಾಸಜ್ಜ ಗೌಡ್ರು ಪಾಪಣ್ಣ, ಗೌಡಪ್ಪ ,ಯಶೋಧ,
ಕೆಇಬಿ ನಾಗರಾಜ, ಅಕ್ಷಯ್, ಮಲ್ಲಿಕಾರ್ಜುನ ಇದ್ದರು