ಪೊರಾಡ್ ಗ್ರಾಮದ ಪುತ್ತರಿ ಊರೋರ್ಮೆ, ಮಹಾಸಭೆ

KannadaprabhaNewsNetwork |  
Published : Dec 23, 2024, 01:02 AM IST
ಚಿತ್ರ : 22ಎಂಡಿಕೆ1 ಲೆಕ್ಕಪರಿಶೋಧಕರಿಗೆ ಸನ್ಮಾನ | Kannada Prabha

ಸಾರಾಂಶ

ಪೊರಾಡ್‌ ಗ್ರಾಮದ ಪುತ್ತರಿ ಊರೋರ್ಮೆ ಹಾಗೂ 68ನೇ ಮಹಾಸಭೆ ನಡೆಯಿತು. ಆಡಳಿತ ಮಂಡಳಿ ಸದಸ್ಯರು ಹಾಗೂ ಗ್ರಾಮಸ್ಥರು ಪಾಲ್ಗೊಂಡಿದ್ದರು.

ಕನ್ನಡಪ್ರಭ ವಾರ್ತೆ ಶ್ರೀಮಂಗಲ

ಪೊನ್ನಂಪೇಟೆ ತಾಲೂಕು ಬಿರುನಾಣಿ ಗ್ರಾ. ಪಂ. ವ್ಯಾಪ್ತಿಯ ಪೊರಾಡ್ ಗ್ರಾಮದ ಪುತ್ತರಿ ಊರೋರ್ಮೆ ಹಾಗೂ 68ನೇ ಮಹಾಸಭೆ ಗುರುವಾರ ನಡೆಯಿತು.

ಪೊರಾಡ್ ಊರು ಪಂಚಾಯಿತಿಯ ಲೆಕ್ಕಪರಿಶೋಧನೆಯನ್ನು ಕಳೆದ 55 ವರ್ಷಗಳಿಂದ ನಿರಂತರವಾಗಿ ನಡೆಸಿದ ಮಲ್ಲೇಗಡ ಪಿ.ಧನಂಜಯ ಅವರನ್ನು ಪುತ್ತರಿ ಊರೋರ್ಮೆ ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು.

ಊರೋರ್ಮೆ ಕಾರ್ಯಕ್ರಮದಲ್ಲಿ ಊರು ಪಂಚಾಯಿತಿ ಆಡಳಿತ ಮಂಡಳಿಗೆ ಮುಂದಿನ ದಿನಗಳಲ್ಲಿ ಪ್ರತಿ ಕುಟುಂಬದ ಮಹಾಸಭೆಯಲ್ಲಿ ಆಯ್ಕೆ ಮಾಡಿ ಕಳುಹಿಸುವಂತೆ ನಿರ್ಣಯ ಕೈಗೊಳ್ಳಲಾಯಿತು.

ಊರಿನ ಮರಣನಿಧಿ, ದೇವಸ್ಥಾನ ತೆರಿಗೆಗಳನ್ನು ಒಂದೇ ಮೊತ್ತದಲ್ಲಿ 2000 ರು. ದಂತೆ ಪಾವತಿಸಲು ಹಾಗೂ ಮರಣ ನಿಧಿಯನ್ನು 25 ಸಾವಿರ ರು. ಕೊಡಲು ನಿಗದಿಪಡಿಸಲು ನಿರ್ಧರಿಸಲಾಯಿತು. ಊರು ಪಂಚಾಯಿತಿ ಅಧ್ಯಕ್ಷ ಬಲ್ಯಮೀದೇರಿರ ಪ್ರಕಾಶ್, ಉಪಾಧ್ಯಕ್ಷ ಅಣ್ಣೀರ ಲವ ಅಯ್ಯಪ್ಪ, ಕಾರ್ಯದರ್ಶಿ ಮೀದೇರಿರ ಹರೀಶ್, ಆಡಳಿತ ಮಂಡಳಿ ಸದಸ್ಯರು ಹಾಗೂ ಗ್ರಾಮಸ್ಥರು ಪಾಲ್ಗೊಂಡಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರೈಲ್ವೆ ಪರೀಕ್ಷೆಯಲ್ಲಿ ಮತ್ತೆ ಕನ್ನಡಕ್ಕೆ ಕೊಕ್
ಓಡಿ ಹೋದ ಹೇಡಿ ಎನಿಸಿಕೊಳ್ಳುವುದಿಲ್ಲ. ಅಲ್ಲೇ ರಾಜಕೀಯ ಅಸ್ತಿತ್ವ ಕಂಡುಕೊಳ್ಳುತ್ತೇನೆ : ನಿಖಿಲ್‌