ತೆರೆದ ಮ್ಯಾನ್‌ ಹೋಲ್‌: ಭಯದ ಬೀತಿಯಲ್ಲಿ ಜನರು

KannadaprabhaNewsNetwork |  
Published : Feb 04, 2024, 01:37 AM IST
3ಎಚ್ಎಸ್ಎನ್8 : ರಿಪೇರಿಗಾಗಿ ಮ್ಯಾನ್‌ ಹೋಲನ್ನು ತೆರೆದು ಹಾಗೆಯೇ ಬಿಟ್ಟಿರುವುದು. | Kannada Prabha

ಸಾರಾಂಶ

ನಗರದ ಮಿನಿ ವಿಧಾನಸೌಧದ ಹಿಂಭಾಗದಲ್ಲಿ ರಾಜಕಾರಣಿಗಳು, ಉನ್ನತಮಟ್ಟದ ಅಧಿಕಾರಿಗಳು ಹಾಗೂ ಶ್ರೀಮಂತರು ವಾಸಿಸುವ ಪ್ರದೇಶವೆಂದು ಹೆಸರಾಗಿದ್ದು ಇದನ್ನು ನಂಬಿ ಇಲ್ಲಿಗೆ ವಾಸಕ್ಕೆ ಬಂದ ಜನರ ನೋವು ಹೇಳತೀರದಾಗಿದೆ.

ಕನ್ನಡಪ್ರಭ ವಾರ್ತೆ ಅರಸೀಕೆರೆನಗರದ ಮಿನಿ ವಿಧಾನಸೌಧದ ಹಿಂಭಾಗದಲ್ಲಿ ರಾಜಕಾರಣಿಗಳು, ಉನ್ನತಮಟ್ಟದ ಅಧಿಕಾರಿಗಳು ಹಾಗೂ ಶ್ರೀಮಂತರು ವಾಸಿಸುವ ಪ್ರದೇಶವೆಂದು ಹೆಸರಾಗಿದ್ದು ಇದನ್ನು ನಂಬಿ ಇಲ್ಲಿಗೆ ವಾಸಕ್ಕೆ ಬಂದ ಜನರ ನೋವು ಹೇಳತೀರದಾಗಿದೆ. ಮೂಲಭೂತ ಸೌಲಭ್ಯಗಳನ್ನು ಒದಗಿಸುವಲ್ಲಿ ಹಾಗೂ ಸಮಸ್ಯೆಗಳ ನಿವಾರಿಸುವಲ್ಲಿ ನಗರಸಭೆ ಸಂಪೂರ್ಣ ವಿಫಲವಾಗಿದೆ ಎಂದು ನಾಗರೀಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ನಗರದ ಮಿನಿ ವಿಧಾನಸೌಧದ ಹಿಂಭಾಗ 2ನೇ ಕ್ರಾಸ್‌ನಲ್ಲಿ ನೂತನವಾಗಿ ರಸ್ತೆ ನಿರ್ಮಾಣ ಮಾಡಲು ಒಳಚರಂಡಿ ಚೇಂಬರ್ ಒಡೆದು ಹಾಕಿದ್ದು ಇದರಿಂದ ಮಲ ಮೂತ್ರದ ದುರ್ನಾಥ ಹೊರಸೂಸುತ್ತಿದ್ದು ಸುತ್ತಮುತ್ತಲಿನ ಜನರು ಮೂಗು ಮುಚ್ಚಿಕೊಂಡು ಜೀವಿಸುವ ಪರಿಸ್ಥಿತಿ ನಿರ್ಮಾಣವಾಗಿದೆ.

ಅಲ್ಲದೆ ಗುಂಡಿಯನ್ನು ತೆರೆದು ಹಾಗೆಯೇ ಬಿಟ್ಟಿರುವುದರಿಂದ ದನಕರುಗಳು ಮಕ್ಕಳು ಬಿದ್ದು ಅಪಾಯ ಸಂಭವಿಸುವ ಸಂಭವಿದ್ದರೂ ಸಂಬಂಧಪಟ್ಟವರು ಕಳೆದ ಒಂದು ತಿಂಗಳಿಂದ ಹಾಗೆ ಬಿಟ್ಟು ಜನರ ಆರೋಗ್ಯ, ಪ್ರಾಣದ ಜೊತೆ ಚೆಲ್ಲಾಟವಾಡುತ್ತಿದ್ದಾರೆ. ಈಗ 2 ದಿನಗಳ ಹಿಂದೆ ಕರು ಬಿದ್ದು ಸುತ್ತಮುತ್ತಲಿನ ನಾಗರಿಕರು ಪ್ರಯಾಸದಿಂದ ಕರುವನ್ನು ಕೊರತೆಗೆದು ಜೀವ ಉಳಿಸಿದ್ದಾರೆ. ಆಗಾಗ ಇಂತಹ ಘಟನೆಗಳು ಸಂಭವಿಸುತ್ತಿದ್ದರು ಸಂಬಂಧಪಟ್ಟ ಗುತ್ತಿಗೆದಾರರು ಕಾಣೆಯಾಗಿದ್ದು ಈ ಬಗ್ಗೆ ಪೊಲೀಸ್ ಇಲಾಖೆಯಲ್ಲಿ ದೂರು ನೀಡಲು ಸಾರ್ವಜನಿಕರು ನಿರ್ಧರಿಸಿದ್ದಾರೆ. ಚರಂಡಿಗಾಗಿ ಗುಂಡಿಗಳನ್ನು ತೋಡಿದ್ದು ಅದರಲ್ಲಿ ಕಳೆದ ಒಂದು ತಿಂಗಳಿಂದ ನೀರು ನಿಂತು ಕೊಳೆತು ನಾರುತ್ತಿದ್ದು ಸುತ್ತಮುತ್ತಲ ವಾತವರಣ ದುರ್ವಾಸನೆಯಿಂದ ಕೂಡಿದ್ದು ನಾಗರೀಕರು ವಾಸಮಾಡಲು ಸಾದ್ಯವಿಲ್ಲದ ಪರಿಸ್ಥಿತಿ ನಿರ್ಮಾಣವಾಗಿದೆ. ಇದರಿಂದ ಕಾಲರಾ, ಡೆಂಗ್ಯೂ, ಚಿಕನ್‌ಗುನ್ಯಾ ದಂತಹ ಸಾಂಕ್ರಾಮಿಕ ರೋಗದ ಭೀತಿಯನ್ನು ಎದುರಿಸುವಂತಾಗಿದೆ.

ತಕ್ಷಣವೇ ರಿಪೇರಿ ಕಾರ್ಯ ಕೈಗೊಳ್ಳದಿದ್ದರೆ ನಗರಸಭೆ ಎದುರು ನಾಗರಿಕರು ಪ್ರತಿಭಟನೆ ಮಾಡಲು ನಿರ್ಧರಿಸಿದ್ದಾರೆ ನಗರಸಭೆ ಅಧಿಕಾರಿಗಳು ಎಚ್ಚೆತ್ತು ಸಂಬಂಧಪಟ್ಟ ಗುತ್ತಿಗೆದಾರರನ್ನು ಕರೆಸಿ ತಕ್ಷಣವೇ ಕಾಮಗಾರಿಯನ್ನು ಕೈಗೊಳ್ಳುವಂತೆ ಎಚ್ಚರಿಕೆ ನೀಡಬೇಕು ಇಲ್ಲದಿದ್ದರೆ ಅಂತವರನ್ನು ಕಪ್ಪು ಪಟ್ಟಿಗೆ ಸೇರಿಸಬೇಕೆಂದು ಪ್ರಗತಿಪರ ಸಂಘಟನೆಗಳು ಆಗ್ರಹಿಸಿದೆ.

ಚುನಾವಣೆ ಪೂರ್ವದಲ್ಲಿ ಮತಯಾಚನೆಗೆ ಬರುವ ಜನಪ್ರತಿನಿಧಿಗಳು ನಾಗರೀಕರ ಮೂಲಭೂತ ಸೌಲಭ್ಯಗಳನ್ನು ದೊರಕಿಸಿಕೊಡುವಲ್ಲಿ ಸಂಪೂರ್ಣ ವಿಫಲರಾಗಿದ್ದಾರೆ ಎಂಬುದು ಇಲ್ಲಿನ ಜನತೆಯ ಆಕ್ರೋಶಕ್ಕೆ ಪ್ರಮುಖ ಕಾರಣವಾಗಿದೆ. ಇನ್ನಾದರೂ ನಗರಸಭಾ ಆಡಳಿತ ಹಾಗೂ ಇಲ್ಲಿನ ಜನಪ್ರತಿನಿಧಿ ಎಚ್ಚೆತ್ತು ಸಮಸ್ಯೆಗಳ ಪರಿಹಾರಕ್ಕೆ ಪ್ರಯತ್ನಿಸುವರೇ ಕಾದುನೋಡಬೇಕಾಗಿದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬಿಪಿಎಲ್‌ ಮಾನದಂಡ ಬದಲಿಗೆ ಮುಂದಾದ ರಾಜ್ಯ
ಸರ್ಕಾರಿ ಶಾಲೆಗೆ ಶೀಘ್ರ 11000 ಶಿಕ್ಷಕರ ನೇಮಕ : ಮಧು