ಹುಬ್ಬಳ್ಳಿ: ಗುಣಮಟ್ಟ ಹಾಗೂ ವಿನ್ಯಾಸದ ಚಿನ್ನಾಭರಣಕ್ಕೆ ಹೆಸರಾದ ಭೀಮ ಜ್ಯುವೆಲರ್ಸ್‌ನ 19ನೇ ಶಾಖೆ ಇಲ್ಲಿನ ವಿದ್ಯಾನಗರದಲ್ಲಿ ಗುರುವಾರ ಆರಂಭವಾಯಿತು.
ನೂತನ ಶಾಖೆ ಉದ್ಘಾಟಿಸಿದ ಹು-ಧಾ ಮಹಾನಗರ ಪಾಲಿಕೆ ಮೇಯರ್ ವೀಣಾ ಭರದ್ವಾಡ್, ಅತ್ಯಾಕರ್ಷಕ ಚಿನ್ನಾಭರಣಗಳ ಮಾರಾಟಕ್ಕೆ ಹೆಸರಾದ ಭೀಮ ಜ್ಯುವೆಲರ್ಸ್ 19ನೇ ಶಾಖೆ ಹುಬ್ಬಳ್ಳಿಯಲ್ಲಿ ಪ್ರಾರಂಭವಾಗುತ್ತಿರುವುದು ಹೆಮ್ಮೆಯ ಸಂಗತಿ. ಮೂರು ಅಂತಸ್ತಿನ ಕಟ್ಟಡದಲ್ಲಿರುವ ಭೀಮ ಜ್ಯುವೆಲರ್ಸ್ ಬೃಹತ್ ಶೋರೂಂ ಬಹಳಷ್ಟು ವಿನ್ಯಾಸದ ಚಿನ್ನಾಭರಣಗಳ ಕಲೆಕ್ಷನ್ ಹೊಂದಿದೆ. ಚಿನ್ನಾಭರಣ ಪ್ರಿಯರು ಹಾಗೂ ಗ್ರಾಹಕರು ಇದರ ಸದುಪಯೋಗ ಪಡಿಸಿಕೊಳ್ಳಬೇಕು ಎಂದರು.ಭೀಮ ಗೋಲ್ಡ್ ಪ್ರೈವೆಟ್ ಲಿಮಿಟೆಡ್‌ನ ವ್ಯವಸ್ಥಾಪಕ ನಿರ್ದೇಶಕ ವಿಷ್ಣುಶರಣ್ ಭಟ್ ಮಾತನಾಡಿ, ಹುಬ್ಬಳ್ಳಿ ಮಹಾನಗರವು ರಾಜ್ಯದ 2 ನೇ ದೊಡ್ಡ ನಗರವಾಗಿದ್ದು, ನಮ್ಮ ಸಂಸ್ಥೆಯ ವೈವಿದ್ಯಮಯ ಹಾಗೂ ಉತ್ತಮ ಗುಣಮಟ್ಟದ ಚಿನ್ನಾಭರಣಗಳನ್ನು ಈ ಭಾಗದ ಜನರಿಗೆ ಪರಿಚಯಿಸುವ ನಿಟ್ಟಿನಲ್ಲಿ ಭೀಮ ಜ್ಯುವೆಲರ್ಸ್‌ನ ಅತಿದೊಡ್ಡದಾದ 19ನೇ ಶಾಖೆ ಪ್ರಾರಂಭಿಸಲಾಗಿದೆ ಎಂದು ತಿಳಿಸಿದರು.
ಗ್ರಾಹಕರಿಗೆ ಉದ್ಘಾಟನಾ ಕೊಡುಗೆಯಾಗಿ ಫೆ. 1ರಿಂದ 4ರ ವರೆಗೆ ಚಿನ್ನ-ಬೆಳ್ಳಿ ಖರೀದಿಸುವರಿಗೆ ಮೇಕಿಂಗ್ ಶುಲ್ಕದಲ್ಲಿ ಶೇ. 70ರಷ್ಟು ವಿನಾಯಿತಿ ನೀಡಲಾಗುವುದು. ವಜ್ರಾಭರಣಗಳ ಖರೀದಿಯ ಮೇಲೆ ಪ್ರತಿ ಕ್ಯಾರೆಟ್‌ಗೆ ₹ 7 ಸಾವಿರ ನಗದು (ಕ್ಯಾಶ್ ಬ್ಯಾಕ್) ಹಾಗೂ ₹ 3 ಲಕ್ಷ ಮೌಲ್ಯದ ವರೆಗೆ ವಿಶೇಷ ಬಹುಮಾನ ಗೆಲ್ಲುವ ಅವಕಾಶ ಕಲ್ಪಿಸಲಾಗಿದೆ ಎಂದರು.ಹಳೆಯ ಚಿನ್ನಾಭರಣಗಳ ವಿನಿಮಯಕ್ಕೆ ಪ್ರತಿ ಗ್ರಾಂ ಚಿನ್ನದ ದರದಲ್ಲಿ ₹100 ಹೆಚ್ಚುವರಿ ಲಾಭ ಪಡೆಯಬಹುದು. 4 ದಿನದ ಈ ಆಫರ್ ಅವಧಿಯಲ್ಲಿ ₹ 30 ಸಾವಿರ ಮೌಲ್ಯದ ಚಿನ್ನಾಭರಣ ಖರೀದಿಸುವ ಗ್ರಾಹಕರಿಗೆ ಪ್ರತಿದಿನ ಮೂರು ಗಂಟೆಗೊಮ್ಮೆ ವಿಶೇಷ ಲಕ್ಕಿ ಡ್ರಾ ನಡೆಯಲಿದೆ. ಡ್ರಾ ವಿಜೇತರಿಗೆ ಹೋಂಡಾ ಆ್ಯಕ್ಟಿವಾ ಗೆಲ್ಲುವ ಸುವರ್ಣ ಅವಕಾಶವಿದೆ. ಗ್ರಾಹಕರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದರು.
ಈ ವೇಳೆ ಭೀಮ್ ಗೋಲ್ಡ್ ಸಂಸ್ಥೆಯ ನಿರ್ದೇಶಕಿ ಸಾವಿತ್ರಿ ಕೃಷ್ಣನ್, ಪಾಲಿಕೆ ಸದಸ್ಯೆ ರೂಪಾ ಶೆಟ್ಟಿ, ಉದ್ಯಮಿ ಸುಗ್ಗಿ ಸುಧಾಕರ ಶೆಟ್ಟಿ, ಶ್ರೀಕಾಂತ ಕೆಮ್ತೂರು ಸೇರಿದಂತೆ ಹಲವರಿದ್ದರು.19ನೇ ಶಾಖೆ ಕಾರ್ಯಾರಂಭ: ಭಟ್
ದೇಶದ ವಿವಿಧೆಡೆ ಭೀಮ ಗೋಲ್ಡ್ ಪ್ರೈವೆಟ್ ಲಿಮಿಟೆಡ್ ನ 18 ಶಾಖೆಗಳು ಈಗಾಗಲೇ ಕಾರ್ಯಾರಂಭ ಮಾಡುತ್ತಿವೆ. 19ನೇ ಶಾಖೆಯಾಗಿ ಶುಕ್ರವಾರ ಹುಬ್ಬಳ್ಳಿಯ ವಿದ್ಯಾನಗರದ ಶಾಖೆ ಉದ್ಘಾಟನೆಗೊಂಡಿದೆ. ಆಂಧ್ರಪ್ರದೇಶ ಮತ್ತು ತಮಿಳುನಾಡಿನಲ್ಲಿ ತಲಾ 2 ಹಾಗೂ ಕರ್ನಾಟಕದಲ್ಲಿ 15 ಭೀಮ ಜ್ಯುವೆಲರ್ಸ್‌ನ ಶಾಖೆ ಸೇರಿದಂತೆ ಒಟ್ಟು 19 ಶಾಖೆಗಳು ತನ್ನ ಗ್ರಾಹಕರಿಗೆ ಅತ್ಯುತ್ತಮ ಸೇವೆ ನೀಡಲಿವೆ ಎಂದು ಸಂಸ್ಥೆಯ ಎಂ.ಡಿ. ವಿಷ್ಣುಶರಣ್ ಭಟ್ ಕನ್ನಡಪ್ರಭಕ್ಕೆ ತಿಳಿಸಿದರು.ಪ್ರಥಮ ಗ್ರಾಹಕರಾಗಿ ಅನಿಲ್ ಬದ್ದಿ, ರಮೇಶ ಇಲಕಲ್ಲ ಸೇರಿದಂತೆ ಅನೇಕರು ಚಿನ್ನಾಭರಣ ಖರೀದಿಸಿದರು.