ಹುಬ್ಬಳ್ಳಿ:
ಕಾಂಗ್ರೆಸ್ ಶಾಸಕರಿಗೆ ಬಿಜೆಪಿ ₹ 50 ಕೋಟಿ ಆಫರ್ ಕೊಟ್ಟಿದೆ ಎಂಬ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿಕೆ ಕುರಿತು ಮಾಧ್ಯಮದವರು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದರು. ಇದೇನು ಹೊಸದಲ್ಲ, ಕಳೆದ 16 ತಿಂಗಳಿಂದಲೇ ಬಿಜೆಪಿ ಅದನ್ನೇ ಮಾಡುತ್ತಿದೆ. ಆಪರೇಷನ್ ಕಮಲ ಮಾಡುವುದರಲ್ಲಿ ಬಿಜೆಪಿ ನಿಸ್ಸೀಮವಾಗಿದೆ. ಬೇರೆ ಬೇರೆ ರಾಜ್ಯಗಳಲ್ಲಿ ಅದನ್ನೇ ಮಾಡಿ ಬಿಜೆಪಿ ಸರ್ಕಾರಗಳನ್ನು ಅಸ್ತಿತ್ವಕ್ಕೆ ತಂದಿದೆ. ಕರ್ನಾಟಕದಲ್ಲಿ ಕಾಂಗ್ರೆಸ್ ಶಾಸಕರ ಸಂಖ್ಯೆ ಜಾಸ್ತಿ ಇರುವುದರಿಂದ ಅದಕ್ಕೆ ಕಷ್ಟವಾಗುತ್ತಿದೆ. ಎಲ್ಲಿವರೆಗೂ ಕೇಂದ್ರದಲ್ಲಿ ಬಿಜೆಪಿ ಅಧಿಕಾರದಲ್ಲಿ ಇರುತ್ತದೆಯೋ ಅಲ್ಲಿವರೆಗೂ ಈ ಪ್ರಯತ್ನವನ್ನು ಅದು ಬಿಡುವುದಿಲ್ಲ ಎಂದರು.
ಕೋವಿಡ್ ಹಗರಣದ ತನಿಖೆ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಅವರು, ಹಗರಣವಾಗಿರುವುದರಂತೂ ಸತ್ಯ. ಅದಕ್ಕಾಗಿ ಕಮಿಟಿ ಮಾಡಿದ್ದೇವೆ. ಅವರ ಪಕ್ಷದ ಯತ್ನಾಳ ಅವರೇ ಕೋವಿಡ್‌ನಲ್ಲಿ ಹಗರಣ ಆಗಿದೆ ಎಂದು ಹೇಳಿಲ್ವಾ? ಎಂದು ಪ್ರಶ್ನಿಸಿದರು.ಇವರು ಬೇಕಾದರೆ ಜಸ್ಟಿಸ್ ಕುನ್ಹಾ ವರದಿಯನ್ನು ಚಾಲೆಂಜ್ ಮಾಡಲಿ, ಯಾರು ಬೇಡ ಅಂದವರು? ಚಾಲೆಂಜ್ ಮಾಡಲು ಅವಕಾಶವಿದೆ ಅಲ್ವ? ಎಂದರು.
ಉಪಚುನಾವಣೆ:
ಸಿ.ಪಿ.ಯೋಗೇಶ್ವರ ನೀಡಿರುವ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಅವರು, ಅವರು ಯಾಕೆ ಆ ರೀತಿ ಹೇಳಿದರೋ ಗೊತ್ತಿಲ್ಲ. ಅವರನ್ನೇ ಕೇಳಿ ಎಂದರು. ಆದರೆ ಜಮೀರ್ ಹೇಳಿಕೆಯಿಂದ ಡ್ಯಾಮೇಜ್ ಆಗಿದೆ ಎಂಬ ಅವರ ಹೇಳಿಕೆಗೆ ಸಹಮತ ಇಲ್ಲ ಎಂದಷ್ಟೇ ಹೇಳಿದರು.
ಹುಬ್ಬಳ್ಳಿ-ಧಾರವಾಡ ಸ್ಮಾರ್ಟ್‌ಸಿಟಿ ಯೋಜನೆಯಲ್ಲಿನ ಕಾಮಗಾರಿಯಲ್ಲಿನ ಗುಣಮಟ್ಟಕ್ಕೆ ಕುರಿತಂತೆ ಶೀಘ್ರದಲ್ಲೇ ಸಭೆ ನಡೆಸುವುದಾಗಿ ತಿಳಿಸಿದರು.ಸಿಎಂ ಮುಟ್ಟಿದರೆ ಜನ ಸುಮ್ಮನಿರಲ್ಲ ಎಂಬ ಹೇಳಿಕೆಯ ಅರ್ಥ ಜನ ಅವರ ಹಿಂದೆ ಇದ್ದಾರೆ ಅಂತ. ಬಿಜೆಪಿಯವರಿಗೆ ಟೀಕೆ ಮಾಡಲು ಅವಕಾಶವಿದೆ ಮಾಡಲಿ. ನಮಗೆ ಹೇಳುವ ಅಧಿಕಾರವಿದೆ ಹೇಳ್ತೇವೆ ಎಂದು ಸಂತೋಷ ಲಾಡ್ ಹೇಳಿದರು.