ಉಗ್ರರ ಕೃತ್ಯಕ್ಕೆ ಆಪರೇಶನ್‌ ಸಿಂದೂರ ಪ್ರತ್ಯುತ್ತರ

KannadaprabhaNewsNetwork |  
Published : May 09, 2025, 12:33 AM IST
8ಜಿಡಿಜಿ7 | Kannada Prabha

ಸಾರಾಂಶ

ಕೆಲವು ದಿನಗಳ ಹಿಂದೆ ದೇಶದ ಪಹಲ್ಗಾಮ್‌ದಲ್ಲಿ ನಡೆದ ಭಯೋತ್ಪಾದಕರ ಹೀನ ಕೃತ್ಯಕ್ಕೆ ಪ್ರತ್ಯುತ್ತರವಾಗಿದೆ.

ಗದಗ: ಕೆಲವು ದಿನಗಳ ಹಿಂದೆ ದೇಶದ ಪಹಲ್ಗಾಮ್‌ದಲ್ಲಿ ನಡೆದ ಭಯೋತ್ಪಾದಕರ ಹೀನ ಕೃತ್ಯಕ್ಕೆ ಪ್ರತ್ಯುತ್ತರವಾಗಿದೆ.

ಉಗ್ರರ ಅಡಗುತಾಣ ನಾಶ ಮಾಡಿದ ಭಾರತೀಯ ಸೈನಿಕರಿಗೆ ಅಭಿನಂದನೆಗಳನ್ನು ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ. ಪಾಟೀಲ ವ್ಯಕ್ತಪಡಿಸಿದರು.

ಅವರು ಗದಗ ನಗರದ ಜಿಪಂ ಸಭಾಂಗಣದಲ್ಲಿ ಗುರುವಾರ ಆಪರೇಶನ್ ಸಿಂಧೂರ ಕಾರ್ಯಾಚರಣೆ ನಡೆದ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಕೈಗೊಳ್ಳಬೇಕಾದ ಮುಂಜಾಗ್ರತಾ ಕ್ರಮಗಳ ಕುರಿತು ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.ಪಾಕಿಸ್ತಾನದ ನಾಗರಿಕರಿಗೆ ತೊಂದರೆಯಾಗದಂತೆ ಉಗ್ರರ ಅಡಗುತಾಣ ಪತ್ತೆ ಮಾಡಿ ಧ್ವಂಸ ಮಾಡಲಾಗಿದೆ. ಈ ಸಾಧನೆ ನಮ್ಮ ದೇಶದ ಗರ್ವವನ್ನು ಹೆಚ್ಚಿಸಿದೆ. ಇದಾದ ಮೇಲೂ ಅವರ ಸೊಕ್ಕು ಇನ್ನೂ ಅಡಗಿಲ್ಲ, ದ್ವೇಷದ ಮಾತುಗಳನ್ನಾಡುತ್ತಾರೆ. ದೇಶದಲ್ಲಿರುವ 140 ಕೋಟಿ ಜನರು ಸೈನಿಕರಿಗೆ ಬೆಂಬಲ ನೀಡಿದ್ದೇವೆ. ನಾಗರಿಕರಾಗಿ ನಮ್ಮ ಜವಾಬ್ದಾರಿ ಕರ್ತವ್ಯಗಳಿವೆ. ಜಿಲ್ಲೆಯಲ್ಲಿರುವ ಜನರನ್ನು ನಾವು ಜಾಗೃತ ಮಾಡಬೇಕು. ಜಿಲ್ಲೆಯಲ್ಲಿ ಮಾಜಿ ಸೈನಿಕರು, ಎನ್‌ಸಿ ಸಿ, ಎನ್ಎಸ್ಎಸ್, ಪೊಲೀಸ್ ಇಲಾಖೆಯವರು ಸಾರ್ವಜನಿಕರಿಗೆ ಈ ಕುರಿತು ಜಾಗೃತಿ ಮೂಡಿಸಬೇಕು. ಆಪರೇಶನ್ ಸಿಂದೂರ ನಡೆದ ನಂತರ ಜಗತ್ತಿನ ಬಹುತೇಕ ರಾಷ್ಟ್ರಗಳು ಭಾರತದ ಬೆನ್ನಿಗೆ ನಿಂತಿವೆ. ಇದು ಅಭಿಮಾನ ಪಡುವ ವಿಷಯವಾಗಿದೆ. ಸ್ವಾಭಿಮಾನದಲ್ಲಿ ರಾಷ್ಟ್ರಭಕ್ತಿಯಲ್ಲಿ ನಾಗರಿಕರು ಕಡಿಮೆ ಇಲ್ಲ. ಎಲ್ಲ ಸಂದರ್ಭದಲ್ಲಿ ಸೈನಿಕರಿಗೆ ಬೆಂಬಲವಾಗಿ ನಿಲ್ಲುತ್ತೇವೆ ಎಂದರು.

ನರಗುಂದ ಶಾಸಕ ಸಿ.ಸಿ. ಪಾಟೀಲ ಮಾತನಾಡಿ, ಏಪ್ರಿಲ್ 22ರಂದು ಪಹಲ್ಗಾಮದಲ್ಲಿ ಉಗ್ರರ ಅಟ್ಟಹಾಸಕ್ಕೆ 26 ಅಮಾಯಕ ನಾಗರಿಕರು ಬಲಿಯಾದರು. ಇದಕ್ಕೆ ಪ್ರತಿಯಾಗಿ ಆಪರೇಶನ್ ಸಿಂದೂರ ಮಾಡಿದ್ದಾರೆ. ಇದರಲ್ಲಿ ಭಾಗಿಯಾದ ಮೂರು ರಕ್ಷಣಾ ಪಡೆಯ ಮುಖ್ಯಸ್ಥರಿಗೆ, ಪ್ರಧಾನ ಮಂತ್ರಿ ನರೇಂದ್ರ ಮೋದಿ, ಅಜಿತ ದೋವೆಲ್, ಕರ್ನಲ್ ಸೋಫಿಯಾ ಖುರೇಶಿ, ವಿಂಗ್ ಕಮಾಂಡರ್ ವ್ಯೋಮಿಕಾ ಸಿಂಗ್‌ಗೆ ಅಭಿನಂದನೆ ಸಲ್ಲಿಸಿದರು. ಭಾರತದ ವಾಯುಪಡೆಯಿಂದ ನಡೆದ 25 ನಿಮಿಷದ ಆಪರೇಶನ್ ಸಿಂಧೂರ ಉಗ್ರರಿದ್ದ 9 ಕಡೆಗೆ ದಾಳಿ ಮಾಡಿ 100ಕ್ಕೂ ಅಧಿಕ ಉಗ್ರರನ್ನು ಹತ್ಯೆ ಮಾಡಿದೆ. ಈ ಸಂದರ್ಭದಲ್ಲಿ ನಾವೆಲ್ಲರೂ ರಾಷ್ಟ್ರದ ಪರವಾಗಿ ನಿಲ್ಲೋಣ ಎಂದರು. ರೋಣ ಶಾಸಕ ಜಿ.ಎಸ್. ಪಾಟೀಲ ಮಾತನಾಡಿ, ಯುದ್ಧ ಪ್ರಾರಂಭವಾದರೆ ಎಲ್ಲಿಗೆ ತಲುಪುತ್ತದೆ ಎಂದು ಯಾರೂ ಊಹಿಸಲು ಸಾಧ್ಯವಿಲ್ಲ. ರಷ್ಯಾ – ಉಕ್ರೇನ್ ನಡುವೆ ಪ್ರಾರಂಭವಾದ ಯುದ್ಧ ಇಂದಿಗೂ ನಡೆಯುತ್ತಿದೆ. ಯುದ್ಧದಲ್ಲಿ ಜನಸಾಮಾನ್ಯರ ಜೀವಹಾನಿಯಾಗಬಾರದು. ಸಭೆಗೆ ಆಗಮಿಸಿದ ಮಾಜಿ ಸೈನಿಕರನ್ನು ನೋಡಿ ನನಗೆ ದೇಶಭಕ್ತಿ ಇಮ್ಮಡಿಗೊಳ್ಳುತ್ತದೆ ಎಂದರು.

ವಿಪ ಸದಸ್ಯ ಎಸ್.ವಿ. ಸಂಕನೂರ, ಶಿರಹಟ್ಟಿ ಶಾಸಕ ಡಾ. ಚಂದ್ರು ಲಮಾಣಿ, ಡಿಸಿ ಸಿ.ಎನ್. ಶ್ರೀಧರ್, ಎಸ್ಪಿ ಬಿ.ಎಸ್. ನೇಮಗೌಡ, ಜಿ.ಪಂ. ಸಿಇಓ ಭರತ್ ಎಸ್., ಕರ್ನಲ್ ಭುವನ್ ಕರೆ, ಕರ್ನಾಟಕ ಬಟಾಲಿಯನ್, ಎನ್‌ಸಿಸಿ ಮುಂತಾದವರು ಮಾತನಾಡಿದರು. ಮಾಜಿ ಸೈನಿಕರ ಸಂಘದ ಅಧ್ಯಕ್ಷ ಬಸಲಿಂಗಪ್ಪ ಮುಂಡರಗಿ ಅವರು ಮಾತನಾಡಿ, ಹಾಲಿ ಸೈನಿಕರ ಕುಟುಂಬಕ್ಕೆ ನಾವು ಧೈರ್ಯ ತುಂಬೋಣ. ಅಗತ್ಯವಿದ್ದಲ್ಲಿ ನಾವೂ ಯುದ್ಧದಲ್ಲಿ ಹೋರಾಡಲು ಸದಾ ಸಿದ್ಧರೆಂದು ಸಭೆಗೆ ತಿಳಿಸಿದರು. ಸಭೆಯಲ್ಲಿ ವಿವಿಧ ಇಲಾಖೆಯ ಅಧಿಕಾರಿಗಳು ಸಿಬ್ಬಂದಿಗಳು ಹಾಜರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಅಧಿವೇಶನ ಮುಗಿದ ಬಳಿಕ ಡಿಕೆಶಿಗೆ ಶುಭಸುದ್ದಿ : ಇಕ್ಬಾಲ್
ಬೆಳಗಾವೀಲೂ ‘ಕೈ’ ಡಿನ್ನರ್‌ ಸಭೆಗೆ ಬಿವೈವಿ ಕಿಡಿ