ಕನ್ನಡಪ್ರಭ ಮಾಲೂರು
ತಾಲೂಕು ಕರ್ನಾಟಕ ರಕ್ಷಣಾ ವೇದಿಕೆ ಪ್ರವೀಣ್ ಕುಮಾರ್ ಶೆಟ್ಟಿ ಬಣದ ವತಿಯಿಂದ ಪಾಪಿ ಪಾಕಿಸ್ತಾನದ ವಿರುದ್ಧ ಭಾರತ ದೇಶದ ಸೈನಿಕರ ಆತ್ಮ ವಿಶ್ವಾಸ ಹೆಚ್ಚಿಸಲಿ ಎಂದು ಪಟ್ಟಣದ ಗ್ರಾಮ ದೇವತೆ ಶ್ರೀ ಮಾರಿಕಾಂಬಾ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿದರು. ಈ ಸಂಧರ್ಭದಲ್ಲಿ ಸಂಘಟನೆಯ ಜಿಲ್ಲಾಧ್ಯಕ್ಷ ಚಂಬೆ ರಾಜೇಶ್ ಮಾತನಾಡಿ, ಗ್ರಾಮ ದೇವತೆ ಮಾರಿಕಾಂಬಾ ದೇವಿಯ ಆಶೀರ್ವಾದ ನಮ್ಮ ಸೈನಿಕರ ಮೇಲಿರಲಿ, ಆಪರೇಷನ್ ಸಿಂಧೂರ ಯಶಸ್ವಿ ಕಾರ್ಯಾಚರಣೆಗೆ ದೇಶವಾಸಿಗಳಿಗೆ ಹೆಮ್ಮೆ ತಂದಿದೆ ಎಂದರು.ಪ್ರಧಾನಿ ಮೋದಿ ದೃಢ ನಿರ್ದಾರ
ದೇಶದಪ್ರಧಾನ ಮಂತ್ರಿಗಳು ಬಹಳ ದಿಟ್ಟಹೆಜ್ಜೆ ಇಟ್ಟು ಬಲವಾದ ಧೃಡನಿರ್ಧಾರ ತೊಟ್ಟು ಆಪರೇಷನ್ ಸಿಂಧೂರ ಕೈಗೊಂಡಿದ್ದಾರೆ. ಇದನ್ನು ಎಲ್ಲಾ ಭಾರತೀಯರು ಮೆಚ್ಚಬೇಕು ಎಂದ ಅವರು ಕಳೆದ ಏ.೨೨ರಂದುಕಾಶ್ಮೀರದ ಪೆಹಲ್ಯಾಮ್‌ನಲ್ಲಿ ಪ್ರವಾಸಿಗರ ಮೇಲೆ ಉಗ್ರರು ದಾಳಿನಡೆಸಿದ್ದರು. ಭಾರತೀಯ ಕುಟುಂಬಗಳು ಅಂದು ಅತಿಯಾದ ನೋವಿನಿಂದ ಪೆಹಲ್ಕಾ ಪರಿಸ್ಥಿತಿ ಎದುರಿಸಿದ್ದರು. ಆ ದುರ್ಘಟನೆಯಲ್ಲಿ ಹೆಣ್ಣುಮಕ್ಕಳು ತಮ್ಮ ಕುಂಕುಮವನ್ನು ಕಳೆದುಕೊಂಡಿದ್ದರು ಎಂದು ಆಕ್ರೋಶ ವ್ಯಕ್ತಪಡಿಸಿದರು.ಆಪರೇಷನ್ ಸಿಂದೂರ ಯಶಸ್ವಿ
ಇಂತಹ ಹೀನ ಕೃತ್ಯಕ್ಕೆ ಪ್ರತ್ಯುತ್ತರವಾಗಿ ಉಗ್ರರ ನೆಲೆಗಳ ಮೇಲೆ ಭಾರತೀಯ ಸೇನೆ ದಾಳಿ ಮಾಡಿ ನಾಶಪಡಿಸಿದೆ. ನಮ್ಮ ದೇಶದ ಸೈನಿಕರು ನಡೆಸಿದ ಸಿಂಧೂರ ದಾಳಿಯು ಯಶಸ್ವಿಯಾಗಿದ್ದು ಭಾರತ ದೇಶದ ಸೈನಿಕರಿಗೆ ದೇವರು ಮತ್ತಷ್ಟು ಶಕ್ತಿ ನೀಡಲಿ ಎಂದು ಮಾರಿಕಾಂಬ ದೇವಾಲಯದಲ್ಲಿ ಸಂಘಟನೆ ವತಿಯಿಂದ ಹೋಮ ಹವನ ನಡೆಸಿ ದೇವಿಗೆ ವಿಶೇಷ ಪೂಜೆ ಸಲ್ಲಿಸಿ ಪ್ರಾರ್ಥಿಸಿದ್ದಾಗಿ ತಿಳಿಸಿದರು. ಈ ಸಂದರ್ಭದಲ್ಲಿ ತಾಲೂಕು ಅಧ್ಯಕ್ಷ ಶಿವಾರ ನಾರಾಯಣಸ್ವಾಮಿ, ಕಾರ್ಯಾಧ್ಯಕ್ಷ ಎನ್.ರಾಮಕ್ರಿಷ್ಣಪ್ಪ, ಪ್ರದಾನ ಕಾರ್ಯದರ್ಶಿ ಎಂ.ಎಸ್.ಮಣಿ, ಹಿರಿಯ ಹೋರಾಟಗಾರ ಎ.ಎನ್ ದಯಾನಂದ್, ಜಿಲ್ಲಾ ಮಹಿಳಾ ಪ್ರಧಾನ ಕಾರ್ಯದರ್ಶಿ ದಾಕ್ಷಾಯಿಣಿ, ಜಿಲ್ಲಾ ಉಪಾಧ್ಯಕ್ಷ ಕೊಪ್ಪ ಚಂದ್ರು, ರೈತ ಘಟಕ ಮುಖಂಡ ಕೃಷ್ಣಪ್ಪ, ಎ. ವಿ ರಾಮಕೃಷ್ಣಪ್ಪ, ಆಟೋ ನಾರಾಯಣಸ್ವಾಮಿ, ಜವಳಿ ಮಂಜುನಾಥ್, ಮಿಥುನ್, ಸುಧಾಕರ್, ಹನುಮಂತರೆಡ್ಡಿ, ಪಾಪಿ ರೆಡ್ಡಿ, ಮುನಿರಾಜು, ಶಿವಕುಮಾರ್, ಪಾಪಯ್ಯ, ಇತರರು ಪಾಲ್ಗೊಂಡಿದ್ದರು.