ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ
ಪಟ್ಟಣದ ಭ್ರಮರಾಂಭ ಶ್ರೀಚನ್ನಮಲ್ಲಿಕಾರ್ಜುನ ದೇವಾಲಯದಲ್ಲಿ ಪಾಪಿ ಪಾಕಿಸ್ತಾನದ ಸಂಹಾರ, ದುಷ್ಟರ ನಾಶ ಹಾಗೂ ಭಾರತೀಯ ಸೈನಿಕರ ಕ್ಷೇಮಕ್ಕಾಗಿ ನಡೆದ ಚಂಡಿಕಾ ಹೋಮವು ಸಂಪನ್ನವಾಗಿ ನಡೆಯಿತು.
ತಾಲೂಕು ಬ್ರಾಹ್ಮಣ ಮಹಾಸಭಾದಿಂದ ಪಟ್ಟಣದ ಶ್ರವಣಬೆಳಗೊಳ ರಸ್ತೆಯ ಪ್ರಸಿದ್ಧ ಈಶ್ವರ ದೇವಾಲಯದಲ್ಲಿ ಚಂಡಿಕಾ ಹೋಮ ಸಂಸ್ಕೃತಿ ಸಂಘಟಕ ಗೋಪಾಲ ಕೃಷ್ಣ ಅವಧಾನಿಗಳ ನೇತೃತ್ವದಲ್ಲಿ ನಡೆದು ಶತ್ರುಗಳ ಸಂಹಾರಕ್ಕೆ ಹಾಗೂ ನಮ್ಮ ದೇಶದ ಸೈನಿಕರ ಕ್ಷೇಮಕ್ಕಾಗಿ ವಿಶೇಷ ಪ್ರಾರ್ಥನೆ ಸಲ್ಲಿಸಲಾಯಿತು.ತಾಲೂಕು ಬ್ರಾಹ್ಮಣ ಮಹಾಸಭಾ ಅಧ್ಯಕ್ಷ ಅರವಿಂದ್ ಕಾರಂತ್ ಮಾತನಾಡಿ, ಭಾರತೀಯ ಸೈನಿಕರು ಆಪರೇಷನ್ ಸಿಂದೂರ ಹೆಸರಿನಲ್ಲಿ ಕಾರ್ಯಾಚರಣೆ ನಡೆಸಿ ಯುದ್ಧ ಮಾಡಿ ತಕ್ಕ ಪಾಠ ಕಲಿಸಿದ್ದಾರೆ. ಭಾರತೀಯ ಸೈನಿಕರ ಧೈರ್ಯ ಹಾಗೂ ಹೋರಾಟದ ಮನೋಭಾವನೆಯು ಮಾದರಿಯಾಗಿದೆ. ಆದ್ದರಿಂದ ಸೈನಿಕರ ಆರೋಗ್ಯ ಸಂವರ್ಧನೆಗಾಗಿ ಪ್ರಾರ್ಥನೆ ಸಲ್ಲಿಸಲಾಗಿದೆ ಎಂದರು.
ಈ ವೇಳೆ ಸಂಸ್ಕೃತಿ ಸಂಘಟಕ ನಾಗಮಂಗಲ ಮಂಜುನಾಥ್, ಮಹಾಸಭಾದ ಸದಸ್ಯರಾದ ರಘುರಾಮ್ ನಾಡಿಗ್, ಕುಪ್ಪಳ್ಳಿ ಸುಬ್ರಮಣ್ಯ, ಮೊದೂರು ಶ್ರೀಧರ್, ಬ್ಯಾಟರಿಶಾಪ್ ಸುಬ್ಬಣ್ಣ, ಹರೀಶ್, ಅನಂತರಾಮಯ್ಯ ಸೇರಿದಂತೆ ಹಲವಾರು ವಿಪ್ರರು ಮತ್ತು ಭಕ್ತರು ಚಂಡಿಕಾ ಹೋಮದಲ್ಲಿ ಭಾಗವಹಿಸಿದ್ದರು.