ಆನೆ ಹಿಡಿಯುವ ಕಾರ್ಯಾಚರಣೆಗೆ ಚಾಲನೆ

KannadaprabhaNewsNetwork |  
Published : Nov 19, 2026, 01:30 AM IST
18ಎಚ್ಎಸ್ಎನ್3 : ಕಾಡಾನೆಗಳನ್ನು ಸ್ಥಳಾಂತರಿಸಲು    ಏಳು  ಕುಮ್ಕಿ ಆನೆಗಳು ಆಗಮಿಸಿದ್ದು, ಆನೆಗಳಿಗೆ ಪೂಜೆ ಸಲ್ಲಿಸಿ ಕಾರ್ಯಚರಣೆಗೆಗೆ ಕಳುಹಿಸಲಾಯಿತು. | Kannada Prabha

ಸಾರಾಂಶ

ಕಾಡಾನೆಗಳನ್ನು ಸೆರೆ ಹಿಡಿದು ಭದ್ರ ಅರಣ್ಯಕ್ಕೆ ಸ್ಥಳಾಂತರಿಸಲು ಕಾರ್ಯಾಚರಣೆ ಪ್ರಾರಂಭಿಸಲಾಗಿದೆ. ಮಂಗಳವಾರ ಬೆ.8 ಗಂಟೆಯಿಂದ ಮ.12 ಗಂಟೆಯವರೆಗೆ ಮತ್ತೊಂದು ಸಭೆ ಮಾಡಿದ್ದೇವೆ. ಇದು ಕಷ್ಟಕರವಾದ ಕಾರ್ಯಾಚರಣೆಯಾಗಿದೆ. ಈ ಭಾಗದಲ್ಲಿ 50ಕ್ಕೂ ಹೆಚ್ಚು ಆನೆಗಳು 6 ಗುಂಪುಗಳಾಗಿವೆ, ಸುಮಾರು 350 ಅರಣ್ಯ ಇಲಾಖೆ ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಭಾಗಿಯಾಗಲಿದ್ದಾರೆ. ಎಸಿಎಫ್, ಆರ್‌ಎಫ್‌ಓ ನೇತೃತ್ವದಲ್ಲಿ ಒಟ್ಟು ಆರು ತಂಡಗಳನ್ನು ರಚನೆ ಮಾಡಿದ್ದೇವೆ, ಪ್ರತಿಯೊಂದು ತಂಡದಲ್ಲೂ ಥರ್ಮಲ್ ದ್ರೋಣ್, ವೈದ್ಯಾಧಿಕಾರಿ, ಕುಮ್ಕಿ ಆನೆಗಳು ಇರುತ್ತವೆ ಎಂದರು.

ಕನ್ನಡಪ್ರಭ ವಾರ್ತೆ ಬೇಲೂರುಕಾಡಾನೆ ಹಾವಳಿಯಿಂದ ಪ್ರಾಣ ಹಾನಿ ಜೊತೆಗೆ ಬೆಳೆ ನಾಶ ಪ್ರಕರಣ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಕಾಡಾನೆಗಳನ್ನು ಸೆರೆ ಹಿಡಿದು ಭದ್ರ ಅರಣ್ಯಕ್ಕೆ ಸ್ಥಳಾಂತರಿಸಲು ಕಾರ್ಯಾಚರಣೆ ಪ್ರಾರಂಭಿಸಲಾಗಿದೆ.ಬಿಕ್ಕೋಡು ತಾತ್ಕಾಲಿಕ ಆನೆ ಶಿಬಿರಕ್ಕೆ ಮತ್ತಿಗೋಡು ಆನೆ ಶಿಬಿರದಿಂದ ಅಶೋಕ, ಶ್ರೀಕಂಠ, ರೋಹಿತ್ ಹಾಗೂ ಭೀಮನಕಟ್ಟೆ ಆನೆ ಶಿಬಿರದಿಂದ ಏಕಲವ್ಯ ಹಾಗೂ ದುಬಾರೆ ಶಿಬಿರದಿಂದ ಪ್ರಶಾಂತ, ಮಾಣಿಕ್ಯ, ಅಯ್ಯಪ್ಪ ಸೇರಿ ಒಟ್ಟು ಏಳು ಕುಮ್ಕಿ ಆನೆಗಳು ಆಗಮಿಸಿದ್ದು, ಆನೆಗಳಿಗೆ ಪೂಜೆ ಸಲ್ಲಿಸಿ ಕಾರ್ಯಾಚರಣೆಗೆ ಕಳುಹಿಸಲಾಯಿತು. ಸಹಾಯಕ ಪ್ರಧಾನ ವನ್ಯಜೀವಿ ಸಂರಕ್ಷಣಾಧಿಕಾರಿ ಮನೋಜ್ ರಾಜನ್ ಮಾತನಾಡಿ, ಮಾನವ-ಕಾಡಾನೆ ನಡುವಿನ ಸಂಘರ್ಷ ಹೆಚ್ಚಾಗಿರುವ ಕಾರಣ, ಸೋಮವಾರ ರಾತ್ರಿ 12 ಗಂಟೆಯವರೆಗೆ ಮೊದಲ ಸಭೆ ಮಾಡಿದ್ದೇವೆ. ಮಂಗಳವಾರ ಬೆ.8 ಗಂಟೆಯಿಂದ ಮ.12 ಗಂಟೆಯವರೆಗೆ ಮತ್ತೊಂದು ಸಭೆ ಮಾಡಿದ್ದೇವೆ. ಇದು ಕಷ್ಟಕರವಾದ ಕಾರ್ಯಾಚರಣೆಯಾಗಿದೆ. ಈ ಭಾಗದಲ್ಲಿ 50ಕ್ಕೂ ಹೆಚ್ಚು ಆನೆಗಳು 6 ಗುಂಪುಗಳಾಗಿವೆ, ಸುಮಾರು 350 ಅರಣ್ಯ ಇಲಾಖೆ ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಭಾಗಿಯಾಗಲಿದ್ದಾರೆ. ಎಸಿಎಫ್, ಆರ್‌ಎಫ್‌ಓ ನೇತೃತ್ವದಲ್ಲಿ ಒಟ್ಟು ಆರು ತಂಡಗಳನ್ನು ರಚನೆ ಮಾಡಿದ್ದೇವೆ, ಪ್ರತಿಯೊಂದು ತಂಡದಲ್ಲೂ ಥರ್ಮಲ್ ದ್ರೋಣ್, ವೈದ್ಯಾಧಿಕಾರಿ, ಕುಮ್ಕಿ ಆನೆಗಳು ಇರುತ್ತವೆ ಎಂದರು.

ಆರ್‌ಡಿಪಿಆರ್‌, ಪಿಡಿಒ, ಪೊಲೀಸರು, ವಿದ್ಯುತ್ ಇಲಾಖೆ, ಆರೋಗ್ಯ ಇಲಾಖೆ, ಅಗ್ನಿಶಾಮಕದಳದ ಸಿಬ್ಬಂದಿ ಕಾರ್ಯಾಚರಣೆ ಸಂದರ್ಭ ಅಗತ್ಯ ಸಹಕಾರ ನೀಡಲಿದ್ದಾರೆ. ಅರಣ್ಯ ಇಲಾಖೆ ಸಿಬ್ಬಂದಿ ಪ್ರಾಣ ಒತ್ತೆ ಇಟ್ಟು ಕೆಲಸ ಮಾಡುತ್ತಿದ್ದಾರೆ. ರೈತರು ಹಾಗೂ ಸಾರ್ವಜನಿಕರು ಕಾರ್ಯಾಚರಣೆಗೆ ಸಹಕಾರ ನೀಡುವುದು ಬಹುಮುಖ್ಯವಾಗಿದೆ. ಮೊದಲು ಇಬ್ಬರನ್ನು ಬಲಿ ಪಡೆದಿರುವ ಕಾಡಾನೆಗಳನ್ನು ಸೆರೆ ಹಿಡಿಯಲು ತಯಾರಿ ನಡೆಸಿದ್ದೇವೆ ಎಂದು ತಿಳಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಹಿಳಾ ನಾಯಕತ್ವ ಪ್ರಜಾಪ್ರಭುತ್ವಕ್ಕೆ ಅಡಿಪಾಯ: ಸುಧಾ
‘ಸರ್ಕಾರವೇ ಮೊದಲ ಗ್ರಾಹಕ’ ಅಡಿ 8 ನವೋದ್ಯಮ