ಬ್ಯಾಡಗಿ: ಕಾಂಗ್ರೆಸ್ ಸರ್ಕಾರ ಪ್ರಕಟಿಸಿದ ಪಂಚ ಗ್ಯಾರಂಟಿ ಯೋಜನೆಗಳು ಯಶಸ್ವಿಯಾಗಲ್ಲ ಎಂದು ಬೊಬ್ಬೆ ಹೊಡೆಯುತ್ತಿದ್ದ ವಿಪಕ್ಷಗಳು ಇಂದು ನಮ್ಮದೇ ಯೋಜನೆಗಳನ್ನು ಅನುಕರಣೆಗಿಳಿದಿದ್ದಾರೆ ಎಂದು ಶಾಸಕ ಬಸವರಾಜ ಶಿವಣ್ಣನವರ ಲೇವಡಿ ಮಾಡಿದರು.
ಶಕ್ತಿ ಯೋಜನೆ ರಾಜ್ಯದ ಮಹಿಳೆಯರಿಗೆ ಶಕ್ತಿ ತುಂಬಿದೆ. ಕೇವಲ ಸುಳ್ಳು ಭರವಸೆಗಳಿಂದ ಜನರ ಮನಸ್ಸು ಗೆಲ್ಲಲು ಸಾಧ್ಯವಿಲ್ಲ ಎನ್ನುವುದನ್ನು ಅರಿತಿರುವ ರಾಜ್ಯದಲ್ಲಿನ ಸಿದ್ಧರಾಮಯ್ಯ ನೇತೃತ್ವದ ಸರ್ಕಾರ ನುಡಿದಂತೆ ನಡೆದು ಜನಮನ್ನಣೆ ಗಳಿಸುತ್ತಿದೆ ಎಂದರು.
ರಸ್ತೆ ಸಾರಿಗೆ ಸಂಸ್ಥೆಯ ಅಧಿಕಾರಿಗಳ ಸಹಕಾರದಿಂದ ತಾಲೂಕಿನ ಯಾವುದೇ ಗ್ರಾಮಗಳಿಗೂ ಬಸ್ ಕೊರತೆಯಾಗದಂತೆ ನೋಡಿಕೊಳ್ಳಲಾಗುತ್ತಿದ್ದು ಕೆಲವೇ ತಿಂಗಳಲ್ಲಿ ವಿದ್ಯಾರ್ಥಿಗಳ ಪರೀಕ್ಷೆ ಎದುರಾಗಲಿದ್ದು ಮಕ್ಕಳಿಗೆ ತೊಂದರೆಯಾಗದಂತೆ ಬಸಗಳ ಓಡಾಟ ನಿರ್ವಹಣೆ ಮಾಡುವಂತೆ ಸೂಚಿಸಿದರು. ಈ ಸಂದರ್ಭದಲ್ಲಿ ಪುರಸಭೆ ಅಧ್ಯಕ್ಷ ಬಾಲಚಂದ್ರಗೌಡ ಪಾಟೀಲ, ಉಪಾಧ್ಯಕ್ಷ ಸುಭಾಸ ಮಾಳಗಿ, ಸದಸ್ಯರಾದ ರಾಮಣ್ಣ ಕೋಡಿಹಳ್ಳಿ, ಮಹಮ್ಮದ ರಫೀಕ್ ಮುದುಗಲ್, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ತಾಲೂಕಾಧ್ಯಕ್ಷ ಶಂಭನಗೌಡ ಪಾಟೀಲ, ಕಾಂಗ್ರೆಸ್ ತಾಲೂಕಾಧ್ಯಕ್ಷ ದಾನಪ್ಪ ಚೂರಿ, ಮುಖಂಡರಾದ ಸಿ.ಆರ್. ಬಳ್ಳಾರಿ, ಖಾದರ್‌ಸಾಬ್ ದೊಡ್ಮನಿ, ಆಶ್ರಯ ಸಮಿತಿ ಅಧ್ಯಕ್ಷ ಅಬ್ದುಲ್ ಮುನಾಫ್ ಎರೇಶೀಮಿ, ಪುರಸಭೆ ಸದಸ್ಯರಾದ ರಾಜಣ್ಣ ಕಳ್ಯಾಳ, ಮಾಜಿ ಸದಸ್ಯ ದುರ್ಗೇಶ ಗೋಣೆಮ್ಮನವರ, ಮಂಜುನಾಥ ಬೋವಿ, ನಜೀರಅಹ್ಮದ್ ಶೇಖ, ಸೋಮ ಮಾಳಗಿ, ಮಜಿದ ಮುಲ್ಲಾ, ಎ.ಎಂ. ಸೌದಾಗರ, ಮೋಹನಕುಮಾರ ಹುಲ್ಲತ್ತಿ, ಜೈಭೀಮ್ ರಾರಾವಿ, ಮಂಜೂರ ಹಕೀಮ್ ಉದಯ ಚೌಧರಿ ಸೇರಿದಂತೆ ಇನ್ನಿತರರಿದ್ದರು..ಧರ್ಮಸ್ಥಳ ಹಾಗೂ ಬೆಂಗಳೂರಿಗೆ ಬಸ್ ಸೌಲಭ್ಯ: ನೂತನ ಬಸ್‌ಗಳನ್ನು ಬ್ಯಾಡಗಿಯಿಂದ ಧರ್ಮಸ್ಥಳ ಮಾರ್ಗವಾಗಿ ಕುಕ್ಕೆ ಸುಬ್ರಮಣ್ಯ ಮತ್ತು ಸುಬ್ರಮಣ್ಯದಿಂದ ಮರಳಿ ಬ್ಯಾಡಗಿಗೆ 2 ಬಸ್‌ಗಳನ್ನು, ಬ್ಯಾಡಗಿಯಿಂದ ಬೆಂಗಳೂರಿಗೆ ಬೆಂಗಳೂರಿಂದ ಬ್ಯಾಡಗಿ 2 ಬಸ್ ಓಡಿಸಲು ನಿರ್ಧರಿಸಲಾಗಿದ್ದು, ವೇಳಾಪಟ್ಟಿ ನಂತರ ಪ್ರಕಟಿಸಲಾಗುವುದು ಎಂದು ಘಟಕ ವ್ಯವಸ್ಥಾಪಕು ಹೇಳುತ್ತಾರೆ.ಕಾಗಿನೆಲೆ ಬಸ್ ಸೌರ‍್ಯಕ್ಕೆ ಆಗ್ರಹ: ಸಂಜೆ 5 ನಂತರ ಕಾಗಿನೆಲೆ ಗ್ರಾಮಕ್ಕೆ ಯಾವುದೇ ಬಸ್ ಸೌಲಭ್ಯವಿಲ್ಲ ಇದರಿಂದ ಸಾರ್ವಜನಿಕರು ಹಾಗೂ ವಿದ್ಯಾರ್ಥಿಗಳಿಗೆ ಸಾಕಷ್ಟು ತೊಂದರೆಯಾಗುತ್ತಿದೆ, ಆದ್ದರಿಂದ ರಾತ್ರಿ ವೇಳೆಯಲ್ಲಿ ಸೌಕರ್ಯ ಕಲ್ಪಿಸುವುದರಿಂದ ಸುಮಾರು 10 ಗ್ರಾಮದ ಜನರಿಗೆ ಅನುಕೂಲವಾಗಲಿದ್ದು ಕಾಗಿನೆಲೆಯಿಂದ-ಬ್ಯಾಡಗಿ ಪಟ್ಟಣಕ್ಕೆ ಬೆಳಿಗ್ಗೆ 6 ಗಂಟೆಗೆ ಬಸ್ ಸೌಕರ್ಯ ಕಲ್ಪಿಸಬೇಕು ಎಂದು ಗುತ್ತೆಮ್ಮ ಮಾಳಗಿ ಆಗ್ರಹಿಸಿದರು.