ವಿಜಯಪುರ ಜಿಲ್ಲೆ ವಿಭಜನೆಗೆ ವಿರೋಧ

KannadaprabhaNewsNetwork |  
Published : Dec 31, 2023, 01:30 AM IST
ದೇವರಹಿಪ್ಪರಗಿ ಕೇಂದ್ರ ಸ್ಥಾನದಲ್ಲಿದೆ ಜಿಲ್ಲೆ ಮಾಡಿ ಇಂಡಿಗೆ ಸೇರಿಸಬೇಡಿ  | Kannada Prabha

ಸಾರಾಂಶ

ಮೊದಲು ನಮ್ಮ ನೂತನ ತಾಲೂಕಿಗೆ ಅಗತ್ಯ ಸೌಕರ್ಯಗಳನ್ನು ಒದಗಿಸಲಿ. ಒಂದು ವೇಳೆ ಹೊಸ ಜಿಲ್ಲೆ ಮಾಡುವ ನಿಲುವು ಸರಕಾರದಿದ್ದರೆ ದೇವರಹಿಪ್ಪರಗಿಯನ್ನೇ ಜಿಲ್ಲೆಗಾಗಿ ಪರಿಗಣಿಸಬೇಕು.

ಕನ್ನಡಪ್ರಭ ವಾರ್ತೆ ದೇವರಹಿಪ್ಪರಗಿ

ವಿಜಯಪುರ ಜಿಲ್ಲೆ ವಿಭಜನೆಯಾದರೆ ಅಭಿವೃದ್ಧಿ ಕುಂಠಿತವಾಗುತ್ತದೆ. ಮೊದಲು ನಮ್ಮ ನೂತನ ತಾಲೂಕಿಗೆ ಅಗತ್ಯ ಸೌಕರ್ಯಗಳನ್ನು ಒದಗಿಸಲಿ. ಒಂದು ವೇಳೆ ಹೊಸ ಜಿಲ್ಲೆ ಮಾಡುವ ನಿಲುವು ಸರಕಾರದಿದ್ದರೆ ದೇವರಹಿಪ್ಪರಗಿಯನ್ನೇ ಜಿಲ್ಲೆಗಾಗಿ ಪರಿಗಣಿಸಬೇಕು ಎಂದು ಷ.ಬ್ರ.ಶ್ರೀ ವೀರಗಂಗಾಧರ ಶಿವಾಚಾರ್ಯರು ಆಗ್ರಹಿಸಿದರು.

ಪಟ್ಟಣದ ಪ್ರವಾಸಿ ಮಂದಿರದಲ್ಲಿ ಶನಿವಾರ ತಾಲೂಕು ಆಡಳಿತ ವತಿಯಿಂದ ಆಯೋಜಿಸಿದ್ದ ಇಂಡಿ ಜಿಲ್ಲಾ ಕೇಂದ್ರವನ್ನಾಗಿ ಸೃಜಿಸುವ ಬಗ್ಗೆ ಇಂಡಿ ಉಪ ವಿಭಾಗಾಧಿಕಾರಿ ಆಬೀದ ಗದ್ಯಾಳರ ಅಧ್ಯಕ್ಷತೆಯಲ್ಲಿ ನಡೆದ ಜನಾಭಿಪ್ರಾಯ ಸಭೆಯಲ್ಲಿ ಮಾತನಾಡಿದರು. ವಿಜಯಪುರ ಜಿಲ್ಲೆಯನ್ನು ವಿಭಜನೆ ಮಾಡುವುದಾದರೆ ದೇವರಹಿಪ್ಪರಗಿ ಕೇಂದ್ರ ಸ್ಥಾನದಲ್ಲಿದೆ. ಹಲವು ರಾಜ್ಯಗಳಿಗೆ ರಾಷ್ಟ್ರೀಯ ಹೆದ್ದಾರಿ ಸಂಪರ್ಕ ಇದೆ. ಹೈದರಾಬಾದ್, ಪುಣಾ, ಮುಂಬೈ, ಹುಬ್ಬಳ್ಳಿ, ಬೆಂಗಳೂರು ಹಾಗೂ ಸೋಲಾಪುರ ಹೋಗಲಿಕ್ಕೆ ರಾಷ್ಟ್ರೀಯ ಹೆದ್ದಾರಿ ಇದೆ. ಇಂಡಿ ಜಿಲ್ಲೆ ಮಾಡುವುದು ಸರ್ಕಾರದ ಅವೈಜ್ಞಾನಿಕ ನಿರ್ಧಾರವಾಗಿದೆ ಇಂಡಿಗೆ ನಮ್ಮ ಕ್ಷೇತ್ರ ಸೇರ್ಪಡೆ ಮಾಡಬೇಡಿ. ನೂತನ ತಾಲೂಕು ದೇವರಹಿಪ್ಪರಗಿಯನ್ನು ಜಿಲ್ಲಾ ಕೇಂದ್ರ ಮಾಡಿ ಎಂದು ಹಲವಾರು ಸಂಘಟನೆಯ ಪದಾಧಿಕಾರಿಗಳು, ಮುಖಂಡರು ಪಕ್ಷಾತೀತವಾಗಿ ಬೆಂಬಲಿಸಿ ಮನವಿ ಪತ್ರ ಸಲ್ಲಿಸಿದರು.

ಈ ವೇಳೆ ಮಾಜಿ ಶಾಸಕ ಶರಣಪ್ಪ ಸುಣಗಾರ, ನಿವೃತ್ತ ನೌಕರರ ಸಂಘದ ಅಧ್ಯಕ್ಷ ಚನ್ನವೀರಪ್ಪ ಕುದುರಿ, ಕಾನಿಪ ತಾಲೂಕು ಘಟಕದ ಅಧ್ಯಕ್ಷ ಸಂಗಮೇಶ ಉತ್ನಾಳ, ಮುಖಂಡ ಡಾ. ಆರ್‌.ಆರ್‌ ನಾಯಕ, ಶ್ರೀಧರ ನಾಡಗೌಡ, ಕಬೂಲ್ ಕೂಕಟನೂರ, ಸಾಯಿಬಣ್ಣ ಬಾಗೇವಾಡಿ, ಪ್ರಕಾಶ ಗುಡಿಮನಿ, ರಹಿಮಾನ್ ಕನಕಾಲ್, ಅಜೀಜ್ ಯಲಗಾರ, ಶರಣ ಬಸು ದಿಂಡವಾರ, ಮೆಹಬೂಬ ಬಾಗವಾನ, ಬಸವರಾಜ ನಾಟಿಕಾರ, ತಹಸೀಲ್ದಾರ್‌ ಪ್ರಕಾಶ ಸಿಂದಗಿ, ಕಸಾಪ ಅಧ್ಯಕ್ಷ ಜಿ.ಪಿ.ಬಿರಾದಾರ, ಶಸಾಪ ಎಸ್.ಎನ್.ಬಸವರೆಡ್ಡಿ, ಪ.ಪಂ ಸದಸ್ಯ ಕಾಸಿನಾಥ ಜಮಾದಾರ, ಕಾಸಿನಾಥ ಭಜಂತ್ರಿ, ಸುಮಂಗಲಾ ಸೇಬೆನ್ನವರ್‌, ಸರಿತಾ ನಾಯಕ, ವೀರೇಶ ಕುದುರಿ, ಸಂಗಮೇಶ ಮಸಿಬಿನಾಳ, ಶರಣಗೌಡ ಹಿರೇಗೌಡ, ಉಪ ತಹಸೀಲ್ದಾರ್‌ ಸುರೇಶ ಮ್ಯಾಗೇರಿ ಸೇರಿದಂತೆ ಹಲವಾರು ಜನ ಪ್ರಗತಿಪರ ಸಂಘಟನೆಯ ಮುಖಂಡರು, ರಾಜಕೀಯ ಮುಖಂಡರು ಪಟ್ಟಣದ ಪ್ರಮುಖರು ಗಣ್ಯರು ಹಾಗೂ ಇತರರು ಇದ್ದರು.

PREV

Recommended Stories

ಸರ್ಕಾರಿ ಶಾಲೆ ಕುಡಿವ ನೀರಿಗೆ ವಿಷ ಬೆರೆಸಿದ್ದಕ್ಕೆ ಸಿಎಂ ಗರಂ
ಡಾ.ರಾಜ್‌ಕುಮಾರ್‌ರ ನೆಚ್ಚಿನ ಸಹೋದರಿ ನಾಗಮ್ಮ ನಿಧನ