ರಾಗಿ ಕಟಾವು ಯಂತ್ರಕ್ಕೆ ದುಬಾರಿ ಬಾಡಿಗೆಗೆ ವಿರೋಧ

KannadaprabhaNewsNetwork |  
Published : Dec 02, 2025, 01:45 AM IST
ರಾಗಿ ಕಟಾವು ಯಂತ್ರಕ್ಕೆ ದುಬಾರಿ ಬಾಡಿಗೆ ಪಡೆಯುತ್ತಿರುವ ಗುತ್ತಿಗೆದಾರರ ವಿರುದ್ಧ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿ ಎ.ಬಿ.ಬಸವರಾಜು ಅವರಿಗೆ ರಾಜ್ಯ ರೈತ ಸಂಘದ ವತಿಯಿಂದ ದೂರು ನೀಡಲಾಯಿತು. | Kannada Prabha

ಸಾರಾಂಶ

ದೊಡ್ಡಬಳ್ಳಾಪುರ: ರಾಗಿ ಕಟಾವು ಯಂತ್ರದ ಗುತ್ತಿಗೆದಾರರು ರೈತರಿಂದ ಹೆಚ್ಚುವರಿ ಬಾಡಿಗೆ ಹಣ ವಸೂಲಿ ಮಾಡುತ್ತಿರುವ ಹಾಗೂ ಈ ಬಗ್ಗೆ ಪ್ರಶ್ನೆ ಮಾಡುವ ರೈತರನ್ನು ಅವಾಚ್ಯವಾಗಿ ನಿಂದಿಸಿರುವ ಕುರಿತು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿ ಬಸವರಾಜು ಅವರಿಗೆ ರಾಜ್ಯ ರೈತ ಸಂಘದ ಪದಾಧಿಕಾರಿಗಳು ದೂರು ನೀಡಿದರು.

ದೊಡ್ಡಬಳ್ಳಾಪುರ: ರಾಗಿ ಕಟಾವು ಯಂತ್ರದ ಗುತ್ತಿಗೆದಾರರು ರೈತರಿಂದ ಹೆಚ್ಚುವರಿ ಬಾಡಿಗೆ ಹಣ ವಸೂಲಿ ಮಾಡುತ್ತಿರುವ ಹಾಗೂ ಈ ಬಗ್ಗೆ ಪ್ರಶ್ನೆ ಮಾಡುವ ರೈತರನ್ನು ಅವಾಚ್ಯವಾಗಿ ನಿಂದಿಸಿರುವ ಕುರಿತು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿ ಬಸವರಾಜು ಅವರಿಗೆ ರಾಜ್ಯ ರೈತ ಸಂಘದ ಪದಾಧಿಕಾರಿಗಳು ದೂರು ನೀಡಿದರು. ಜಿಲ್ಲಾಧಿಕಾರಿಗಳು ಒಂದು ಎಕರೆ ಪ್ರದೇಶದ ರಾಗಿ ಕಟಾವಿಗೆ ರೈತರಿಂದ ₹2,700 ಪಡೆಯುವಂತೆ ದರ ನಿಗದಿ ಪಡಿಸಿ ಆದೇಶ ಮಾಡಿದ್ದಾರೆ. ಆದರೆ ಗುತ್ತಿಗೆದಾರರು ₹3,500 ರು. ರೈತರಿಂದ ಪಡೆಯುತ್ತಿದಾರೆ. ತಹಸೀಲ್ದಾರ್ ಹಾಗೂ ಜಿಲ್ಲಾಧಿಕಾರಿಗಳಿಗೆ ದೂರು ನೀಡುವುದಾಗಿ ಹೇಳಿದರೆ, ಅವರಿಂದಲೇ ರಾಗಿ ಕಟಾವು ಮಾಡಿಸಿಕೊಳ್ಳಿ ಎಂದು ಉಡಾಫೆಯ ಉತ್ತರ ನೀಡುತ್ತಿದ್ದಾರೆ ಎಂದು ರಾಜ್ಯ ರೈತ ಸಂಘದ ತಾಲೂಕು ಘಟಕದ ಅಧ್ಯಕ್ಷ ಹನುಮೇಗೌಡ ಆರೋಪಿಸಿದರು. ಕನ್ನಡ ಪಕ್ಷದ ರಾಜ್ಯ ಉಪಾಧ್ಯಕ್ಷ ಸಂಜೀವ್‌ನಾಯ್ಕ, ರೈತ ಸಂಘದ ಮುತ್ತೇಗೌಡ, ವಸಂತ್‌, ಹನುಮಂತರಾಯಪ್ಪ ಇತರರಿದ್ದರು.

29ಕೆಡಿಬಿಪಿ2-

ರಾಗಿ ಕಟಾವು ಯಂತ್ರಕ್ಕೆ ದುಬಾರಿ ಬಾಡಿಗೆ ಪಡೆಯುತ್ತಿರುವ ಗುತ್ತಿಗೆದಾರರ ವಿರುದ್ಧ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿ ಎ.ಬಿ.ಬಸವರಾಜು ಅವರಿಗೆ ರಾಜ್ಯ ರೈತ ಸಂಘದ ತಾಲೂಕು ಘಟಕದ ಅಧ್ಯಕ್ಷ ಹನುಮೇಗೌಡ ನೇತೃತ್ವದಲ್ಲಿ ದೂರು ನೀಡಿದರು. ಮುತ್ತೇಗೌಡ, ವಸಂತ್‌, ಸಂಜೀವ್‌ನಾಯ್ಕ, ಹನುಮಂತರಾಯಪ್ಪ ಇತರರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಭಾರತೀಯರ ಕರೆತರಲು ವಿಶೇಷ ವಿಮಾನ ಮಾಡಿ: ಮೋದಿಗೆ ಸಿಎಂ ಸಿದ್ದು ಪತ್ರ
100ಕ್ಕೂ ಕನ್ನಡಿಗರ ಹೊತ್ತು ಬಂತು ಮೊದಲ ವಿಮಾನ