ನೀರಿನ ಘಟಕಕ್ಕೆ ಶಾಸಕರ ಭಾವಚಿತ್ರ ಹಾಕಿರುವುದಕ್ಕೆ ವಿರೋಧ

KannadaprabhaNewsNetwork | Published : Aug 1, 2024 12:15 AM

ಸಾರಾಂಶ

2019-20ನೇ ಸಾಲಿನಲ್ಲಿ ಟಯೋಟಾ ಕಿರ್ಲೋಸ್ಕರ್ ಕಂಪನಿ ನೀರಿನ ಘಟಕ ನಿರ್ಮಿಸಿತ್ತು. ಶಾಸಕರು ಬೇರೆಯವರು ಮಾಡಿಸಿದ ಅಭಿವೃದ್ಧಿ ಕಾರ್ಯಗಳನ್ನು ತಮ್ಮದೆಂದು ಬಿಂಬಿಸಿಕೊಳ್ಳುವುದನ್ನು ಬಿಡಬೇಕು. ಇಲ್ಲದಿದ್ದರೆ ಚಳವಳಿಗಳ ಮೂಲಕ ಬಿಸಿ ಮುಟ್ಟಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.

ಕನ್ನಡಪ್ರಭ ವಾರ್ತೆ ಭಾರತೀನಗರ

ಸಮುದಾಯ ಆರೋಗ್ಯ ಕೇಂದ್ರದ ಆವರಣ ಮುಂಭಾಗ ಟಯೋಟಾ ಕಿರ್ಲೋಸ್ಕರ್ ಕಂಪನಿಯಿಂದ ನಿರ್ಮಿಸಿದ್ದ ಶುದ್ಧ ಕುಡಿಯುವ ನೀರಿನ ಘಟಕಕ್ಕೆ ಶಾಸಕ ಕೆ.ಎಂ.ಉದಯ್ ಭಾವಚಿತ್ರ ಅಳವಡಿಸಿದ್ದನ್ನು ಖಂಡಿಸಿ ಜೆಡಿಎಸ್-ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.ಆಸ್ಪತ್ರೆ ಎದುರಿನ ಕುಡಿಯುವ ನೀರಿನ ಘಟಕದ ಬಳಿ ಸೇರಿದ ಕಾರ್ಯಕರ್ತರು ಶಾಸಕ ಕೆ.ಎಂ.ಉದಯ್ ವಿರುದ್ಧ ಧಿಕ್ಕಾರ ಘೋಷಣೆಗಳನ್ನು ಕೂಗಿದರು. ಟಯೋಟಾ ಕಿರ್ಲೋಸ್ಕರ್ ಕಂಪನಿ ಅಳವಡಿಸಿದ್ದ ಹೆಸರನ್ನು ಮುಚ್ಚಿ ಹಾಕಿ ಶಾಸಕರ ಭಾವಚಿತ್ರನ್ನು ಹಾಕಿರುವುದನ್ನು ತೆರವುಗೊಳಿಸುವಂತೆ ಆಗ್ರಹಿಸಿದರು.ಇಂತಹ ಕೀಳುಮಟ್ಟದ ರಾಜಕಾರಣ ಹಿಂದೆಂದೂ ನಡೆದಿಲ್ಲ. ಈ ಹಿಂದೆ ಶಾಸಕರಾಗಿದ್ದ ಡಿ.ಸಿ.ತಮ್ಮಣ್ಣ ಹಲವಾರು ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದಾರೆ. ಟಯೋಟ ಕಿರ್ಲೋಸ್ಕರ್ ಕಂಪನಿಯಿಂದ ಶುದ್ಧ ಕುಡಿಯುವ ನೀರಿನ ಘಟಕ ಸೇರಿದಂತೆ ಸರ್ಕಾರಿ ಶಾಲಾ ಕೊಠಡಿಗಳನ್ನು ನಿರ್ಮಾಣ ಮಾಡಿದ್ದಾರೆ. ಅವರೆಂದೂ ಈ ರೀತಿ ಭಾವಚಿತ್ರ ಹಾಕಿಕೊಂಡಿಲ್ಲ ಎಂದು ಶಾಸಕರ ವಿರುದ್ಧ ಕಿಡಿಕಾರಿದರು.

2019-20ನೇ ಸಾಲಿನಲ್ಲಿ ಟಯೋಟಾ ಕಿರ್ಲೋಸ್ಕರ್ ಕಂಪನಿ ನೀರಿನ ಘಟಕ ನಿರ್ಮಿಸಿತ್ತು. ಶಾಸಕರು ಬೇರೆಯವರು ಮಾಡಿಸಿದ ಅಭಿವೃದ್ಧಿ ಕಾರ್ಯಗಳನ್ನು ತಮ್ಮದೆಂದು ಬಿಂಬಿಸಿಕೊಳ್ಳುವುದನ್ನು ಬಿಡಬೇಕು. ಇಲ್ಲದಿದ್ದರೆ ಚಳವಳಿಗಳ ಮೂಲಕ ಬಿಸಿ ಮುಟ್ಟಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.ಕುಡಿಯುವ ನೀರಿನ ಘಟಕದ ನಿರ್ವಹಣೆಗಾಗಿ ವ್ಯಕ್ತಿಯನ್ನು ನೇಮಿಸಲಾಗಿತ್ತು. ಈತ ಶಾಸಕರ ಬೆಂಬಲಿಗ. ಇವನೇ ಘಟಕ ಸರಿಯಾಗಿ ಕಾರ್ಯ ನಿರ್ವಹಿಸದಂತೆ ಮಾಡಿ ಕಂಪನಿ ಅಧಿಕಾರಿಗಳಿಗೆ ತಿಳಿಸದೆ ಶಾಸಕರು ರಿಪೇರಿ ಮಾಡಿಸಿದ್ದಾರೆ ಎಂದು ಭಾವಚಿತ್ರ ಅಳವಡಿಸಿದ್ದಾನೆ ಎಂದು ಆರೋಪಿಸಿದರು.

ಕೂಡಲೇ ಶಾಸಕರ ಭಾವಚಿತ್ರವನ್ನು ತೆರವುಗೊಳಿಸಬೇಕು. ಇಲ್ಲದಿದ್ದಲ್ಲಿ ಉಗ್ರವಾದ ಪ್ರತಿಭಟನೆ ಹಮ್ಮಿಕೊಳ್ಳಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.ಬಳಿಕ ಕೆ.ಎಂ.ದೊಡ್ಡಿ ಪೊಲೀಸ್ ಠಾಣೆ ಇನ್ಸ್‌ಪೆಕ್ಟರ್ ಆನಂದ್, ಸಮುದಾಯ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಿದರು.ಪ್ರತಿಭಟನೆಯಲ್ಲಿ ಮುಖಂಡರಾದ ಮಾರಸಿಂಗನಹಳ್ಳಿ ಮಲ್ಲರಾಜು, ದೇವರಹಳ್ಳಿ ವೆಂಕಟೇಶ್, ಗುರುದೇವರಹಳ್ಳಿ ಅರವಿಂದ್, ದೊಡ್ಡಅರಸಿನಕೆರೆ ಮಂಚೇಗೌಡ, ಕೆ.ಟಿ.ಸುರೇಶ್, ಅಣ್ಣೂರು ಚೆನ್ನಶೆಟ್ಟಿ, ವಿನು, ಹೋಂಡಾ ಸಿದ್ಧೇಗೌಡ, ಪುಟ್ಟಶೆಟ್ಟಿ, ದೇವರಹಳ್ಳಿ ತೈಲಪ್ಪ, ಕಾರ್ಕಹಳ್ಳಿ ಜಗದೀಶ್, ಮುಟ್ಟನಹಳ್ಳಿ ಕಾಳೇಗೌಡ, ಚಿಕ್ಕರಸಿನಕೆರೆ ಮೂರ್ತಿ, ಕರಡಕೆರೆ ಯೋಗೇಶ್, ಗುಡಿಗೆರೆ ಬಸವರಾಜು, ವೆಂಕಟೇಶ್(ಹೊಟ್ಟಪ್ಪ), ಆಸರೆ ರಘು ವೆಂಕಟೇಗೌಡ, ವೆಂಕಟೇಶ್, ವಿಶ್ವ, ಲೋಕೇಶ್, ಗೌರಿಶಂಕರ್ ಸೇರಿದಂತೆ ಹಲವರು ಭಾಗವಹಿಸಿದ್ದರು.

Share this article