ಕನ್ನಡಪ್ರಭ ವಾರ್ತೆ ಗೌರಿಬಿದನೂರು
ಸರ್ಕಾರಿ ನಿಬಂಧನೆಗಳನ್ನು ಉಲ್ಲಂಘಿಸಿ ಅನಧಿಕೃತವಾಗಿ ನಿರ್ಮಾಣವಾಗುತ್ತಿರುವ ಹಿನ್ನೆಲೆ ಗ್ರಾಮಸ್ಥರು ನಗರಸಭೆ ಆಯುಕ್ತಾರದ ರಮೇಶ್ ಮೊಬೈಲ್ ಟವರ್ ಅನ್ನು ಸ್ಥಗಿತ ಮಾಡಲು ಮನವಿ ಮಾಡಿದರು. ನಗರಸಭೆಯ ಅಧಿಕಾರಿಗಳು ಸಾರ್ವಜನಿಕರಿಗೆ ನಿಗದಿತ ಸಮಯದಲ್ಲಿ ಕೆಲಸ ಮಾಡಿಕೊಡಲು ವಿಳಂಬ ಮಾಡುತ್ತಿದ್ದಾರೆ. ಚರಂಡಿಗಳು ಸ್ವಚ್ಛತೆ ಮಾಡುತ್ತಿಲ್ಲ ಎಂದು ತಿಳಿಸಿದರು.ಮುಖಂಡರಾದ ಹರೀಶ್ ಕುಮಾರ್ ಮಾತನಾಡಿ, ಟವರ್ ಸ್ಥಗಿತಗೊಳಿಸಲು ಮೂರು ವರ್ಷಗಳಿಂದ ಅಲೆದಾಡುತ್ತಿದ್ದೇವೆ. ಟವರ್ ಸುತ್ತಮುತ್ತ ಮನೆಗಳು ಸಣ್ಣ ಪ್ಲಾಸ್ಟಿಕ್ ಫ್ಯಾಕ್ಟರಿ ಇದೆ. ನಗರಸಭೆ ಅಧಿಕಾರಿಗಳು ಸ್ಪಂದಿಸುತ್ತಿಲ್ಲ. ಪುನರ್ ಸ್ಥಾಪಿಸಲು ಅವಕಾಶ ಕೊಡುವುದಿಲ್ಲ. ಪರವಾನಗಿಯನ್ನು ರದುಪಡಿಸಬೇಕು. ಮನವಿಗೆ ಸ್ಪಂದಿಸದಿದ್ದರೆ ಮುಂದಿನ ದಿನಗಳಲ್ಲಿ ಲೋಕಾಯುಕ್ತಕ್ಕೆ ದೂರು ನೀಡಲಾಗುವುದು. ಮೇಲ್ಮಟ್ಟದ ಅಧಿಕಾರಿಗಳಿಗೆ ದೂರು ಕೊಡುತ್ತೇವೆ ಎಂದರು.ಗೌರಿಬಿದನೂರು ನಗರಸಭೆಯ ಆಯುಕ್ತರಾದ ರಮೇಶ್ ಕೆ.ಜಿ. ಮಾತನಾಡಿ, ಸರ್ಕಾರದ ನಿಯಮಾವಳಿಯಂತೆ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಿರುತ್ತಾರೆ. ಅದರಂತೆಯೇ ಪರಿಸರ ಇಲಾಖೆ ಕೆಐಡಿಪಿ ಇಲಾಖೆ ವತಿಯಿಂದ ಅನುಮೋದನೆ ಆಗಿರುತ್ತದೆ. ಸಣ್ಣ ಕೈಗಾರಿಕೆ ಇಲಾಖೆ ಅನುಮತಿ ನೀಡಿರುತ್ತದೆ. ನಗರಸಭೆಯಿಂದ ಯಾವುದೇ ರೀತಿಯ ಅನುಮತಿ ಪಡೆಯದೆ ಏಕಾಏಕಿಯಾಗಿ ಕೆಲಸ ಪ್ರಾರಂಭವಾಗುತ್ತಿದ್ದರೆ ತಕ್ಷಣ ನೋಟಿಸ್ ನೀಡಿ ಕೆಲಸ ನಿಲ್ಲಿಸುವಂತೆ ಮಾಡುತ್ತೇನೆ ಎಂದು ತಿಳಿಸಿದರು.ಪಿಎಸ್ಐ ಮಹಾಲಕ್ಷ್ಮೀ, ಹರೀಶ್ ಕುಮಾರ್, ಲೋಕೇಶ್, ಹಿರೇಬಿದನೂರು ಗ್ರಾಮದ ಗ್ರಾಮಸ್ಥರು, ನಗರಸಭೆ ಅಧಿಕಾರಿಗಳು, ಸಿಬ್ಬಂದಿ, ಮಾಜಿ ಸದಸ್ಯರು ಉಪಸ್ಥಿತರಿದ್ದರು.