ಭದ್ರಾ ಅಭಯಾರಣ್ಯ ವ್ಯಾಪ್ತಿಯಲ್ಲಿ ಅನೆ ಬಿಡಾರ ಆರಂಭಕ್ಕೆ ವಿರೋಧ

KannadaprabhaNewsNetwork | Published : Oct 10, 2024 2:21 AM

ಸಾರಾಂಶ

ಬಾಳೆಹೊನ್ನೂರುಪಟ್ಟಣದ ವಿದ್ಯಾಗಣಪತಿ ಸಮುದಾಯ ಭವನದಲ್ಲಿ ನಡೆದ ಶೃಂಗೇರಿ ಕ್ಷೇತ್ರದ ಮಲೆನಾಡು ನಾಗರಿಕ ರೈತ ಹಿತರಕ್ಷಣಾ ಸಮಿತಿ ಸಭೆಯಲ್ಲಿ ಹಲವು ಮಹತ್ವದ ನಿರ್ಣಯಗಳನ್ನು ಕೈಗೊಳ್ಳಲಾಯಿತು.

ಕನ್ನಡಪ್ರಭ ವಾರ್ತೆ, ಬಾಳೆಹೊನ್ನೂರು

ಪಟ್ಟಣದ ವಿದ್ಯಾಗಣಪತಿ ಸಮುದಾಯ ಭವನದಲ್ಲಿ ನಡೆದ ಶೃಂಗೇರಿ ಕ್ಷೇತ್ರದ ಮಲೆನಾಡು ನಾಗರಿಕ ರೈತ ಹಿತರಕ್ಷಣಾ ಸಮಿತಿ ಸಭೆಯಲ್ಲಿ ಹಲವು ಮಹತ್ವದ ನಿರ್ಣಯಗಳನ್ನು ಕೈಗೊಳ್ಳಲಾಯಿತು.ತಿಂಗಳೊಳಗೆ ಸಚಿವರ ಭೇಟಿ ಮಾಡಲು ನಿಯೋಗ ಕರೆದುದೊಯ್ಯುವುದಾಗಿ ಭರವಸೆ ನೀಡಿದ್ದ ಶಾಸಕರು, ಸಂಸದರು ಈವರೆಗೂ ಕರೆದು ಕೊಂಡು ಹೋಗಿಲ್ಲ. ಅ.17ರ ಒಳಗೆ ಭರವಸೆ ಈಡೇರದಿದ್ದಲ್ಲಿ ತೀವ್ರ ಪ್ರತಿಭಟನೆ ಮಾಡುವುದು. ಸೆಕ್ಷನ್ 4ನ್ನು 17 ಮಾಡುವ ಪ್ರಕ್ರಿಯೆ ಕುರಿತು ತುರ್ತಾಗಿ ಜಿಲ್ಲಾಧಿಕಾರಿ ಭೇಟಿಯಾಗಿ ಮಾಹಿತಿ ಪಡೆಯುವುದು. 64ಎ ಕೇಸ್ ಆಗಿರುವ ಜಾಗಗಳಲ್ಲಿ ಸಾಗುವಳಿ ಮಾಡಿರುವ ರೈತರಿಗೆ ಅರಣ್ಯಾಧಿಕಾರಿ, ಕಾಫಿ ಕೊಯ್ಲು ಆದ ನಂತರ ಬಿಟ್ಟು ಕೊಡುತ್ತೇವೆ ಎಂದು ಬರೆದುಕೊಡಿ ಎಂದು ಕೇಳುತ್ತಿದ್ದು, ಇದನ್ನು ಶಾಸಕರು ಹಾಗೂ ಸಂಸದರ ಗಮನಕ್ಕೆ ಬಂದು ತಡೆಹಿಡಿಯಲು ಒತ್ತಾಯಿಸುವುದು. ರೈತರು ಬರೆದು ಕೊಡದಂತೆ ಎಚ್ಚರಿಸುವುದು. ತಪ್ಪಿದಲ್ಲಿ ಅರಣ್ಯ ಇಲಾಖೆ ಕಚೇರಿಗೆ ಮುತ್ತಿಗೆ ಹಾಕಲು ನಿರ್ಧರಿಸಲಾಯಿತು.ಭದ್ರಾ ಅಭಯಾರಣ್ಯ ವ್ಯಾಪ್ತಿಯಲ್ಲಿ ಆನೆ ಬಿಡಾರ ಮಾಡಲು ತೀವ್ರ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಹೋರಾಟ ನಡೆಸಲು ರೂಪುರೇಷೆಗೆ ನಿರ್ಧಾರ ಮಾಡಲಾಯಿತು. ಈಗಿರುವ ಒತ್ತುವರಿ ಸಮಸ್ಯೆ ಪರಿಹಾರ ಆಗುವವರೆಗೆ ಎಸಿಎಫ್ ಕೋರ್ಟಿನಲ್ಲಿ ಹೊಸ ಪ್ರಕರಣ ದಾಖಲಿಸು ತ್ತಿರುವುದನ್ನು ತಡೆ ಹಿಡಿಯಬೇಕು. ಮುಂದಿನ ದಿನಗಳಲ್ಲಿ ಖಾಂಡ್ಯ ನಾಗರಿಕ ಹಿತರಕ್ಷಣಾ ಸಮಿತಿ ಸಲಹೆಯಂತೆ ಪ್ರಧಾನಿಗೆ ಶಾಲಾ ಮಕ್ಕಳಿಂದ ಪತ್ರ ಅಭಿಯಾನ ಕೈಗೊಳ್ಳಬೇಕು. ಶಾಸಕರು, ಸಂಸದರು ಹಾಗೂ ವಿಧಾನ ಪರಿಷತ್ ಶಾಸಕರನ್ನು ಒಂದೇ ಕಡೆ ಸೇರಿಸಿ ಚರ್ಚೆ ಮಾಡುವುದು ಎಂಬ ನಿರ್ಣಯ ಕೈಗೊಳ್ಳಲಾಯಿತು.

ಶೃಂಗೇರಿ ಕ್ಷೇತ್ರದ ಮಲೆನಾಡು ನಾಗರಿಕ ರೈತ ಹಿತರಕ್ಷಣಾ ಸಮಿತಿ ಅಧ್ಯಕ್ಷ ಎಂ.ಎನ್.ನಾಗೇಶ್, ರಂಜಿತ್ ಶೃಂಗೇರಿ, ಕಾರ್ತಿಕ್ ಕಾರ್‌ಗದ್ದೆ, ನವೀನ್ ಕರಗಣೆ, ಪುರುಷೋತ್ತಮ್, ಹಿರಿಯಣ್ಣ, ಆದರ್ಶ ವಕೀಲ ರವೀಂದ್ರ ಕೆಸುವಿನಮನೆ, ರತ್ನಾಕರ್ ಗಡಿಗೇಶ್ವರ, ಖಾಂಡ್ಯದ ಚಂದ್ರಶೇಖರ್ ರೈ ಸೇರಿದಂತೆ ನರಸಿಂಹರಾಜಪುರ, ಶೃಂಗೇರಿ, ಕೊಪ್ಪ ತಾಲೂಕು. ಖಾಂಡ್ಯ ಹೋಬಳಿ ರೈತರು ಹಾಗೂ ಸಮಿತಿ ಸದಸ್ಯರು ಭಾಗವಹಿಸಿದ್ದರು.೦೯ಬಿಹೆಚ್‌ಆರ್ ೩:

ಬಾಳೆಹೊನ್ನೂರಿನ ವಿದ್ಯಾಗಣಪತಿ ಸಮುದಾಯ ಭವನದಲ್ಲಿ ಶೃಂಗೇರಿ ಕ್ಷೇತ್ರದ ಮಲೆನಾಡು ನಾಗರಿಕ ರೈತ ಹಿತರಕ್ಷಣಾ ಸಮಿತಿ ಸಭೆ ನಡೆಯಿತು. ಸಂಘಟನೆ ಅಧ್ಯಕ್ಷ ಎಂ.ಎನ್.ನಾಗೇಶ್, ರಂಜಿತ್ ಶೃಂಗೇರಿ, ಕಾರ್ತಿಕ್ ಕಾರ್‌ಗದ್ದೆ, ನವೀನ್ ಕರಗಣೆ ಹಾಜರಿದ್ದರು.

Share this article