ಕಾರ್ಮಿಕರ ಮೇಲೆ ದಬ್ಬಾಳಿಕೆ, ದೌರ್ಜನ್ಯಗಳು ಹೆಚ್ಚುತ್ತಿದೆ: ಪುಟ್ಟಮಾದು

KannadaprabhaNewsNetwork |  
Published : May 06, 2024, 12:33 AM IST
5ಕೆಎಂಎನ್ ಡಿ12 | Kannada Prabha

ಸಾರಾಂಶ

ಕಾರ್ಪೋರೆಟ್ ಕಂಪನಿಗಳು ಬಿಜೆಪಿ ಸರ್ಕಾರಕ್ಕೆ ಬೆಂಗಾವಲಾಗಿ ನಿಂತಿದೆ. 12 ರಿಂದ 14 ಗಂಟೆ ದುಡಿಮೆ ಮಾಡಬೇಕೆಂಬ ನಿಯಮಗಳನ್ನು ಜಾರಿ ಮಾಡಲು ಹೊರಟ್ಟಿದ್ದು ಹಲವು ಕಾರ್ಮಿಕ ಕಾಯ್ದೆಗಳಿಗೆ ತಿದ್ದುಪಡಿ ಮಾಡುವ ಮೂಲಕ ಪ್ರತಿಭಟನೆ ಮತ್ತು ಪ್ರಶ್ನಿಸುವ ಹಕ್ಕುಗಳನ್ನು ಕಿತ್ತುಕೊಳ್ಳುತ್ತಿದೆ. ಮನುಷ್ಯನ ಸರ್ವಾಂಗೀಣ ಅಭಿವೃದ್ಧಿಗಾಗಿ 8 ಗಂಟೆ ದುಡಿಮೆ ಮಾಡಬೇಕು.

ಕನ್ನಡಪ್ರಭ ವಾರ್ತೆ ಭಾರತೀನಗರ

ಇತ್ತೀಚಿನ ದಿನಗಳಲ್ಲಿ ಕಾರ್ಮಿಕರ ಮೇಲೆ ದಬ್ಬಾಳಿಕೆ ಮತ್ತು ದೌರ್ಜನ್ಯಗಳು ಹೆಚ್ಚುತ್ತಿದ್ದು, ಕಾರ್ಪೋರೆಟ್ ಕಂಪನಿಗಳ ಬೆಳವಣಿಗೆಯಿಂದಾಗಿ ಕಾರ್ಮಿಕರ ಹಕ್ಕುಗಳನ್ನು ಕಸಿದುಕೊಳ್ಳಲಾಗುತ್ತಿದೆ ಎಂದು ಕೃಷಿ ಕೂಲಿಕಾರರ ಸಂಘದ ರಾಜ್ಯಾಧ್ಯಕ್ಷ ಎಂ.ಪುಟ್ಟಮಾದು ವಿಷಾದಿಸಿದರು.

ಕೃಷಿ ಕೂಲಿಕಾರರ ಸಂಘದ ಕಚೇರಿಯಲ್ಲಿ ನಡೆದ 139ನೇ ಕಾರ್ಮಿಕರ ದಿನಾಚರಣೆ ಉದ್ಘಾಟಿಸಿ ಮಾತನಾಡಿ, ಕಾರ್ಪೋರೆಟ್ ಕಂಪನಿಗಳು ಬಿಜೆಪಿ ಸರ್ಕಾರಕ್ಕೆ ಬೆಂಗಾವಲಾಗಿ ನಿಂತಿದೆ. 12 ರಿಂದ 14 ಗಂಟೆ ದುಡಿಮೆ ಮಾಡಬೇಕೆಂಬ ನಿಯಮಗಳನ್ನು ಜಾರಿ ಮಾಡಲು ಹೊರಟ್ಟಿದ್ದು ಹಲವು ಕಾರ್ಮಿಕ ಕಾಯ್ದೆಗಳಿಗೆ ತಿದ್ದುಪಡಿ ಮಾಡುವ ಮೂಲಕ ಪ್ರತಿಭಟನೆ ಮತ್ತು ಪ್ರಶ್ನಿಸುವ ಹಕ್ಕುಗಳನ್ನು ಕಿತ್ತುಕೊಳ್ಳುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಮನುಷ್ಯನ ಸರ್ವಾಂಗೀಣ ಅಭಿವೃದ್ಧಿಗಾಗಿ 8 ಗಂಟೆ ದುಡಿಮೆ ಮಾಡಬೇಕು. 8ಗಂಟೆ ವಿಶ್ರಾಂತಿ ಪಡೆಯಬೇಕು. 8 ಗಂಟೆ ಅವರ ಖಾಸಗಿ ಕೆಲಸ ಮಾಡಿಕೊಳ್ಳಬೇಕೆಂದು 1890 ಮೇ 1ರಂದು ಅಂತಾರಾಷ್ಟ್ರೀಯ ಮಟ್ಟದ ಕಾರ್ಮಿಕರ ಸಭೆಯನ್ನು ಅಮೆರಿಕಾದ ಚಿಕಾಗೋದಲ್ಲಿ ಏರ್ಪಡಿಸಿ ಅಲ್ಲಿಂದ ನಿರ್ಣಯಿಸಿದ ಪ್ರಕಾರ ಸರ್ಕಾರ ತೀರ್ಮಾನ ಒಪ್ಪಿಕೊಂಡಿತು ಎಂದರು.

ಅಂತಾರಾಷ್ಟ್ರೀಯ ಕಾರ್ಮಿಕ ನ್ಯಾಯಾಲಯವು ನಿರ್ಣಯಕ್ಕೆ ಸಮ್ಮತಿಸಿತು. ಅಲ್ಲಿಂದ ಇಲ್ಲಿಯವರೆವಿಗೂ ಏಳುಬೀಳುಗಳ ಹೋರಾಟವನ್ನು ಕಂಡಂತಹ ಕಾರ್ಮಿಕ ಶಕ್ತಿ ಸಾವಿರಾರು ಹೋರಾಟದಲ್ಲಿ ಯಶಸ್ಸು ಕಂಡಿದೆ ಎಂದರು.

ಈ ವೇಳೆ ಕೃಷಿಕೂಲಿಕಾರರ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬಿ.ಹನುಮೇಶ್, ಜಿಲ್ಲಾ ಮುಖಂಡರಾದ ಸುರೇಂದ್ರ, ಅರುಣ್‌ಕುಮಾರ್, ಮಧುಕುಮಾರ್, ನಾಗಮ್ಮ, ಜಯಮ್ಮ, ಈರೇಗೌಡ, ಬಿ.ಎಂ.ಮಲ್ಲಯ್ಯ ಸೇರಿದಂತೆ ಇತರರಿದ್ದರು.

ಮೇ 9 ರಿಂದ 13 ರವರೆಗೆ ಬೃಹತ್ ಆಹಾರ ಮೇಳ ಮತ್ತು ವಸ್ತು ಪ್ರದರ್ಶನ

ಮಂಡ್ಯ: ಸಮಾಜ ಕಲ್ಯಾಣ ಇಲಾಖೆ ಅಡಿಯಲ್ಲಿ ಬರುವ ಡಾ.ಬಾಬು ಜಗಜೀವನ ರಾಂ ಚರ್ಮ ಕೈಗಾರಿಕಾ ಅಭಿವೃದ್ಧಿ ನಿಗಮದ ವತಿಯಿಂದ ಒಂದು ಅಪ್ಪಟ ಚರ್ಮ ವಸ್ತುಗಳ ಮಾರಾಟ ಮಳಿಗೆ, ಬೃಹತ್ ಆಹಾರ ಮೇಳ ಮತ್ತು ವಸ್ತು ಪ್ರದರ್ಶನವನ್ನು ಮೇ 9 ರಿಂದ 13 ರವರೆಗೆ ನಗರದ ಸರ್ಕಾರಿ ಬಾಲಕಿಯರ ಕಾಲೇಜು ಆವರಣದಲ್ಲಿ ಹಮ್ಮಿಕೊಳ್ಳಲಾಗಿದೆ. ವಸ್ತು ಪ್ರದರ್ಶನದಲ್ಲಿ ನಿಗಮದ ವತಿಯಿಂದ ಅಪ್ಪಟ ಚರ್ಮ ವಸ್ತುಗಳಿಂದ ಮಾಡಿರುವ ಪಾದರಕ್ಷೆಗಳು , ಲಿಡ್ಕರ್ ಮಾರಾಟ ಮಳಿಗೆಯಲ್ಲಿ ಅತ್ಯುತ್ತಮ ಗುಣಮಟ್ಟದ ಚರ್ಮ ಕುಶಲಕರ್ಮಿಗಳಿಂದ ಮಾಡಲ್ಪಟ್ಟ ಚರ್ಮದ ಪಾದರಕ್ಷೆ, ಶೂ, ವ್ಯಾನಿಟಿ ಬ್ಯಾಗ್, ಬೆಲ್ಟ್, ವ್ಯಾಲೆಟ್ ಮುಂತಾದ ಚರ್ಮ ವಸ್ತುಗಳು ಪ್ರದರ್ಶನವಿದೆ. ಹೆಚ್ಚಿನ ಮಾಹಿತಿಗಾಗಿ ದೂ-0821-2444019, ಮೊ-9731833307 ಅನ್ನು ಸಂಪರ್ಕಿಸಬಹುದು ಎಂದು ಡಾ.ಬಾಬು ಜಗಜೀವನ ರಾಂ ಚರ್ಮ ಕೈಗಾರಿಕಾ ಅಭಿವೃದ್ಧಿ ನಿಗಮ ನಿಯಮಿತ ಪರವಾಗಿ ಜಿ.ಚೇತನ್ ತಿಳಿಸಿದ್ದಾರೆ.

PREV

Recommended Stories

ದೇಶದ ನಾಯಕರಾಗಲು ಶಾಲೆಯಲ್ಲಿ ನಾಯಕತ್ವ ವಹಿಸಿಕೊಳ್ಳಿ
ಪರಿಷ್ಕೃತ ಜಿಎಸ್‌ಟಿ ಬಡ ಜನತೆಗೆ ಅನುಕೂಲ