ಬಾಯಿಯ ಆರೋಗ್ಯ ದೇಹದ ಆರೋಗ್ಯಕ್ಕೆ ಕನ್ನಡಿ ಇದ್ದಂತೆ: ಡಾ.ಎಸ್.ಎನ್. ಪ್ರಕೃತಿ

KannadaprabhaNewsNetwork |  
Published : Jul 06, 2026, 02:15 AM IST
ಗುಬ್ಬಿ ಪಾಪಟ್ಟಣದ ರೈಲ್ವೆ ಸ್ಟೇಷನ್ ರಸ್ತೆಯಲ್ಲಿ ನೂತನ ನಿಶ್ಚಿಕ ಮಲ್ಟಿ ಸ್ಪೆಷಾಲಿಟಿ ಡೆಂಟಲ್ ಕ್ಲಿನಿಕ್ ಉದ್ಘಾಟಿಸಿದ ತಹಶೀಲ್ದಾರ್ .ಬಿ.ಆರತಿ. | Kannada Prabha

ಸಾರಾಂಶ

ಗ್ರಾಮೀಣ ಜನರಿಗೆ ದಂತ ಆರೋಗ್ಯ ಬಗ್ಗೆ ಅರಿವಿಲ್ಲ. ಮುಖ ಸೌಂದರ್ಯಕ್ಕೆ ದಂತ ಆರೋಗ್ಯ ಮುಖ್ಯ ಎಂಬ ಅರಿವು ಮೂಡಿಸಲು ತಾಲೂಕಿನ ಎಲ್ಲಾ ಗ್ರಾಮದಲ್ಲಿ ಉಚಿತ ದಂತ ತಪಾಸಣೆ ಶಿಬಿರ ನಡೆಸಿ ಜೊತೆಗೆ ಹಲ್ಲುಗಳ ಆರೋಗ್ಯ ಕಾಪಾಡಿಕೊಳ್ಳುವ ಅರಿವು ಮೂಡಿಸುವ ಕೆಲಸ ಶ್ಲಾಘನೀಯ.

ಗುಬ್ಬಿ: ಬಾಯಿಯ ಆರೋಗ್ಯ ಇಡೀ ದೇಹದ ಆರೋಗ್ಯದ ಒಂದು ಕನ್ನಡಿ ಇದ್ದಹಾಗೆ ಎಂದು ದಂತ ವೈದ್ಯರಾದ ಡಾ.ಎಸ್.ಎನ್. ಪ್ರಕೃತಿ ತಿಳಿಸಿದರು.

ಪಟ್ಟಣದ ರೈಲ್ವೆ ಸ್ಟೇಷನ್ ರಸ್ತೆಯಲ್ಲಿ ಸರ್ಕಾರಿ ಶಾಲೆಯ ಎದುರು ನೂತನ ನಿಶ್ಚಿಕ ಮಲ್ಟಿ ಸ್ಪೆಷಾಲಿಟಿ ಡೆಂಟಲ್ ಕ್ಲಿನಿಕ್ ಉದ್ಘಾಟಿಸಿ ಮಾತನಾಡಿದ ಅವರು, ದೇಹದ ಒಳಗೆ ಆಗುವ ಸಮಸ್ಯೆಗಳಿಗೆ ಚಿಹ್ನೆಗಳು ಮೊದಲು ಬಾಯಲ್ಲಿ ಕಾಣಿಸಿಕೊಳ್ಳುತ್ತವೆ. ಆದ್ದರಿಂದ ಪ್ರತಿಯೊಬ್ಬರೂ ಬಾಯಿ, ಹಲ್ಲುಗಳನ್ನು ಸ್ವಚ್ಛವಾಗಿ ಇಟ್ಟುಕೊಳ್ಳುವ ಮೂಲಕ ಆರೋಗ್ಯ ಕಾಪಾಡಿಕೊಳ್ಳಬಹುದು ಎಂದರು.

ತಹಸೀಲ್ದಾರ್ ಬಿ. ಆರತಿ ಮಾತನಾಡಿ, ಗ್ರಾಮೀಣ ಜನರಿಗೆ ದಂತ ಆರೋಗ್ಯ ಬಗ್ಗೆ ಅರಿವಿಲ್ಲ. ಮುಖ ಸೌಂದರ್ಯಕ್ಕೆ ದಂತ ಆರೋಗ್ಯ ಮುಖ್ಯ ಎಂಬ ಅರಿವು ಮೂಡಿಸಲು ತಾಲೂಕಿನ ಎಲ್ಲಾ ಗ್ರಾಮದಲ್ಲಿ ಉಚಿತ ದಂತ ತಪಾಸಣೆ ಶಿಬಿರ ನಡೆಸಿ ಜೊತೆಗೆ ಹಲ್ಲುಗಳ ಆರೋಗ್ಯ ಕಾಪಾಡಿಕೊಳ್ಳುವ ಅರಿವು ಮೂಡಿಸುವ ಕೆಲಸ ಶ್ಲಾಘನೀಯ ಎಂದರು.

ಜಿಪಂ ಮಾಜಿ ಸದಸ್ಯೆ ಡಾ.ನವ್ಯಬಾಬು ಮಾತನಾಡಿ, ಇಂದಿನ ದಿನಗಳಲ್ಲಿ ದಂತ ಆರೋಗ್ಯವು ಒಟ್ಟಾರೆ ಆರೋಗ್ಯದ ಪ್ರಮುಖ ಭಾಗವಾಗಿದೆ. ಗ್ರಾಮೀಣ ಮತ್ತು ನಗರ ಪ್ರದೇಶದ ಜನರಿಗೆ ಒಂದೇ ಸೂರಿನಡಿ ಸುಧಾರಿತ ಡಿಜಿಟಲ್ ಎಕ್ಸ್-ರೇ, ಲೇಸರ್ ಚಿಕಿತ್ಸೆಯಂತಹ ಅತ್ಯಾಧುನಿಕ ಸೌಲಭ್ಯಗಳು ಸಿಗುತ್ತಿರುವುದು ಶ್ಲಾಘನೀಯ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಪಟ್ಟಣ ಪಂಚಾಯಿತಿ ಮುಖ್ಯ ಅಧಿಕಾರಿ ಮಂಜುಳಾದೇವಿ, ಬಿಜೆಪಿ ಮುಖಂಡ ಅ.ನಾ.ಲಿಂಗಪ್ಪ, ನಿವೃತ್ತ ಉಪನ್ಯಾಸಕ ಎಚ್.ಬಿ. ನಿಜಲಿಂಗಪ್ಪ, ಮಹೇಂದ್ರ, ಡಾ. ಸ್ಮಿತಶೆಣೈ, ಶಿವರಾಜ್ ಶೆಣೈ, ಸಬ್ ರಿಜಿಸ್ಟರ್ ಎಂ.ವಿ. ಸತೀಶ್, ಸಿದ್ದಲಿಂಗಮೂರ್ತಿ(ಅಣ್ಣಿ), ಕೃಷ್ಣಯ್ಯಜಟ್ಟಿ, ತಾಪಂ ಮಾಜಿ ಸದಸ್ಯ ದಯಾನಂದ್, ಪಾಪಣ್ಣ, ಈಶ್ವರಯ್ಯ, ನಂಜೇಗೌಡ ಹಾಗೂ ರೈತ ಸಂಘದ ಮುಖಂಡ, ಇತರರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬೊಮ್ಮಾಯಿ ಆರೋಪ ಹಸಿ ಸುಳ್ಳು, ಬಹಿರಂಗ ಕ್ಷಮೆ ಕೇಳಲಿ: ಎಚ್‌.ಕೆ. ಪಾಟೀಲ
ಹೈಟೆಕ್ ಶೌಚಾಲಯ ಅಪೂರ್ಣ