ಎಲ್ಲ ದಾನಗಳಿಂತ ಅಂಗದಾನ ಶ್ರೇಷ್ಠ: ಅಜಿತ ಬಾಗಮಾರ

KannadaprabhaNewsNetwork |  
Published : Oct 12, 2025, 01:01 AM IST
 ಗಜೇಂದ್ರಗಡ ಕೆ.ಕೆ.ವೃತ್ತದಲ್ಲಿ ಭಗವಾನ ಮಹಾವೀರ ಜೈನ್ ಆಯುರ್ವೇದಿಕ್ ಮೆಡಿಕಲ್ ಕಾಲೇಜಿನ ವಿದ್ಯಾರ್ಥಿಗಳಿಂದ ಅಂಗದಾನ ಮತ್ತು ನಶ ಮುಕ್ತ ಭಾರತ ಅಭಿಯಾನ ಕುರಿತು ಜಾಗೃತಿ ಮೂಡಿಸಲಾಯಿತು. | Kannada Prabha

ಸಾರಾಂಶ

ಪ್ರಾಚಾರ್ಯ ಡಾ. ಎನ್.ಎಚ್. ಕುಲಕರ್ಣಿ ಮಾತನಾಡಿ, ಅಂಗದಾನದ ಬಗ್ಗೆ ಜನರಲ್ಲಿ ತಿಳಿವಳಿಕೆ ಕೊರತೆಯಿದ್ದು, ಅಭಿಯಾನಗಳ ಮೂಲಕ ಜನರಲ್ಲಿ ಹೆಚ್ಚು ಜಾಗೃತಿ ಮೂಡಿಸಲಾಗುತ್ತಿದೆ ಎಂದರು.

ಗಜೇಂದ್ರಗಡ: ಪಟ್ಟಣದ ಭಗವಾನ ಮಹಾವೀರ ಜೈನ್ ಆಯುರ್ವೇದಿಕ್ ಮೆಡಿಕಲ್ ಕಾಲೇಜಿನ ವಿದ್ಯಾರ್ಥಿಗಳು ಹಾಗೂ ಸಿಬ್ಬಂದಿಯಿಂದ ಅಂಗದಾನ ಮತ್ತು ನಶಾಮುಕ್ತ ಭಾರತ ಅಭಿಯಾನ ಕುರಿತು ಜಾಗೃತಿ ಇಲ್ಲಿನ ಕಾಲಕಾಲೇಶ್ವರ ವೃತ್ತದಲ್ಲಿ ನಡೆಯಿತು.

ಈ ವೇಳೆ ಸಂಸ್ಥೆಯ ಕಾರ್ಯದರ್ಶಿ ಅಜಿತ ಬಾಗಮಾರ ಅಭಿಯಾನದ ರ‍್ಯಾಲಿಗೆ ಚಾಲನೆ ನೀಡಿ ಮಾತನಾಡಿ, ಅಂಗದಾನ ಎಲ್ಲ ದಾನಗಳಿಂತಲೂ ಶ್ರೇಷ್ಠವಾಗಿದ್ದು, ಒಬ್ಬ ವ್ಯಕ್ತಿ ಅಂಗದಾನ ಮಾಡಿದರೆ ಹಲವಾರು ಜನರ ಪ್ರಾಣ ಕಾಪಾಡಲು ಸಹಾಯಕವಾಗುತ್ತದೆ ಎಂದರು.ಪ್ರಾಚಾರ್ಯ ಡಾ. ಎನ್.ಎಚ್. ಕುಲಕರ್ಣಿ ಮಾತನಾಡಿ, ಅಂಗದಾನದ ಬಗ್ಗೆ ಜನರಲ್ಲಿ ತಿಳಿವಳಿಕೆ ಕೊರತೆಯಿದ್ದು, ಅಭಿಯಾನಗಳ ಮೂಲಕ ಜನರಲ್ಲಿ ಹೆಚ್ಚು ಜಾಗೃತಿ ಮೂಡಿಸಲಾಗುತ್ತಿದೆ. ಮನುಷ್ಯ ತನ್ನ ಆಸೆ ಬಿಟ್ಟು ಅಂಗದಾನ ಮಾಡಿದರೆ ಮಾನವಕುಲಕ್ಕೆ ಒಳ್ಳೆಯದಾಗುತ್ತಿದೆ. ಹೀಗಾಗಿ ಎಲ್ಲರೂ ಅಂಗದಾನ ಮಾಡಲು ಪಣ ತೊಡಲು ಮುಂದಾಗಿ ಎಂದರು.ಸ್ಥಳೀಯ ಕೆ.ಕೆ. ವೃತ್ತದಿಂದ ಆರಂಭವಾದ ರ‍್ಯಾಲಿಯು ಪ್ರಮುಖ ವೃತ್ತಗಳಲ್ಲಿ ಸಂಚರಿಸಿ ದುರ್ಗಾ ವೃತ್ತದ ಮೂಲಕ ಮರಳಿ ಕೆ.ಕೆ. ವೃತ್ತಕ್ಕೆ ಬಂದು ತಲುಪಿತು. ರ‍್ಯಾಲಿಯುದ್ದಕ್ಕೂ ಅಂಗದಾನ, ಮಾದಕ ವಸ್ತು ಹಾಗೂ ತಂಬಾಕು ಸೇವನೆಯಿಂದ ಆಗುವ ಹಾನಿ ಕುರಿತು ವಿದ್ಯಾರ್ಥಿಗಳು ಜನರಲ್ಲಿ ಜಾಗೃತಿ ಮೂಡಿಸಿದರು.ಡಾ. ಕೆ.ಎಸ್. ಬೆಲ್ಲದ, ಡಾ. ವಿ.ಎಸ್. ಕಂಠಿ, ಡಾ. ಪೂರ್ಣಿಮಾ ಬೆಲ್ಲದ, ಡಾ. ಕಣ್ವಿಮಠ, ಡಾ. ಬಡಿಗೇರ, ಡಾ. ಪೂರ್ಣಿಮಾ ಪಾಟೀಲ, ಯುಗ್ ಬಾಗಮಾರ ಎ.ಡಿ. ಕೋಲಕಾರ, ಎ.ಎ. ಪಾಟೀಲ, ಐ.ಎಸ್. ಸಂಕನೂರ, ಎಸ್.ಎಸ್. ಅಯ್ಯನಗೌಡರ, ಮಂಜುಳಾ ದಾಮೋದರ ಸೇರಿ ಇತರರು ಅಭಿಯಾನದಲ್ಲಿ ಭಾಗವಹಿಸಿದ್ದರು.ಇಂದು ಗಂಗಾಬಿಕೆ ಕುರಿತು ಉಪನ್ಯಾಸ

ಗದಗ: ಶಿವಾನಂದ ನಗರದ ಬಸವ ಸಮುದಾಯ ಭವನದಲ್ಲಿ ಬಸವದಳದ 1667ನೇ ಶರಣ ಸಂಗಮದಲ್ಲಿ ಬಸವಣ್ಣನವರ ಪತ್ನಿ ಗಂಗಾಬಿಕೆಯವರ ಕುರಿತು ಉಪನ್ಯಾಸ ಹಾಗೂ ಬಸವ ಸಂಸ್ಕೃತಿ ಅಭಿಯಾನ ಯಶಸ್ವಿಗೊಳಿಸಿದವರಿಗೆ ಅಭಿನಂದನಾ ನುಡಿ ಕಾರ್ಯಕ್ರಮ ಅ. 12ರಂದು ಬೆಳಗ್ಗೆ 10ಕ್ಕೆ ನಡೆಯಲಿದೆ.ಅಧ್ಯಕ್ಷತೆಯನ್ನು ಬಸವದಳದ ಅಧ್ಯಕ್ಷ ವಿ.ಕೆ. ಕರೇಗೌಡ್ರ ವಹಿಸುವರು. ಶರಣ ಸಾಹಿತಿ ಗಿರಿಜಕ್ಕ ಧರ್ಮರಡ್ಡಿ ಅವರು ಉಪನ್ಯಾಸ ನೀಡುವರು ಎಂದು ಸಂಘಟಕರ ಪರವಾಗಿ ಪ್ರಕಾಶ ಅಸುಂಡಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

PREV

Recommended Stories

ಪ್ರೇಮಿ ಜೊತೆ ಓಡಿ ಹೋದ ಮಗಳ ತಿಥಿ ಮಾಡಿದ ಅಪ್ಪ
ಇಂದು ಮೂರು ಜಿಲ್ಲೆಗಳಲ್ಲಿ ಭಾರೀ ಮಳೆ - ಮುಂದಿನ 3-4 ದಿನ ಹಲವೆಡೆ ಉತ್ತಮ ಮಳೆ