ಸಾವಯುವ ಕೃಷಿ ಪದ್ಧತಿಯಿಂದ ಭೂಮಿ ಫಲವತ್ತತೆ ವೃದ್ಧಿ: ಜಯದೇವಪ್ಪ

KannadaprabhaNewsNetwork |  
Published : Apr 06, 2025, 01:48 AM IST
5ಕಕೆೆಡಿಯು1. | Kannada Prabha

ಸಾರಾಂಶ

ಕಡೂರು, ಸಮಗ್ರ ಕೃಷಿಯಲ್ಲಿ ಸಾವಯುವ ಪದ್ಧತಿ ಅಳವಡಿಸಿಕೊಂಡರೆ ಭೂಮಿ ಫಲವತ್ತತೆ ಕಾಪಾಡಿ ಕೊಳ್ಳಬಹುದು ಎಂದು ತೋಟಗಾರಿಕೆ ಸಹಾಯಕ ನಿರ್ದೇಶಕ ಎಚ್.ಕೆ. ಜಯದೇವಪ್ಪ ಹೇಳಿದರು.

ಕೃಷಿಕ ಯತಿರಾಜ್ ತೋಟದಲ್ಲಿ ಸಾವಯವ ಕೃಷಿ ಪದ್ಧತಿ ಕುರಿತ ಕಾರ್ಯಾಗಾರ

ಕನ್ನಡಪ್ರಭ ವಾರ್ತೆ, ಕಡೂರು

ಸಮಗ್ರ ಕೃಷಿಯಲ್ಲಿ ಸಾವಯುವ ಪದ್ಧತಿ ಅಳವಡಿಸಿಕೊಂಡರೆ ಭೂಮಿ ಫಲವತ್ತತೆ ಕಾಪಾಡಿ ಕೊಳ್ಳಬಹುದು ಎಂದು ತೋಟಗಾರಿಕೆ ಸಹಾಯಕ ನಿರ್ದೇಶಕ ಎಚ್.ಕೆ. ಜಯದೇವಪ್ಪ ಹೇಳಿದರು. ಶನಿವಾರ ತಾಲೂಕಿನ ಅಂದೇನಹಳ್ಳಿಯಲ್ಲಿ ಚಿಕ್ಕಮಗಳೂರು ಸಾವಯವ ರೈತರ ಬಳಗದಿಂದ ಕೃಷಿಕ ಯತಿರಾಜ್ ಅವರ ತೋಟದಲ್ಲಿ ಸಾವಯವ ಕೃಷಿ ಪದ್ಧತಿ ಅಳವಡಿಕೆ ಕುರಿತು ರೈತರಿಗೆ ಆಯೋಜಿಸಿದ್ದ ಕಾರ್ಯಾಗಾರದಲ್ಲಿ ಮಾತನಾಡಿದರು.ಇಂದಿನ ದಿನಗಳಲ್ಲಿ ಅಡಕೆ, ತೆಂಗಿಗೆ ಹೆಚ್ಚು ಒತ್ತು ಕೊಡುವಂತೆ ಮಿಶ್ರ ಬೆಳೆಗಳಿಗೂ ಆದ್ಯತೆ ನೀಡಿದರೆ ಉತ್ತಮ ಆದಾಯ ಪಡೆಯ ಬಹುದಾಗಿದೆ. ಹೆಚ್ಚಾಗಿ ಅಡಕೆ ಬೆಳೆ ಮೇಲೆ ಅವಲಂಬಿತರಾದರೆ ಭೂಮಿ ಸತ್ವ ಕಳೆದುಕೊಳ್ಳಬೇಕಾದ ಪರಿಸ್ಥಿತಿ ನಿರ್ಮಾಣವಾಗುತ್ತದೆ. ರಾಸಾಯನಿಕ ಸಿಂಪಡಣೆಯಿಂದ ಫಲವತ್ತತೆಗೆ ಸಾಕಷ್ಟು ಹಾನಿ ಉಂಟಾಗಲಿದೆ. ಈ ನಿಟ್ಟಿನಲ್ಲಿ ರೈತರು ಆಯಾ ಕಾಲಕ್ಕೆ ಅನುಗುಣವಾಗಿ ತೋಟಗಳಿಗೆ ಬಾಳೆ, ಮಸಾಲೆ ಪದಾರ್ಥಗಳ ಮಿಶ್ರಬೆಳೆ ಬೆಳೆಯಲು ಪ್ರಾಮುಖ್ಯತೆ ನೀಡಿದರೆ ಇಲಾಖೆಯಿಂದ ಅಗತ್ಯ ಮಾಹಿತಿ ನೀಡಲಾಗುವುದು ಎಂದರು.ಸಾವಯುವ ಕೃಷಿಕ ಯತಿರಾಜ್ ಮಾತನಾಡಿ, ಕಳೆದ ಮೂರು ವರ್ಷಗಳಿಂದ 110 ಕೋಕೊ ಗಿಡಗಳನ್ನು ಬೆಳೆಯ ಲಾಗುತ್ತಿದೆ. ಸಾವಯವ ಪದ್ಧತಿ ಅಳವಡಿಸಿಕೊಂಡು ಮಿಶ್ರಬೆಳೆಗೆ ಒತ್ತುಕೊಟ್ಟು. ಬಾಳೆ ಸೇರಿದಂತೆ ತರಕಾರಿಗಳನ್ನು ಬೆಳೆಯಲಾಗುತ್ತದೆ. ಇಲಾಖೆಯ ಪೂರಕ ಮಾಹಿತಿ ಅಳವಡಿಸಿಕೊಳ್ಳಲಾಗುತ್ತಿದೆ ಎಂದರು.ಈ ಸಂದರ್ಭದಲ್ಲಿ ಕಾರ್ಯಾಗಾರದಲ್ಲಿ ಭಾಗವಹಿಸಿದ್ದ ರೈತರಿಗೆ ಸಾವಯವ ಬೆಳೆಯುವ ತರಕಾರಿ ಬೀಜಗಳನ್ನು ವಿತರಿಸ ಲಾಯಿತು. ಕ್ಯಾಡಬರಿ ಕಂಪನಿ ಪ್ರತಿನಿಧಿ ಪ್ರದೀಪ್ ತೋಟಗಾರಿಕೆ ಬೆಳೆಗಳ ಕುರಿತು ರೈತರಿಗೆ ಮಾಹಿತಿ ನೀಡಿದರು. ಭರತ್, ಪ್ರೇಮ್‍ಕುಮಾರ್, ಚನ್ನಾಪುರ ಗಿರೀಶ್, ಸುನೀಲ್, ಓಂಕಾರಮೂರ್ತಿ, ಶಿವಕುಮಾರ್, ಶ್ರೀನಿವಾಸ್ ಮತ್ತಿತರಿದ್ದರು.ಪೋಟೊ5ಕೆಕೆಡಿಯು1.ಕಡೂರು ತಾಲೂಕಿನ ಅಂದೇನಹಳ್ಳಿ ಗ್ರಾಮದ ಸಾವಯವ ಕೃಷಿ ಪದ್ದತಿ ಅಳವಡಿಸಿಕೊಂಡಿರುವ ತೋಟಗಾರಿಕೆ ಬೆಳೆಗಳ ಕಾರ್ಯಾಗಾರದಲ್ಲಿ ಭಾಗವಹಿಸಿದ್ದ ರೈತರಿಗೆ ತರಕಾರಿ ಬೀಜಗಳನ್ನು ವಿತರಿಸಲಾಯಿತು. ತೋಟಗಾರಿಕಾ ನಿರ್ದೇಶಕ ಎಚ್.ಕೆ.ಜಯದೇವಪ್ಪ ಮತ್ತಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಿಎನ್‌ಜಿ ಬದಲು ಸಿಬಿಜಿ ಬೇಡ, ಆಟೋ ಚಾಲಕರ ಮನವಿ
ಭೂಮಿ ಬಿಡುವುದಾದರೇ ಮೊದಲು ಒಂದು ತೊಟ್ಟು ವಿಷ ಕೊಡಿ