ಕೃಷಿ ಸಮಸ್ಯೆಗಳ ಪರಿಹಾರ ಕಂಡುಕೊಳ್ಳಲು ಸಂಘಟನೆ ಅಗತ್ಯ

KannadaprabhaNewsNetwork |  
Published : Sep 29, 2025, 03:02 AM IST
ಕೂಡ್ಲಿಗಿ ತಾಲೂಕು  ಕಾನಹೊಸಹಳ್ಳಿಯಲ್ಲಿ  ಕರ್ನಾಟಕ ರಾಜ್ಯ ರೈತಸಂಘ ಹಾಗೂ ಹಸಿರುಸೇನೆ(ಹುಚ್ಚವನಹಳ್ಳಿ ಮಂಜುನಾಥ್ ಬಣ) ಹೋಬಳಿ ಘಟಕಕ್ಕೆ ರಾಜ್ಯಧ್ಯಕ್ಷ ಹುಚ್ಚವನಹಳ್ಳಿ ಮಂಜುನಾಥ್ ಚಾಲನೆ ನೀಡಿದರು. ಈ ವೇಳೆ ಗ್ರಾಪಂ ಅಧ್ಯಕ್ಷ ಸಿದ್ದನಗೌಡ, ಹೋಬಳಿ ಘಟಕದ ಅಧ್ಯಕ್ಷ ಹುಲಿಕೆರೆ ಜೆ.ಮಾರಪ್ಪ, ರಾಜ್ಯ ಪ್ರಧಾನ ಕಾರ್ಯದರ್ಶಿ ದೇವರಮನೆ ಮಹೇಶ್, ಜಿಲ್ಲಾ ಕಾರ್ಯಧ್ಯಕ್ಷ ಬಾಣದ ಕೃಷ್ಣ,  ಜಿಲ್ಲಾಧ್ಯಕ್ಷ ಬಣಕಾರ್ ಬಸವರಾಜ್ ಇದ್ದರು. | Kannada Prabha

ಸಾರಾಂಶ

ಸಂಘಟನೆಗಳು ಬಲಿಷ್ಠವಾದರೆ ರೈತರು ಸದೃಢರಾಗುತ್ತಾರೆ. ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಸಾಧ್ಯ

ಕೂಡ್ಲಿಗಿ: ಕೃಷಿಕರ ಸಮಸ್ಯೆಗಳ ಪರಿಹಾರಕ್ಕಾಗಿ ಹೋರಾಡಲು ರೈತ ಸಂಘಟನೆಗಳ ಅಗತ್ಯವಾಗಿದ್ದು, ಸಂಘಟನೆಗಳು ಬಲಿಷ್ಠವಾದರೆ ರೈತರು ಸದೃಢರಾಗುತ್ತಾರೆ. ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಸಾಧ್ಯ ಎಂದು ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆ ರಾಜ್ಯಧ್ಯಕ್ಷ ಹುಚ್ಚವನಹಳ್ಳಿ ಮಂಜುನಾಥ್ ತಿಳಿಸಿದರು.ಅವರು ತಾೂಲಕಿನ ಕಾನಹೊಸಹಳ್ಳಿಯಲ್ಲಿ ನಡೆದ ರಾಜ್ಯ ರೈತಸಂಘ ಹಾಗೂ ಹಸಿರುಸೇನೆ (ಹುಚ್ಚವನಹಳ್ಳಿ ಮಂಜುನಾಥ್ ಬಣ) ಹೋಬಳಿ ಘಟಕಕ್ಕೆ ಚಾಲನೆ ನೀಡಿದ ನಂತರ ಮಾತನಾಡಿದರು.

ಹೋಬಳಿಯ ವ್ಯಾಪ್ತಿಯಲ್ಲಿ ಬರುವ ಎಲ್ಲ ಊರಿನಲ್ಲೂ ರೈತ ಸಂಘದ ಘಟಕಗಳು ಸ್ಥಾಪನೆಯಾಗಬೇಕು. ಸದಸ್ಯರ ಸಂಖ್ಯೆ ಹೆಚ್ಚಾಗಬೇಕು. ರೈತರು ತಮ್ಮ ಕೆಲಸಗಳನ್ನು ಮಾಡಿಸಿಕೊಳ್ಳಲು ಸರ್ಕಾರಿ ಕಚೇರಿಗಳಿಗೆ ಅಲೆದಾಡುವುದಕ್ಕಿಂತ ತಮ್ಮ ಸಂಘಟನೆಯ ಮೂಲಕ ಪರಿಹರಿಸಿಕೊಳ್ಳಬಹುದು. ನಮ್ಮ ಸಂಘನೆಯೂ ಸದಾ ರೈತರ ಪರವಾಗಿ ಕೆಲಸ ಮಾಡಲ್ಲಿದ್ದು, ಯಾವುದೇ ರೈತರಿಗೆ ತೊಂದರೆಯಾದರು ತಕ್ಷಣ ಸ್ಪಂದಿಸಿ, ನಿಮ್ಮ ಜತೆಗಿದ್ದು ಕೆಲಸ ಮಾಡುವೆ ಎಂದರು. ಹೋಬಳಿ ಘಟಕದ ನೂತನ ಅಧ್ಯಕ್ಷ ಹುಲಿಕೆರೆ ಜೆ.ಮಾರಪ್ಪ ಪ್ರಾಸ್ತಾವಿಕವಾಗಿ ಮಾತನಾಡಿದರು.

ರಾಜ್ಯ ಪ್ರಧಾನ ಕಾರ್ಯದರ್ಶಿ ದೇವರಮನೆ ಮಹೇಶ್, ಜಿಲ್ಲಾ ಕಾರ್ಯಧ್ಯಕ್ಷ ಬಾಣದ ಕೃಷ್ಣ ಜಿಲ್ಲಾಧ್ಯಕ್ಷ ಬಣಕಾರ್ ಬಸವರಾಜ್ ಮಾತನಾಡಿದರು.

ಈ ಸಂದರ್ಭದಲ್ಲಿ ಗ್ರಾಪಂ ಅಧ್ಯಕ್ಷ ಕೆ.ಜಿ. ಸಿದ್ದನಗೌಡ, ತಾಲೂಕು ಅಧ್ಯಕ್ಷ ಬಾಣದ ಮಾರುತಿ, ಹೊಸಪೇಟೆ ತಾಲೂಕು ಅಧ್ಯಕ್ಷ ಬಿ.ಶೇಖಪ್ಪ, ಜಗಳೂರು ತಾಲೂಕು ಅಧ್ಯಕ್ಷ ಪಿ.ಚಿರಂಜೀವಿ, ರೈತ ಮುಖಂಡರಾದ ಕಾನಕಟ್ಟೆ ತಿಪ್ಪೇಸ್ವಾಮಿ, ಇಮ್ಮಡಾಪುರ ಸಂಗಣ್ಣ, ಚಿತ್ತವಾಡಗಿ ನಾಗೇಶ್, ದಾನೇಶ್, ಖಾದರ್, ಬಿ. ಕೃಷ್ಣ, ಪದಧಿಕಾರಿಗಳಾದ ಹುಲಿಕೆರೆ ಎಸ್.ಎಂ. ಸಿದ್ದಪ್ಪ, ಎಲ್.ಎಂ.ಓಬಳೇಶ್, ಜಿ.ಎಸ್.ಹರೀಶ್, ಮಹೇಂದ್ರ, ರಂಗನಾಥನಹಳ್ಳಿ ನಾಗರಾಜ್ ಇದ್ದರು.

ಕಾನಹೊಸಹಳ್ಳಿಯಲ್ಲಿ ರಾಜ್ಯ ರೈತಸಂಘದ ಹೋಬಳಿ ಘಟಕಕ್ಕೆ ರಾಜ್ಯಧ್ಯಕ್ಷ ಹುಚ್ಚವನಹಳ್ಳಿ ಮಂಜುನಾಥ್ ಚಾಲನೆ ನೀಡಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ನರೇಗಾ ಮರುಜಾರಿವರೆಗೆ ಹೋರಾಟ : ಸಿಎಂ ಸಿದ್ದರಾಮಯ್ಯ
ಡ್ರಗ್ಸ್‌ ವಿರುದ್ಧ ಸಿಎಂ ತವರಿಂದಲೇ ಹೋರಾಟ : ವಿಜಯೇಂದ್ರ