ಕನ್ನಡಪ್ರಭ ವಾರ್ತೆ ಸಕಲೇಶಪುರ
ಭಾನುವಾರ ಅಖಿಲ ಭಾರತ ವೀರಶೈವ- ಲಿಂಗಾಯತ ಮಹಾಸಭಾ ಹಮ್ಮಿಕೊಂಡಿದ್ದ ನೂತನ ಪದಾಧಿಕಾರಿಗಳ ಪದಗ್ರಹಣ ಹಾಗೂ ವಿಚಾರ ಸಂಕಿರಣ ಕಾರ್ಯಕ್ರಮ ಉದ್ಘಾಟಿಸಿ ಆಶೀರ್ವಚನ ನೀಡಿ, ಸ್ವಾರ್ಥಕ್ಕೆ ಬಿದ್ದು ಸಮಾಜದ ಸಂಘಟನೆಗಾಗಿ ಹಾನಗಲ್ ಕುಮಾರಸ್ವಾಮಿ ವೀರಶೈವ ಮಹಾಸಭಾ ಸ್ಥಾಪನೆ ಮಾಡದಿದ್ದರೆ ವೀರಶೈವ ಸಮಾಜ ಸಂಘಟನೆಗೆ ಅಧೋಗತಿ ಇಳಿಯುತ್ತಿತ್ತು. ಮಠದ ಆಸ್ತಿಯನ್ನೇ ಮಾರಾಟ ಮಾಡಿ ಮಹಾಸಭಾ ಕಟ್ಟಿದ ಮಹಾನುಭಾವರು ಕುಮಾರಸ್ವಾಮಿಗಳು. ಆದರೆ, ಇಂದಿನ ಕೆಲವು ಸ್ವಾಮೀಜಿಗಳಾದಿಯಾಗಿ ಹಲವರ ಸ್ವಾರ್ಥದಿಂದಾಗಿ ಸಮಾಜ ಇಬ್ಭಾಗವಾಗುತ್ತಿದೆ. ಇದು ತಪ್ಪು, ಸಮಾಜವನ್ನು ಒಂದಾಗಿ ತೆಗೆದುಕೊಂಡು ಹೋಗುವ ವಿಶಾಲ ಮನೋಭಾವನೆ ಇರುವ ವ್ಯಕ್ತಿಗಳ ಅಗತ್ಯ ಇಂದು ಸಮಾಜಕ್ಕೆ ಇದೆ. ಸಂಘಟನಾತ್ಮಕವಾಗಿ ಇಂದು ಸಮಾಜದ ಮಂದಿ ನಡೆಯುವ ಅಗತ್ಯವಿದೆ. ಸಂಘಟನೆಯಲ್ಲಿ ಮಾತ್ರ ಶಕ್ತಿ ಇದೆ. ವೀರಶೈವ- ಲಿಂಗಾಯತ ಸಮಾಜ ಒಂದಾದರೆ ಒಂದು ಸರ್ಕಾರವನ್ನೇ ರಚಿಸುವಷ್ಟು ಶಕ್ತಿ ಇದೆ. ಆದರೆ, ಇದು ಅನಾದಿಕಾಲದಿಂದಲೂ ಸಾಧ್ಯವಾಗುತ್ತಿಲ್ಲ ಎಂಬುದು ವಿಷಾದಕರ. ಹೊಸದೃಷ್ಟಿಕೋನವನ್ನು ಮುಂದಿಟ್ಟುಕೊಂಡು ಸಮಾಜವನ್ನು ಸದೃಢಗೊಳಿಸುವ ಕೆಲಸವಾಗಬೇಕಿದೆ ಎಂದು ತಿಳಿಸಿದರು.
ಅಖಿಲ ಭಾರತ ವೀರಶೈವ ಮಹಾಸಭಾದ ರಾಜ್ಯಘಟಕದ ಪ್ರಧಾನ ಕಾರ್ಯದರ್ಶಿ ನಟರಾಜ್ ಸಾಗರನಹಳ್ಳಿ ಮಾತನಾಡಿ, ಆರ್ಥಿಕವಾಗಿ, ಸಾಮಾಜಿಕವಾಗಿ, ರಾಜಕೀಯವಾಗಿ, ಶೈಕ್ಷಣಿಕವಾಗಿ ತೀರ ದುಸ್ಥಿತಿಗೆ ತಲುಪಿದ್ದ ಸಮಾಜದ ಜನರನ್ನು ಸಂಘಟಿಸಿ ಸಂಪನ್ಮೂಲ ಕಲ್ಪಿಸುವ ನಿಟ್ಟಿನಲ್ಲಿ ಆರಂಭವಾಗಿದ್ದೇ ಮಹಾಸಭಾ. ಮಹಾಸಭಾ ಸಂಸ್ಥೆ ಸ್ವತಂತ್ರ ಪೂರ್ವದ್ದಾಗಿದೆ. ಆದರೂ ಇಂದಿಗೂ ಸಂಘಟನೆ ಸಂಪೂರ್ಣಗೊಂಡಿಲ್ಲ. ಸಂಘಟನೆ ಕೇವಲ ಪದಾಧಿಕಾರಿಗಳ ಕೆಲಸವಲ್ಲ, ಇದು ಸಮಾಜದ ಎಲ್ಲರ ಕರ್ತವ್ಯ. ಆದ್ದರಿಂದ, ಪ್ರತಿಯೊಂದು ಕುಟುಂಬದ ಒರ್ವ ವ್ಯಕ್ತಿ ಮಹಾಸಭಾದ ಸದಸ್ಯರಾಗಬೇಕು. ಇದರಿಂದ ಸಂಸ್ಥೆಯ ಸಂಘಟನೆ ಹೆಚ್ಚಲಿದೆ ಎಂದರು.ಅಖಿಲ ಭಾರತ ವೀರಶೈವ- ಲಿಂಗಾಯತ ಮಹಾಸಭಾದ ತಾಲೂಕು ಘಟಕದ ಅಧ್ಯಕ್ಷರಾಗಿ ಸುಳ್ಳಕ್ಕಿ ದಿನೇಶ್, ಉಪಾಧ್ಯಕ್ಷರಾಗಿ ಎನ್.ಸಿ ರಾಮಚಂದ್ರ, ಹೇಮ ರಾಜಶೇಖರ್, ಪ್ರಧಾನ ಕಾರ್ಯದರ್ಶಿಯಾಗಿ ಚಂದ್ರಶೇಖರ್, ಮಹಿಳಾಘಟಕದ ಅಧ್ಯಕ್ಷರಾಗಿ ಚೈತ್ರಾ ನವೀನ್, ಉಪಾಧ್ಯಕ್ಷರಾಗಿ ಉಮಾದೇವಿ, ಗೀತಾಕುಮಾರ್, ಪ್ರಧಾನ ಕಾರ್ಯದರ್ಶಿಯಾಗಿ ದೀಪಾ ಪರಮೇಶ್ ಆಯ್ಕೆಯಾಗಿದ್ದಾರೆ.