ಕನ್ನಡದ ಉನ್ನತಿಗಾಗಿ ಸಾಹಿತ್ಯ ಸಮ್ಮೇಳನ ಆಯೋಜನೆ: ಡಾ. ಚನ್ನಮಲ್ಲ ಮಹಾಸ್ವಾಮಿಗಳು

KannadaprabhaNewsNetwork |  
Published : Nov 05, 2026, 02:30 AM IST
ದ್ವಿತೀಯ ಕನ್ನಡ ಸಾಹಿತ್ಯ ಸಮ್ಮೇಳನದ ಆಹ್ವಾನ ಪತ್ರಿಕೆಯನ್ನು ಡಾ. ಚನ್ನಮಲ್ಲಶ್ರೀ ಬಿಡುಗಡೆಗೊಳಿಸಿದರು. | Kannada Prabha

ಸಾರಾಂಶ

ನ. ೭ರಂದು ನಡೆಯುವ ದ್ವಿತೀಯ ಕನ್ನಡ ಸಾಹಿತ್ಯ ಸಮ್ಮೇಳನದ ಆಹ್ವಾನ ಪತ್ರಿಕೆಯನ್ನು ಕನಕಗಿರಿ ಪಟ್ಟಣದ ಸುವರ್ಣಗಿರಿ ಸಂಸ್ಥಾನ ವಿರಕ್ತಮಠದಲ್ಲಿ ಸುವರ್ಣಗಿರಿ ಸಂಸ್ಥಾನ ವಿರಕ್ತ ಮಠದ ಡಾ. ಚನ್ನಮಲ್ಲ ಮಹಾಸ್ವಾಮಿಗಳು ಬುಧವಾರ ಬಿಡುಗಡೆಗೊಳಿಸಿದರು.

ಕನಕಗಿರಿ: ಕನ್ನಡ ಉನ್ನತಿಗಾಗಿಯೇ ಸಾಹಿತ್ಯ ಸಮ್ಮೇಳನ ಆಯೋಜಿಸಲಾಗುತ್ತಿದ್ದು, ಇದರಲ್ಲಿ ಸರ್ವ ಜನಾಂಗದವರು ಪಾಲ್ಗೊಂಡು ಯಶಸ್ವಿಗೊಳಿಸಬೇಕು ಎಂದು ಸುವರ್ಣಗಿರಿ ಸಂಸ್ಥಾನ ವಿರಕ್ತ ಮಠದ ಡಾ. ಚನ್ನಮಲ್ಲ ಮಹಾಸ್ವಾಮಿಗಳು ಹೇಳಿದರು.

ಪಟ್ಟಣದ ಸುವರ್ಣಗಿರಿ ಸಂಸ್ಥಾನ ವಿರಕ್ತಮಠದಲ್ಲಿ ಕಸಾಪ ಹಮ್ಮಿಕೊಂಡಿದ್ದ ನ. ೭ರಂದು ನಡೆಯುವ ದ್ವಿತೀಯ ಕನ್ನಡ ಸಾಹಿತ್ಯ ಸಮ್ಮೇಳನದ ಆಹ್ವಾನ ಪತ್ರಿಕೆ ಬಿಡುಗಡೆಗೊಳಿಸಿ ಬುಧವಾರ ಅವರು ಮಾತನಾಡಿದರು. ಕನ್ನಡದ ಮಹತ್ವ ಸಮಾಜದ ಕಟ್ಟಕಡೆಯ ವ್ಯಕ್ತಿಗೂ ತಲುಪುವ ನಿಟ್ಟಿನಲ್ಲಿ ಪ್ರಯತ್ನಿಸಲಾಗುತ್ತಿದೆ. ಇಲ್ಲಿ ಎಲ್ಲ ರಂಗಗಳಲ್ಲಿಯೂ ಎಲೆಮರೆಯ ಕಾಯಿಯಂತಿರುವ ಸಾಧಕರನ್ನು ಗುರುತಿಸಿ, ಗೌರವಿಸುವ ಮೂಲಕ ಕನ್ನಡದ ಸಾಹಿತ್ಯ, ಸಂಗೀತ, ಕಲೆ ಅನಾವರಣಗೊಳಿಸುವ ಉದ್ದೇಶದಿಂದ ಈ ಕಾರ್ಯಕ್ರಮ ಆಯೋಜಿಸಲಾಗಿದ್ದು, ಸರ್ವರೂ ಈ ಅಕ್ಷರ ಜಾತ್ರೆಯಲ್ಲಿ ಭಾಗವಹಿಸಿ ಕನ್ನಡಮ್ಮನ ತೇರು ಎಳೆಯೋಣ ಎಂದು ಹೇಳಿದರು.

ಹಿರಿಯ ಮುಖಂಡ ಡಿ.ಎಂ. ಅರವಟಗಿಮಠ ಮಾತನಾಡಿ, ಸಮ್ಮೇಳನ ನಡೆಯುವಾಗ ಕನ್ನಡವನ್ನು ಸ್ಮರಿಸದೇ ದಿನವಿಡಿ ತಾಯಿ ಭುವನೇಶ್ವರಿ, ನೆಲ, ಜಲ, ಭಾಷೆ, ನಾಡಿನ ಸಾಹಿತಿಗಳನ್ನು ನೆನೆಯುವ ಕೆಲಸ ಆಗಬೇಕಿದೆ. ತಾಲೂಕು ಹಾಗೂ ಜಿಲ್ಲಾ ಮಟ್ಟದ ಸಾಹಿತ್ಯ ಸಮ್ಮೇಳನಗಳಲ್ಲಿ ಹೆಚ್ಚು ಸಾಹಿತ್ಯ ಕ್ಷೇತ್ರಕ್ಕೆ ಆದ್ಯತೆ ನೀಡಬೇಕು. ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ಗುರುತಿಸಿಕೊಂಡ ಸಾಹಿತಿಗಳನ್ನು ಸಮ್ಮೇಳನದಲ್ಲಿ ಜೋಡಿಸಿಕೊಂಡರೆ ತಾಲೂಕಿನ ಘನತೆ ಹೆಚ್ಚಾಗಲಿದೆ ಎಂದರು.

ಪಪಂ ಅಧ್ಯಕ್ಷೆ ತನುಶ್ರೀ ಟಿ.ಜೆ. ರಾಮಚಂದ್ರ, ಉಪಾಧ್ಯಕ್ಷ ಕಂಠಿರಂಗಪ್ಪ ನಾಯಕ, ಕಸಪಾ ಜಿಲ್ಲಾಧ್ಯಕ್ಷ ಶರಣೇಗೌಡ, ಪ್ರಮುಖರಾದ ಎಸ್.ಐ. ಪಾಟೀಲ್, ರುದ್ರಮುನಿ ಪ್ರಭುಶೆಟ್ಟರ್, ಪಾಂಡುರಂಗ ಜನಾದ್ರಿ, ವೀರೇಶ ಸಮಗಂಡಿ, ವಾಗೀಶ ಹಿರೇಮಠ, ಶರಣಪ್ಪ ಭತ್ತದ, ಮಹಾಂತೇಶ ಸಜ್ಜನ್, ಸಂಗಪ್ಪ ಸಜ್ಜನ್, ಪರಸಪ್ಪ ಹೊರಪೇಟೆ, ವೀರಭದ್ರಪ್ಪ ಗುಗ್ಗಳಶೆಟ್ರ, ವೀರೇಶ ಮಿಟ್ಲಕೋಡ, ಅಂಬರೇಶ ಪಟ್ಟಣಶೆಟ್ಟಿ, ತಿಪ್ಪಣ್ಣ ಮಡಿವಾಳ, ಸುರೇಶ ಪೂಜಾರ ಇತರರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಗಳನ್ನು ಲವ್‌ ಮಾಡಿದ್ದಕ್ಕೆ ಕೆಲಸಗಾರನ ಹತ್ಯೆ
ಡೇಟಿಂಗ್‌ ಆ್ಯಪಲ್ಲಿ ಪರಿಚಯವಾದಯುವಕನ ದರೋಡೆ: ನಾಲ್ವರ ಸೆರೆ