ದೊಡ್ಡಬಳ್ಳಾಪುರ: ಕನ್ನಡ ನಾಡು-ನುಡಿ ಹೋರಾಟಗಳಿಗೆ ಮಾತ್ರ ಸಂಘಟನೆ ಸೀಮಿತವಾಗದೆ ನಿಸ್ವಾರ್ಥ ಸೇವಾ ಮನೋಭಾವದಿಂದ ನಿರಂತರ ವಿಶೇಷ ಕಾರ್ಯಕ್ರಮಗಳನ್ನು ರೂಪಿಸುವುದು ಸಂಘಟನೆಯ ಉದ್ದೇಶ ಎಂದು ಚಿರಋಣಿ ಕನ್ನಡಾಂಬೆ ಹೋರಾಟ ಸಮಿತಿ ಸಂಸ್ಥಾಪಕ ರವಿ ಮಾವಿನಕುಂಟೆ ತಿಳಿಸಿದರು.
ದರ್ಗಾ ಜೋಗಹಳ್ಳಿ ಗ್ರಾಪಂ ಅಧ್ಯಕ್ಷೆ ಶಶಿಕಲಾಮಾತನಾಡಿ, ಗಣರಾಜ್ಯೋತ್ಸವವನ್ನು ಆರೋಗ್ಯ ಶಿಬಿರದ ಮೂಲಕ ಆಚರಿಸುತ್ತಿರುವುದು ಆರ್ಥಪೂರ್ಣವಾಗಿದ್ದು, ನಿರಂತರ ಅನ್ನದಾಸೋಹ ಉತ್ತಮ ಪರಿಕಲ್ಪನೆಯಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಪೌರಕಾರ್ಮಿಕರು, ಆಶಾ ಕಾರ್ಯಕರ್ತೆಯರನ್ನು ಸನ್ಮಾನಿಸಿ ಅಭಿನಂದಿಸಲಾಯಿತು. ಅನ್ನದಾಸೋಹ ನಡೆಯಿತು. ಚಿಗುರು ಆಸ್ಪತ್ರೆಯ ಮಾಲೀಕ ನಾಗರಾಜ್, ಚಿರಋಣಿ ಕನ್ನಡಾಂಬೆ ಹೋರಾಟ ಸಮಿತಿ ರಾಜ್ಯಾಧ್ಯಕ್ಷಸುಬ್ರಮಣಿ, ಕಾರ್ಮಿಕ ಘಟಕದ ಅಧ್ಯಕ್ಷ ಆನಂದ್ ಕುಮಾರ್, ಜಿಲ್ಲಾ ಉಪಾಧ್ಯಕ್ಷ ಕೃಷ್ಣಮೂರ್ತಿ, ತಾಲೂಕು ಅಧ್ಯಕ್ಷ ಶ್ರೀರಾಮ್, ಗ್ರಾಮ ಪಂಚಾಯತಿ ಸದಸ್ಯರಾದ ರಂಗಸ್ವಾಮಿ, ಜೆ.ವೈ.ಮಲ್ಲಪ್ಪ, ಕಲಾವಿದರ ಸಂಘದ ಅಧ್ಯಕ್ಷ ಎ.ಸಿ ಅಶೋಕ್, ಮುಖಂಡರಾದ ಅನಿಲ್, ರಂಗಸ್ವಾಮಿ, ರುದ್ರೇಶ್, ಕೆ.ಸಿ,ಸವಿತಾ, ಯೋಗ ಗುರು ಕೃಷ್ಣಪ್ಪ ಹಾಗೂ ಚಿರಋಣಿ ಕನ್ನಡಾಂಬೆ ಹೋರಾಟ ಸಮಿತಿ ಪದಾಧಿಕಾರಿಗಳು ಹಾಜರಿದ್ದರು.