ಪಂಚಾಯತ್ ಚುನಾವಣೆಗಾಗಿ ಸಂಘಟಿತರಾಗಿ

KannadaprabhaNewsNetwork |  
Published : May 13, 2025, 01:33 AM IST
೧೨ಕೆಎಲ್‌ಆರ್-೨ಕೋಲಾರದ ಹಾರೋಹಳ್ಳಿ ತಮ್ಮ ಗೃಹದಲ್ಲಿ ರಾಜ್ಯ ಆಹಾರ ಖಾತೆ ಸಚಿವ ಕೆ.ಹೆಚ್.ಮುನಿಯಪ್ಪ ಸುದ್ದಿಗಾರರೊಂದಿಗೆ ಮಾತನಾಡುತ್ತಿರುವುದು. | Kannada Prabha

ಸಾರಾಂಶ

ಕಾಂಗ್ರೆಸ್‌ ಬಲಪಡಿಸಲು ಮತ್ತು ಸಂಘಟಿಸಲು ಕೆಲವೊಮ್ಮೆ ಸ್ಥಾನಮಾನಗಳನ್ನು ತ್ಯಾಗ ಮಾಡುವುದು ಹೊಸದ್ದೇನಲ್ಲ. ಬೇರೆಯವರಿಗೆ ನೀಡಿರುವ ಅವಕಾಶವನ್ನು ಸದ್ಬಳಿಸಿಕೊಳ್ಳಲಿ, ಮುಂದಿನ ೨೦೨೮ಕ್ಕೆ ಪುನಹ ಕಾಂಗ್ರೆಸ್ ಆಡಳಿತ ಚುಕ್ಕಾಣಿ ಹಿಡಿಯಲು ಸಂಘಟನೆಗೆ ಒತ್ತು ನೀಡುವುದು ಕಾರ್ಯಕರ್ತರ ಗುರಿಯಾಗಬೇಕು.

ಕನ್ನಡಪ್ರಭ ವಾರ್ತೆ ಕೋಲಾರಮುಂಬರಲಿರುವ ತಾಲೂಕು, ಜಿಲ್ಲಾ ಪಂಚಾಯಿತಿ ಹಾಗೂ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಕಾಂಗ್ರೆಸ್‌ ಗೆಲುವು ಸಾಧಿಸಲು ಕಾರ್ಯಕರ್ತರು ಸಂಘಟಿತರಾಗಿ ಶ್ರಮಿಸಬೇಕು. ವೈಯುಕ್ತಿಕ ಪ್ರತಿಷ್ಠೆಗಳನ್ನು ಬದಿಗೆ ಸರಿಸಿ ಮುಂದೆ ಪಕ್ಷವು ಅಧಿಕಾರದ ಚುಕ್ಕಾಣೆ ಹಿಡಿಯಲು ಗ್ರಾಮೀಣ ಪ್ರದೇಶದಿಂದ ಸಂಘಟಿತರಾಗಬೇಕೆಂದು ರಾಜ್ಯ ಆಹಾರ ಖಾತೆ ಸಚಿವ ಕೆ.ಎಚ್.ಮುನಿಯಪ್ಪ ಮನವಿ ಮಾಡಿದರು. ೪.೫ ಕೋಟಿ ಜನತೆ ‘ಗ್ಯಾರಂಟಿ’

ನಗರದ ಹಾರೋಹಳ್ಳಿ.ಲ್ಲಿರುವ ತಮ್ಮ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಅವರು ಮಾತನಾಡಿ, ಚುನಾವಣೆ ಪೂರ್ವ ನೀಡಿದಂತೆ ಪಂಚ ಗ್ಯಾರಂಟಿಗಳನ್ನು ಜಾತ್ಯತೀತವಾಗಿ, ಪಕ್ಷಾತೀತವಾಗಿ ಅನುಷ್ಠಾನಕ್ಕೆ ತರಲಾಗಿದೆ, ರಾಜ್ಯದ ೬.೫ ಕೋಟಿ ಜನತೆಯಲ್ಲಿ ೪.೫ ಕೋಟಿ ಜನತೆ ಗ್ಯಾರಂಟಿಗಳ ಸೌಲಭ್ಯಗಳನ್ನು ಪಡೆಯುತ್ತಿದ್ದಾರೆ ಇದೊಂದು ಐತಿಹಾಸಿಕ ದಾಖಲೆಯಾಗಿದೆ ಎಂದರು. ಬಡತನ ರೇಖೆಗಿಂತ ಕೆಳಗೆ ಇರುವ ಕುಟುಂಬಗಳಲ್ಲಿ ಪ್ರತಿಯೊರ್ವರಿಗೆ ಪ್ರತಿ ಮಾಹೆ ೧೦ ಕೆ.ಜಿ. ಅಕ್ಕಿ ನೀಡಲಾಗುತ್ತಿದೆ. ಮಹಿಳೆಯರಿಗೆ ಉಚಿತ ಬಸ್, ಉಚಿತ ವಿದ್ಯುತ್, ನಿರುದ್ಯೋಗಿಗಳಿಗೆ ವೇತನ ಹಾಗೂ ಕುಟುಂಬದ ಯಾಜಮಾನಿಗೆ ೨ ಸಾವಿರ ರೂ ಪ್ರತಿ ಮಾಹೆ ನೀಡಲಾಗುತ್ತಿದೆ. ಗ್ಯಾರಂಟಿ ಯೋಜನೆಗಳಿಗೆ ೫೬ ಸಾವಿರ ಕೋಟಿ ಹಣವನ್ನು ಮೀಸಲಿಟ್ಟಿದೆ, ರಾಜ್ಯವು ಸುಭಿಕ್ಷೆಯಾಗಿದೆ, ರಾಜ್ಯದಲ್ಲಿ ಅಭಿವೃದ್ದಿ ಕಾರ್ಯಗಳು ಆಡೆತಡೆ ಇಲ್ಲದೆ ಸಾಗಿವೆ. ಎಲ್ಲಾ ವಿಧಾನಸಭಾ ಕ್ಷೇತ್ರಗಳಿಗೆ ಸಮರ್ಪಕವಾದ ಅನುದಾನ ಹಂಚಿಕೆ ಮಾಡಲಾಗುತ್ತಿದೆ ಎಂದರು.

ಜಿಲ್ಲೆಯಲ್ಲಿ ಅಭಿವೃದ್ಧಿ ಕಾರ್ಯ

ಜಿಲ್ಲೆಯಲ್ಲಿ ೧೫೦ ಕೋಟಿ ರೂ ವೆಚ್ಚದಲ್ಲಿ ಶಾದಿ ಮಹಲ್, ಕಲ್ಯಾಣ ಮಂಟಪಗಳು, ಮಹಿಳೆಯರ ಸ್ವಾವಲಂಭಿ ಬದುಕಿಗೆ ಹೊಲಿಗೆ ಯಂತ್ರಗಳು, ವಿಕಲಚತನರಿಗೆ ತ್ರಿಚಕ್ರವಾಹನ, ವಿದ್ಯಾರ್ಥಿ ವೇತನ, ರೈತರಿಗೆ ಕೃಷಿ ಪರಿಕರಗಳು ಸೇರಿದಂತೆ ವಿವಿಧ ಸೌಲಭ್ಯಗಳನ್ನು ವಿತರಿಸಲಾಗುವುದು ೧೦೧ ಗ್ರಾಪಂ ಮಟ್ಟದಲ್ಲಿ ಗುಣಮಟ್ಟ ಶಿಕ್ಷಣಕ್ಕೆ ಕಾರ್ಯಕ್ರಮ ರೂಪಿಸಲಾಗುವುದು ಸಿ.ಎಸ್.ಆರ್ ಅನುದಾನದಲ್ಲಿ ಕೆರೆಗಳ ಅಭಿವೃದ್ದಿ ಕಾಮಗಾರಿಗಳನ್ನಜು ಕೈಗೆತ್ತಿಕೊಳ್ಳಲಾಗುವುದು ಎಂದು ವಿವರಿಸಿದರು.

ಕಾಂಗ್ರೆಸ್‌ ಬಲಪಡಿಸಲು ಮತ್ತು ಸಂಘಟಿಸಲು ಕೆಲವೊಮ್ಮೆ ಸ್ಥಾನಮಾನಗಳನ್ನು ತ್ಯಾಗ ಮಾಡುವುದು ಹೊಸದ್ದೇನಲ್ಲ. ಬೇರೆಯವರಿಗೆ ನೀಡಿರುವ ಅವಕಾಶವನ್ನು ಸದ್ಬಳಿಸಿಕೊಳ್ಳಲಿ, ಮುಂದಿನ ೨೦೨೮ಕ್ಕೆ ಪುನಹ ಕಾಂಗ್ರೆಸ್ ಆಡಳಿತ ಚುಕ್ಕಾಣಿ ಹಿಡಿಯಲು ಸಂಘಟನೆಗೆ ಒತ್ತು ನೀಡುವುದು ನಮ್ಮ ಗುರಿಯಾಗಿದೆ. ಇದಕ್ಕಾಗಿ ನಾನು ಕೆಲವೊಂದು ಸಲಹೆಗಳನ್ನು ನೀಡಿದ್ದು ನಿಜ. ಅದನ್ನು ಸ್ವೀಕರಿಸುವುದು ಬಿಡುವುದು ಪಕ್ಷದ ಹೈಕಮಾಂಡ್‌ಗೆ ಸೇರಿದೆ, ರಾಜ್ಯದಲ್ಲಿ ಪ್ರಸ್ತುತ ಮುಖ್ಯಮಂತ್ರಿಗಳ, ಉಪಮುಖ್ಯ ಮಂತ್ರಿಗಳ, ಕೆ.ಪಿ.ಸಿ.ಸಿ. ಅಧ್ಯಕ್ಷ ಸ್ಥಾನದ ಬದಲಾವಣೆ ಬಗ್ಗೆ ಯಾವುದೇ ಪ್ರಸ್ತಾವನೆ ಹೈಕಮಾಂಡ್ ಮುಂದಿಲ್ಲ ಎಂದು ಸ್ಪಷ್ಟಪಡಿಸಿದರು.ಯುದ್ಧ ಭಯೋತ್ಪಾದಕರ ವಿರುದ್ಧ

ರಾಷ್ಟ್ರದಲ್ಲಿ ಗಾಂಧೀಜಿ ಶಾಂತಿ ಪಾಠವನ್ನು ಪಾಲಿಸಲಾಗುತ್ತಿದೆ. ೨೦೦ ವರ್ಷಗಳ ಬ್ರಿಟೀಷರು ಭಾರತವನ್ನು ಆಡಳಿತ ನಡೆಸಿದಾಗ ಗಾಂಧಿಜೀಯವರ ಶಾಂತಿ ಸೂತ್ರದಿಂದಲೇ ನಾವು ಗೆಲುವು ಸಾಧಿಸಿದ್ದೇವು ಎಂಬುವುದನ್ನು ಮರೆಯಬಾರದು. ನಾವು ಪಾಕಿಸ್ತಾನದ ಮೇಲೆ ಯುದ್ದ ಮಾಡುತ್ತಿಲ್ಲ. ಉಗ್ರರ ಮೇಲೆ ನಾವು ಯುದ್ದ ಮಾಡುತ್ತಿದ್ದೇವೆ. ಪಾಕಿಸ್ತಾನದಲ್ಲಿ ಅಡಗಿರುವ ಉಗ್ರರ ನೆಲೆಗಳು ಹಾಗೂ ಉಗ್ರರ ಬೆಂಬಲಿತರ ಮೇಲೆ ಯುದ್ದ ಸಾರಲಾಗಿದೆ. ನಮ್ಮ ಪ್ರವಾಸಿಗರ ಮೇಲೆ ದಾಳಿ ಮಾಡಿದ್ದರಿಂದ ನಾವು ದಾಳಿ ಮಾಡುತ್ತೇವೆ. ಹೊರತು ಯುದ್ಧದ ಕಲಹಗಳಿಂದ ಯಾರಿಗೂ ಯಾವುದೇ ಲಾಭವಿಲ್ಲ. ನಾವೆಲ್ಲಾ ಮಾನವರು. ಮಾನವರು ಮಾನವರಾಗಿ ಬಾಳ್ವೆ ನಡೆಸೋಣ, ಮಾನವೀಯತೆಯ ಸಿದ್ದಾಂತಗಳನ್ನು ಪಾಲಿಸೋಣ ಎಂದರು.ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಲಕ್ಷ್ಮೀ ನಾರಾಯಣ, ಕಾರ್ಯಾಧ್ಯಕ್ಷ ಊರುಬಾಗಿಲು ಶ್ರೀನಿವಾಸ್, ಎಸ್.ಸಿ. ಘಟಕದ ಅಧ್ಯಕ್ಷ ಜಯದೇವ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪ್ರಸಾದ್ ಬಾಬು, ಉದಯ್ ಶಂಕರ್, ಮಾಜಿ ಜಿ.ಪಂ.ಸದಸ್ಯ ರಾಮಲಿಂಗಾರೆಡ್ಡಿ, ಅಲ್ಪಸಂಖ್ಯಾತ ಘಟಕ ಅಧ್ಯಕ್ಷ ಯಕ್ಬಾಲ್ ಅಹ್ಮದ್, ಮುಖಂಡರಾದ ಸವಿತಾ ಮಂಜುನಾಥ್ ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕಮತಗಿಯಲ್ಲಿ ನಿವೃತ್ತ ಯೋಧ ಲಕ್ಷ್ಮಣಗೆ ಭವ್ಯ ಸ್ವಾಗತ
ಉತ್ತರದ ಅಭಿವೃದ್ಧಿಗೆ ಪ್ರತ್ಯೇಕ ರಾಜ್ಯ ಅಗತ್ಯ: ಉ.ಕ.ಹೋರಾಟ ಸಮಿತಿ