ಎನರ್ಜಿ ಉಳಿತಾಯಕ್ಕಾಗಿ ಜಾಗೃತಿ ವಾಕಥಾನ್

KannadaprabhaNewsNetwork |  
Published : Dec 18, 2025, 12:15 AM IST
999999 | Kannada Prabha

ಸಾರಾಂಶ

ನಗರದ ಸಾಹೇ ವಿಶ್ವವಿದ್ಯಾಲಯ ಮತ್ತು ಸಂಯೋಜಿತ ಶಿಕ್ಷಣ ಸಂಸ್ಥೆಯಾದ ಶ್ರೀ ಸಿದ್ಧಾರ್ಥ ತಾಂತ್ರಿಕ ಮಹಾವಿದ್ಯಾಲಯದ ಎನರ್ಜಿ ಕ್ಲಬ್ ಆ್ಯಂಡ್‌ ಇನ್ಸ್ಟಿಟ್ಯೂಷನ್ ಇನ್ನೋವೇಶನ್ ಕೌನ್ಸಿಲ್ ಸಂಯುಕ್ತವಾಗಿ ರಾಷ್ಟ್ರೀ ವಿದ್ಯುಚ್ಛಕ್ತಿ ಉಳಿತಾಯ ಜಾಗೃತಿ ಅಂಗವಾಗಿ ಎಸ್‌ಎಸ್‌ಐಟಿ ಕ್ಯಾಂಪಸ್‌ನಲ್ಲಿ ಎಚ್‌ಎಂಜಿ ವೃತ್ತದಿಂದ ಮುಖ್ಯ ದ್ವಾರದವರೆಗೆ “ವಾಕ್‌ಥಾನ್” ಆಯೋಜಿಸಲಾಗಿತ್ತು.

ಕನ್ನಡಪ್ರಭ ವಾರ್ತೆ ತುಮಕೂರುನಗರದ ಸಾಹೇ ವಿಶ್ವವಿದ್ಯಾಲಯ ಮತ್ತು ಸಂಯೋಜಿತ ಶಿಕ್ಷಣ ಸಂಸ್ಥೆಯಾದ ಶ್ರೀ ಸಿದ್ಧಾರ್ಥ ತಾಂತ್ರಿಕ ಮಹಾವಿದ್ಯಾಲಯದ ಎನರ್ಜಿ ಕ್ಲಬ್ ಆ್ಯಂಡ್‌ ಇನ್ಸ್ಟಿಟ್ಯೂಷನ್ ಇನ್ನೋವೇಶನ್ ಕೌನ್ಸಿಲ್ ಸಂಯುಕ್ತವಾಗಿ ರಾಷ್ಟ್ರೀ ವಿದ್ಯುಚ್ಛಕ್ತಿ ಉಳಿತಾಯ ಜಾಗೃತಿ ಅಂಗವಾಗಿ ಎಸ್‌ಎಸ್‌ಐಟಿ ಕ್ಯಾಂಪಸ್‌ನಲ್ಲಿ ಎಚ್‌ಎಂಜಿ ವೃತ್ತದಿಂದ ಮುಖ್ಯ ದ್ವಾರದವರೆಗೆ “ವಾಕ್‌ಥಾನ್” ಆಯೋಜಿಸಲಾಗಿತ್ತು. ಡಿ.15 ರಿಂದ 21 ರವರೆಗೆ ಆಚರಿಸಲಾಗುತ್ತಿರುವ ನ್ಯಾಷನಲ್ ಎನರ್ಜಿ ಕನ್ಸರ್ವೇಷನ್ ಆ್ಯಂಡ್‌ ಎನರ್ಜಿ ಎಫಿಶಿಯೆನ್ಸಿ ಸಪ್ತಾಹದ ೩ ನೇ ದಿನದ ಅಂಗವಾಗಿ ವಿದ್ಯುಚ್ಛಕ್ತಿ ಉಳಿತಾಯ ಮತ್ತು ಸದ್ಭಳಕೆ ಕುರಿತು ಜಾಗೃತಿ ಮೂಡಿಸಲಾಯಿತು.ಸಾಹೇ ವಿಶ್ವವಿದ್ಯಾಲಯದ ಉಪಕುಲಪತಿ ಡಾ. ಕೆ ಬಿ ಲಿಂಗೇಗೌಡ ಅವರು, ವಾಕ್‌ಥಾನ್‌ಗೆ ಹಸಿರು ನಿಶಾನೆ ತೋರುವ ಮೂಲಕ ಚಾಲನೆ ನೀಡಿದರು. ಈ ವೇಳೆ ಮಾತನಾಡಿದ ಅವರು, ಅನವಶ್ಯಕವಾಗಿ ಉರಿಯುತ್ತಿರುವ ವಿದ್ಯುತ್ ದೀಪ ಮತ್ತು ಉಪಕರಣಗಳನ್ನು ನಂದಿಸಬೇಕು. ಸೌರಶಕ್ತಿಯನ್ನು ಪರಿಣಾಮಕಾರಿಯಾಗಿ ಬಳಸಬೇಕು. ಸಾಹೇ ವಿಶ್ವವಿದ್ಯಾಲಯದಲ್ಲಿ ಈಗಾಗಲೇ ಸೌರಶಕ್ತಿ ಘಟಕಗಳನ್ನು ಹೊಂದಿದೆ. ಬೇರೆ ಯಾವ ವಿಶ್ವವಿದ್ಯಾನಿಲಯಗಳಲ್ಲಿ ಸೌರಶಕ್ತಿ ಬಳಸುತ್ತಿಲ್ಲ. ಒಮ್ಮೆ ಸಾಹೇ ವಿವಿಗೆ ಭೇಟಿ ನೀಡಿ ಸೌರಶಕ್ತಿ ಘಟಕವನ್ನು ವೀಕ್ಷಿಸಬಹುದು ಎಂದರು. ನಂತರ ಮಾತನಾಡಿದ ಸಾಹೇ ಕುಲಸಚಿವ ಡಾ. ಅಶೋಕ್ ಮೆಹ್ತಾ, , ಪುನರ್ ಬಳಕೆ ಇಂಧನಗಳಾದ ಸೌರ ಶಕ್ತಿ, ವಾಯುಶಕ್ತಿ ಹೀಗೆ ದೊರಕುವ ಹಸಿರು ಇಂಧನಗಳನ್ನು ಪರಿಣಾಮಕಾರಿಯಾಗಿ ಬಳಸುವ ಮೂಲಕ ನಾವು ವಿದ್ಯುತ್ ಶಕ್ತಿಯನ್ನು ಉಳಿಸಬಹುದು ಜೊತೆಗೆ ಪರಿಸರ ರಕ್ಷಣೆಗೆ ಕೈ ಜೋಡಿಸಬಹುದು ಎಂದು ತಿಳಿಸಿದರು. ಶ್ರೀ ಸಿದ್ಧಾರ್ಥ ತಾಂತ್ರಿಕ ಮಹಾವಿದ್ಯಾಲಯದ ಪ್ರಾಂಶುಪಾಲ ಡಾ. ಎಂ.ಎಸ್. ರವಿಪ್ರಕಾಶ ಮಾತನಾಡಿ, ವಿದ್ಯುತ್ ಶಕ್ತಿಯನ್ನು ಸಂರಕ್ಷಿಸಲು ಅನುಕೂಲಕರವಾದ ಎಲ್ಲಾ ಮೂಲದ ಪರಿಸರಸ್ನೇಹಿಯಾದ ಪರ್ಯಾಯ ಮೂಲ ಇಂಧನಗಳನ್ನು ಅತ್ಯಂತ ಪರಿಣಾಮಕಾರಿಯಾಗಿ ಸದ್ಬಳಕೆ ಮಾಡಿಕೊಳ್ಳಬೇಕು ಹಾಗೂ ಇದರ ಬಗ್ಗೆ ಇತರರಿಗೂ ಜಾಗೃತಿ ಮೂಡಿಸುವ ಮೂಲಕ ಸಾಧ್ಯವಾದಷ್ಟು ಅವರು ಬಳಸುವಂತೆ ಪ್ರೇರೇಪಿಸಬೇಕು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು. ವಾಕ್‌ಥಾನ್‌ಗೂ ಮುನ್ನ ಎಲೆಕ್ಟ್ರಿಕಲ್ ಮತ್ತು ಎಲೆಕ್ರ್ಟಾನಿಕ್ಸ್ ಎಂಜಿನಿಯರಿಂಗ್ ವಿಭಾಗದ ವಿದ್ಯಾರ್ಥಿಗಳಿಂದ ವಿದ್ಯುಚ್ಛಕ್ತಿ ಉಳಿತಾಯ ಜಾಗೃತಿ ಮೂಡಿಸುವ ಬೀದಿ ನಾಟಕ ಪ್ರದರ್ಶಿಸಿದರು. ಈ ಸಂದರ್ಭದಲ್ಲಿ ಎಸ್‌ಎಸ್‌ಐಟಿಯ ಡೀನ್ (ಅಕಾಡೆಮಿಕ್) ಡಾ. ರೇಣುಕಾಲತಾ, ಎಲೆಕ್ಟ್ರಿಕಲ್ ಮತ್ತು ಎಲೆಕ್ಟ್ರಾನಿಕ್ಸ್ ಎಂಜಿನಿಯರಿಂಗ್ ವಿಭಾಗದ ಮುಖ್ಯಸ್ಥರು ಹಾಗೂ ಎನರ್ಜಿ ಕ್ಲಬ್‌ನ ಸಂಯೋಜಕರಾದ ಡಾ ಎನ್ ಪ್ರದೀಪ್, ಇನ್ಸ್ಟಿಟ್ಯೂಷನ್ ಇನ್ನೋವೇಶನ್ ಕೌನ್ಸಿಲ್‌ನ ಸಂಯೋಜಕರಾದ ಡಾ.ಪ್ರವೀಣ್ ಕುಮಾರ್ ಸಿ, ಎನ್‌ಸಿಸಿ ಅಧಿಕಾರಿ ಡಾ. ಜಯಪ್ರಕಾಶ್, ಎನ್ ಎಸ್‌ಎಸ್ ಸಂಯೋಜಕರಾದ ಡಾ ರವಿಕಿರಣ್, ಶ್ರೀ ಸಿದ್ಧಾರ್ಥ ಮಾಧ್ಯಮ ಅಧ್ಯಯನ ಕೇಂದ್ರದ ನಿರ್ದೇಶಕರಾದ ಡಾ.ಬಿ.ಟಿ.ಮುದ್ದೇಶ್, ಶ್ರೀ ಸಿದ್ಧಾರ್ಥ ವ್ಯವಹಾರ ನಿರ್ವಹಣಾ ಸಂಸ್ಥೆಯ ಪ್ರಾಂಶುಪಾಲರಾದ ಡಾ.ಮಮತ, ಶ್ರೀ ಸಿದ್ಧಾರ್ಥ ಇನ್ಸಿಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್ ಸ್ಟಡೀಸ್‌ನ ಸಿಬ್ಬಂದಿ ವರ್ಗ ಮತ್ತು ಎಂಜಿನಿಯರಿಂಗ್ ಕಾಲೇಜಿನ ಎಲ್ಲಾ ವಿಭಾಗದ ಮುಖ್ಯಸ್ಥರು, ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಹಾಜರಿದ್ದು ವಾಕ್‌ಥಾನ್ ಯಶಸ್ವಿಗೊಳಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಹಣ ಹಂಚಿ ಗೆದ್ದವರಿಂದ ಜನಪರ ಆಡಳಿತ ಸಾಧ್ಯವಿಲ್ಲ
ಬಾಲ್ಯವಿವಾಹಕ್ಕೆ ಅವಕಾಶ ನೀಡಿದರೆ ಕಠಿಣ ಶಿಕ್ಷೆ