ಶಿರಸಿ: ಮಲೆನಾಡು ಮತ್ತು ಕರಾವಳಿ ಪ್ರದೇಶದ ಸಮಸ್ಯೆಗಳು ರಾಜ್ಯದ ಹಿಂದುಳಿದ ಪ್ರದೇಶಕ್ಕಿಂತ ವಿಭಿನ್ನವಾಗಿದ್ದು, ಈ ಭಾಗದ ಸಮಸ್ಯೆಗಳ ಪರಿಹಾರಕ್ಕೆ ಪಕ್ಷಾತೀತ, ಜಾತ್ಯಾತೀತ ನೆಲೆಯಲ್ಲಿ ಸಂಘಟಿತ, ಸಾಂಘೀಕ ಹೋರಾಟ ಅವಶ್ಯವೆಂದು ರಾಜ್ಯ ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆಯ ಅಧ್ಯಕ್ಷ ರವೀಂದ್ರ ನಾಯ್ಕ ಹೇಳಿದರು.
ಈ ಪ್ರದೇಶದ ಕಂದಾಯ, ಅರಣ್ಯ ಭೂಮಿ, ಬೆಟ್ಟ, ಹಾಡಿ, ಕುಮ್ಮಟಿ ಮುಂತಾದ ಪ್ರದೇಶದ ಭೂಮಿ ಹಕ್ಕಿನ ಸಮಸ್ಯೆ, ಕಸ್ತೂರಿ ರಂಗನ್ ವರದಿಯಲ್ಲಿ ಪ್ರಸ್ತಾಪಿಸಿದ ಸೂಕ್ಷ್ಮ ಪ್ರದೇಶ, ಅಭಯಾರಣ್ಯ, ಸಿಂಘಳಿಕ ರಕ್ಷಿತ ಪ್ರದೇಶ, ಶರಾವತಿ ಮತ್ತು ಭದ್ರಾ ಅಭಯಾರಣ್ಯ ಜಾರಿಯಿಂದ ಜನಜೀವನಕ್ಕೆ ಆಗುತ್ತಿರುವ ಸಮಸ್ಯೆಗಳ ಕುರಿತು ಕ್ರೂಢೀಕೃತ ಹೋರಾಟ ಅವಶ್ಯ.ಈ ಹಿನ್ನೆಲೆಯಲ್ಲಿ ಜನಜಾಗೃತಿ ಜರುಗಿಸಬೇಕೆಂದು ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಒಕ್ಕೂಟದ ಪ್ರಧಾನ ಸಂಚಾಲಕ ಸುಧೀರ್ ಮರುಳಿ ಪ್ರಾಸ್ತಾವಿಕ ಮಾತನಾಡಿದರು. ಒಕ್ಕೂಟದ ಅಧ್ಯಕ್ಷ ಅನೀಲ್ ಹೊನ್ನಕೊಪ್ಪ ಚಿಕ್ಕಮಂಗಳೂರು, ಹಿರಿಯ ನ್ಯಾಯವಾದಿ ಮನೋರಾಜ್ ಮಂಗಳೂರು, ರೈತ ಮುಖಂಡ ದೇವರಾಜ, ಹಿರಿಯ ಚಿಂತಕ ಎಂ.ಎಲ್. ಮೂರ್ತಿ ಹಾಗೂ ಹಿರಿಯ ಹೋರಾಟಗಾರ ಎಂ.ಜಿ ಹೆಗಡೆ ಮಂಗಳೂರು ಮುಂತಾದವರು ಉಪಸ್ಥಿತರಿದ್ದರು.